ರಾಯಪುರ (ಛತ್ತೀಸ್ಗಢ): ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರ ಪತ್ನಿಗೆ ಛತ್ತೀಸ್ಗಢ ಸಿವಿಲ್ ಸೊಸೈಟಿ (ಸಿಸಿಎಸ್) 850 ಕೋಟಿ ರೂ.ಗಳ ಲೀಗಲ್ ನೋಟಿಸ್ ನೀಡಿದೆ.
ಕಳೆದ ಸೋಮವಾರ ನವಜೋತ್ ಸಿಂಗ್ ಸಿಧು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, "ನನ್ನ ಪತ್ನಿ ನವಜೋತ್ ಕೌರ್ ಅವರ ಕ್ಯಾನ್ಸರ್ ಅನ್ನು ವಿಶೇಷ ಡಯಟ್ ಪ್ಲ್ಯಾನ್(ಆಹಾರ ಶೈಲಿ) ಅನುಸರಿಸುವ ಮೂಲಕ ಗುಣಪಡಿಸಲಾಗಿದೆ. ಇದು ಅವರ ಚಿಕಿತ್ಸೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ನಿಂಬೆರಸ, ಅರಿಶಿನ ಮತ್ತು ಬೇವನ್ನು ಒಳಗೊಂಡ ಆಹಾರದಿಂದ ಮಾರಣಾಂತಿಕ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು" ಎಂದು ಹೇಳಿದ್ದರು.
ಈ ಕುರಿತು ಸಿಸಿಎಸ್ ಸಂಚಾಲಕ ಡಾ.ಕುಲದೀಪ್ ಸೋಲಂಕಿ ಪ್ರಕ್ರಿಯಿಸಿ, "ನವಜೋತ್ ಸಿಂಗ್ ಸಿಧು ಅವರು ನೀಡಿರುವ ಹೇಳಿಕೆಗಳು ದಾರಿತಪ್ಪಿಸುವ ಮತ್ತು ಗೊಂದಲಮಯವಾದವುಗಳಾಗಿವೆ. ಇದು ಅಲೋಪತಿ ಔಷಧ ಮತ್ತು ಚಿಕಿತ್ಸೆಯ ಬಗ್ಗೆ ಜನರ ಮನಸ್ಸಿನಲ್ಲಿ ನಕಾರಾತ್ಮಕತೆ ಸೃಷ್ಟಿಸುವ ಸಾಧ್ಯತೆ ಇದೆ. ಅವರ ಈ ಹೇಳಿಕೆ ಕ್ಯಾನ್ಸರ್ ರೋಗಿಗಳು ಅಲೋಪತಿ ಔಷಧಗಳನ್ನು ತೆಗೆದುಕೊಳ್ಳುವುದನ್ನು ಮಧ್ಯದಲ್ಲೇ ನಿಲ್ಲಿಸಲು ಒತ್ತಾಯಿಸುತ್ತಿದೆ. ಇದು ಅವರ ಜೀವಕ್ಕೆ ಅಪಾಯವನ್ನು ತಂದೊಡ್ಡುತ್ತದೆ" ಎಂದು ಹೇಳಿದ್ದಾರೆ.
First of all, we share the joy and happiness of Sidhu's family that Dr Navjot Kaur Sidhu is cured of cancer and is now healthy. Our best wishes for her good health in future too.
— Dr Sudhir Kumar MD DM (@hyderabaddoctor) November 22, 2024
However, to credit diet and healthy lifestyle alone for curing stage 4 metastatic cancer is… pic.twitter.com/s6Knf3wygf
ಸಿಸಿಎಸ್, ನವಜೋತ್ ಕೌರ್ ಸಿಧುಗೆ ತನ್ನ ಪತಿಯ ಹೇಳಿಕೆಗಳ ಬಗ್ಗೆ ಸಾರ್ವಜನಿಕ ಸ್ಪಷ್ಟೀಕರಣವನ್ನು ನೀಡುವಂತೆ ಒತ್ತಾಯಿಸಿದೆ ಮತ್ತು ತಪ್ಪು ಮಾಹಿತಿ ಇತರ ರೋಗಿಗಳ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿದೆ.
ನವಜೋತ್ ಸಿಂಗ್ ಸಿಧು ಅವರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದೆ ಮತ್ತು ಜನರು, ವಿಶೇಷವಾಗಿ ವೈದ್ಯರು ಸಿಧು ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಿಧು ಅವರ ಹೇಳಿಕೆಗಳನ್ನು ಬೆಂಬಲಿಸುವ ಯಾವುದೇ ವೈಜ್ಞಾನಿಕ ದತ್ತಾಂಶ ಲಭ್ಯವಿಲ್ಲ ಮತ್ತು ಕ್ಯಾನ್ಸರ್ ಚಿಕಿತ್ಸೆಗಾಗಿ ವೃತ್ತಿಪರ ವೈದ್ಯಕೀಯ ಸಹಾಯವನ್ನು ಪಡೆಯುವಂತೆ ಸಾರ್ವಜನಿಕರಿಗೆ ವೈದ್ಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಚುನಾವಣಾ ಆಯೋಗದ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ: ವಿವಾದ ಸೃಷ್ಟಿಸಿದ ಕಾಂಗ್ರೆಸ್ ಮುಖಂಡ ಭಾಯ್ ಜಗತಾಪ್ ಹೇಳಿಕೆ