ETV Bharat / bharat

ರಾಹುಲ್ ಗಾಂಧಿ ಬಗ್ಗೆ ಆಕ್ಷೇಪಾರ್ಹ ಕಮೆಂಟ್: ಮ್ಯಾಜಿಸ್ಟ್ರೇಟ್​ ಕಚೇರಿಯ ಗುತ್ತಿಗೆ ನೌಕರ ಬಂಧನ - Offensive Comment On X

author img

By ETV Bharat Karnataka Team

Published : Sep 16, 2024, 11:35 AM IST

ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್​ ಕಚೇರಿಯ ಗುತ್ತಿಗೆ ನೌಕರ 'ಎಕ್ಸ್'​ ಖಾತೆಯಲ್ಲಿ ರಾಹುಲ್​ ಗಾಂಧಿ ಅವರನ್ನು 'ಪಪ್ಪು' ಎಂದು ಉಲ್ಲೇಖಿಸಿ ಕಮೆಂಟ್‌ ಮಾಡಿದ್ದನು.

Noida police arrested a contract staffer who made comment on Rahul gandhi
ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್​ ಕಚೇರಿಯ ಗುತ್ತಿಗೆ ನೌಕರ ಬಂಧನ (ETV Bharat)

ನೋಯ್ಡಾ: ಸಾಮಾಜಿಕ ಜಾಲತಾಣ 'ಎಕ್ಸ್'​ನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ಪೋಸ್ಟ್ ಮಾಡಿದ್ದ ಗೌತಮ ಬುದ್ಧ ನಗರ​​ ಜಿಲ್ಲಾ ಮ್ಯಾಜಿಸ್ಟ್ರೇಟ್​ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರನನ್ನು ನೋಯ್ಡಾ ಸೆಕ್ಟರ್​ 20ರ ಪೊಲೀಸರು ಬಂಧಿಸಿದ್ದಾರೆ. ಆಲಿಗಢ ನಿವಾಸಿ ಸೋಹನ್​ ಸಿಂಗ್​ ಬಂಧಿತ ಆರೋಪಿ.

ಡಿಎಂ ಕಚೇರಿಯಲ್ಲಿ ಕೆಲಸ ಮಾಡಲು ಸೋಹನ್​ ಸಿಂಗ್​ನನ್ನು ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಲಾಗಿತ್ತು. ಸೆಪ್ಟೆಂಬರ್​ 13ರಂದು ಜಿಲ್ಲಾ ಮ್ಯಾಜಿಸ್ಟ್ರೇಟ್​ ಮನೀಶ್​ ವರ್ಮಾ ಅವರ 'ಎಕ್ಸ್'​ ಖಾತೆಯಿಂದ ರಾಹುಲ್​ ಗಾಂಧಿ ಅವರನ್ನು 'ಪಪ್ಪು' ಎಂದು ಕರೆದು ಪೋಸ್ಟ್​ ಮಾಡಿದ್ದ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಇದಾದ ಬಳಿಕ ಅಧಿಕಾರಿ ವರ್ಮಾ ತಮ್ಮ 'ಎಕ್ಸ್'​ ಖಾತೆಯನ್ನು ಕೆಲವು ಸಮಾಜವಿರೋಧಿ ಶಕ್ತಿಗಳು ದುರುಪಯೋಗ ಮಾಡಿಕೊಂಡು, ತಪ್ಪಾಗಿ ಕಮೆಂಟ್​ ಮಾಡಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ತಕ್ಷಣವೇ ಎಫ್​ಐಆರ್​ ದಾಖಲಿಸಿ, ಕಾನೂನು ಕ್ರಮ ಕೈಗೊಂಡಿದ್ದೇವೆ. ಸೈಬರ್​ ಘಟಕ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದರು.

ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ ಅವರು ಇತಿಹಾಸಕಾರರೊಂದಿಗೆ ತಮ್ಮ ಚರ್ಚೆಯ ಕ್ಲಿಪ್‌ವೊಂದನ್ನು 'ಎಕ್ಸ್'​ನಲ್ಲಿ ಹಂಚಿಕೊಂಡಿದ್ದರು. ಇತಿಹಾಸ ರಚನೆಯಾಗಿದೆ. ಈಗ ಬದಲಾಯಿಸಲು ಸಾಧ್ಯವಿಲ್ಲ. ನರೇಂದ್ರ ಮೋದಿ ಅವರಿಗೆ ಇತಿಹಾಸ ಹೇಗೆ ನೆನಪಿಸುತ್ತದೆ ಎಂಬುದು ತಿಳಿದಿದೆ. ಇದೇ ಕಾರಣಕ್ಕೆ ಅವರು ಚಿಂತಿತರಾಗಿದ್ದಾರೆ ಎಂದು ಈ ಪೋಸ್ಟ್‌ನಲ್ಲಿ ಬರೆದಿದ್ದರು.

ಇದಕ್ಕೆ ಜಿಲ್ಲಾಧಿಕಾರಿಗಳ 'ಎಕ್ಸ್'​ ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ ಸೋಹನ್​ ಸಿಂಗ್​, 'ನೀವು ನಿಮ್ಮ ಬಗ್ಗೆ ಮತ್ತು ನಿಮ್ಮ ಪಪ್ಪು ಬಗ್ಗೆ ಗಮನ ನೀಡಿ' ಎಂದು ಕಮೆಂಟ್​ ಮಾಡಿದ್ದರು.

ಇದನ್ನೂ ಓದಿ: 'ಪ್ರಧಾನಿ ಹುದ್ದೆಯ ಆಫರ್​ ಬಂದಿತ್ತು, ನಿರಾಕರಿಸಿದೆ': ಸಚಿವ ಗಡ್ಕರಿ ಅಚ್ಚರಿಯ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.