ETV Bharat / bharat

ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಮಹಿಳಾ ನಕ್ಸಲಿಯರು: ಇನ್ನೂ ಹಲವರು ಮೃತಪಟ್ಟಿರುವ ಶಂಕೆ - Naxals encounter

author img

By ANI

Published : Aug 30, 2024, 9:59 AM IST

ಛತ್ತೀಸ್‌ಗಢದಲ್ಲಿ ನಿನ್ನೆ ನಕ್ಸಲರ ವಿರುದ್ಧ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳಾ ನಕ್ಸಲೀಯರು ಹತರಾಗಿದ್ದು ಅವರು ಉತ್ತರ ಬಸ್ತಾರ್ ವಿಭಾಗ ಸಮಿತಿಯ ಸದಸ್ಯರು ಎಂದು ಗುರುತಿಸಲಾಗಿದೆ.

ಎನ್‌ಕೌಂಟರ್‌
ಮಹಿಳಾ ನಕ್ಸಲೀಯರ ಎನ್‌ಕೌಂಟರ್‌ (ANI)

ನಾರಾಯಣಪುರ (ಛತ್ತೀಸ್‌ಗಢ): ಅಬುಜ್ಮದ್‌ನ ದಟ್ಟ ಅರಣ್ಯದಲ್ಲಿ ಮೂವರು ಮಹಿಳಾ ನಕ್ಸಲೀಯರನ್ನು ಭದ್ರತಾಪಡೆ ಗುರುವಾರ ಹೊಡೆದುರುಳಿಸಿದೆ. ಎನ್‌ಕೌಂಟರ್‌ನಲ್ಲಿ ಹತರಾಗಿರುವ ಮೂವರು ಮಹಿಳಾ ನಕ್ಸಲೀಯರು ಉತ್ತರ ಬಸ್ತಾರ್ ವಿಭಾಗ ಸಮಿತಿಯ ಸದಸ್ಯರು ಮತ್ತು ಪಿಎಲ್‌ಜಿಎ ಕಂಪನಿ ಸಂಖ್ಯೆ 5 ಎಂದು ಗುರುತಿಸಲಾಗಿದೆ.

ಡಿಆರ್‌ಜಿ, ಎಸ್‌ಟಿಎಫ್​​​ ಮತ್ತು ಗಡಿ ಭದ್ರತಾ ಪಡೆಗಳ ಜಂಟಿ ತಂಡ ನಾರಾಯಣಪುರ ಅಬುಜ್ಮದ್‌ನ ದಟ್ಟ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿತ್ತು. ಬಳಿಕ ಅಧಿಕಾರಿಗಳಿಂದ ಬಂದ ಮಾಹಿತಿ ಪ್ರಕಾರ 303 ರೈಫಲ್​ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ನಕ್ಸಲ್ ಸಾಮಗ್ರಿಗಳು ಹಾಗೂ 315 ಬೋರ್ ಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

"ನಕ್ಸಲೀಯರ ಚಲನವಲನದ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಮೊದಲಿಗೆ ನಕ್ಸಲೀಯರು ಪೊಲೀಸರ ಮೇಲೆ ಗುಂಡು ಹಾರಿಸಿದ್ದರು. ಭದ್ರತಾಪಡೆ ಶೋಧ ಕಾರ್ಯಾಚರಣೆ ವೇಳೆ ಮಹಿಳೆಯರ ಶವಗಳು ಪತ್ತೆಯಾಗಿದೆ. ಹಾಗೇ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ" ಎಂದು ನಾರಾಯಣಪುರ ಎಸ್ಪಿ ಪ್ರಭಾತ್ ಕುಮಾರ್ ತಿಳಿಸಿದ್ದಾರೆ.

26 ನಕ್ಸಲರ ಶವ ವಶ: "ಬಸ್ತಾರ್ ವಿಭಾಗದ ಅಡಿಯಲ್ಲಿ ಮುಂಗಾರು ಅವಧಿಯಲ್ಲಿ ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಒಟ್ಟು 26 ನಕ್ಸಲೀಯರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. 212 ನಕ್ಸಲರನ್ನು ಬಂಧಿಸಲಾಗಿದೆ ಮತ್ತು 201 ನಕ್ಸಲಿಯರು ಶರಣಾಗಿದ್ದಾರೆ" ಎಂದು ಐಜಿ ಬಸ್ತಾರ್ ಪಿ ಸುಂದರರಾಜ್ ಮಾಹಿತಿ ನೀಡಿದ್ದಾರೆ.

ಹಾಗೇ ನಿನ್ನೆ ನಡೆದಿರುವ ಎನ್‌ಕೌಂಟರ್‌ನಲ್ಲಿ ಇನ್ನೂ ಅನೇಕ ನಕ್ಸಲೀಯರು ಸಾವನ್ನಪ್ಪಿರುವ ಅಥವಾ ಗಾಯಗೊಂಡಿರುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಎನ್‌ಕೌಂಟರ್ ಸ್ಥಳದ ಸುತ್ತಲಿನ ಪ್ರದೇಶದಲ್ಲಿ ಹೆಚ್ಚುವರಿ ಕಾರ್ಯಾಚರಣೆ ನಡೆಯುತ್ತಿದೆ. ಶೊಧ ಪೂರ್ಣಗೊಂಡ ನಂತರ ವಿವರವಾದ ಮಾಹಿತಿಯನ್ನು ವಿವರವಾಗಿ ನೀಡಲಾಗುತ್ತದೆ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಮೂವರು ಉಗ್ರರ ಸದೆಬಡಿದ ಸೇನಾಪಡೆ; ಮುಂದುವರೆದ ಕಾರ್ಯಾಚರಣೆ - JAMMU ENCOUNTER

ETV Bharat Logo

Copyright © 2024 Ushodaya Enterprises Pvt. Ltd., All Rights Reserved.