ETV Bharat / bharat

ಇಂದು ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ಪ್ರಧಾನಿ ಮೋದಿ ಭೇಟಿ; ಏನು ವಿಶೇಷತೆ? - Kaziranga National Park

ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 8ರ ರಾತ್ರಿಯನ್ನು ಕಾಜಿರಂಗ ರಾಷ್ಟ್ರೀಯ ಉದ್ಯಾನದ ಕೊಹೊರಾದಲ್ಲಿರುವ ಪೊಲೀಸ್ ಅತಿಥಿ ಗೃಹದಲ್ಲಿ ಕಳೆಯಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
author img

By ETV Bharat Karnataka Team

Published : Mar 8, 2024, 5:45 PM IST

ಕಾಜಿರಂಗ (ಅಸ್ಸೋಂ) : ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಾರ್ಚ್ 8 ) ರಾತ್ರಿಯನ್ನು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಕೊಹೊರಾದಲ್ಲಿರುವ ಪೊಲೀಸ್ ಅತಿಥಿ ಗೃಹದಲ್ಲಿ ಕಳೆಯಲಿದ್ದಾರೆ ಎಂದು ತಿಳಿದು ಬಂದಿದೆ.

ಇದರಿಂದಾಗಿ ಮೋದಿ ಅವರು ಕಾಜಿರಂಗಕ್ಕೆ ಬಂದಿಳಿದ ಮೂರನೇ ಪ್ರಧಾನಿಯಾಗಲಿದ್ದಾರೆ. ಜವಾಹರಲಾಲ್ ನೆಹರೂ ನಂತರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ದೇಶದ ಎರಡನೇ ಪ್ರಧಾನಿಯಾಗಲಿದ್ದಾರೆ. 2018-19ರಲ್ಲಿ ಕಾಜಿರಂಗದ ಕೊಹೊರಾದಲ್ಲಿ ಹಲವು ಟೀಕಾ ಪ್ರಹಾರಗಳ ನಡುವೆ ಆಗ ಅಲ್ಲಿ ಅತಿಥಿ ಗೃಹವನ್ನು ನಿರ್ಮಾಣ ಮಾಡಲಾಗಿತ್ತು. ಪ್ರಸ್ತುತ ರಾಜ್ಯದಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕರಾಗಿರುವ ಗೋಲಘಟ್ಟದ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಮನಬೇಂದ್ರ ಡೆಬ್ರಾಯ್ ಅವರು ಆ ಸಮಯದಲ್ಲಿ ಅನೇಕ ಸವಾಲುಗಳ ನಡುವೆ ಈ ಅತಿಥಿ ಗೃಹವನ್ನು ನಿರ್ಮಾಣ ಮಾಡಿದ್ದರು.

ಆ ಸಮಯದಲ್ಲಿ ಎಸ್ಪಿ ಡೆಬ್ರಾಯ್ ನೇತೃತ್ವದಲ್ಲಿ ಗೋಲಾಘಾಟ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬೋಕಾಖಾಟ್‌ನ ಉಪವಿಭಾಗದ ಪೊಲೀಸ್ ಅಧಿಕಾರಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದರು. ಸುಮಾರು ಒಂದೂವರೆ ವರ್ಷಗಳ ಕಾಲ ಎಸ್ಪಿ ಮನ್ವೇಂದ್ರ ಡೆಬ್ರಾಯ್ ಅವರ ದೈನಂದಿನ ತಪಾಸಣೆಯ ನಂತರ ಇಲ್ಲಿನ ಪೊಲೀಸ್ ಅತಿಥಿ ಗೃಹವನ್ನು ನಿರ್ಮಿಸಲಾಗಿದೆ.

ಅಸ್ಸೋಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರ ಆಡಳಿತದ ಅವಧಿಯಲ್ಲಿ ಅವರು ಕಾಜಿರಂಗಕ್ಕೆ ಬಂದಾಗಲೆಲ್ಲಾ ಈ ಅತಿಥಿ ಗೃಹಕ್ಕೆ ಆಗಮಿಸಿ, ಆಗಾಗ ಇಲ್ಲಿ ತಂಗುತ್ತಿದ್ದರು. ನೈಸರ್ಗಿಕ ಪರಿಸರದಲ್ಲಿ ನಿರ್ಮಿಸಲಾದ ಈ ಅತಿಥಿ ಗೃಹವು ಈಗಾಗಲೇ ವಿಭಿನ್ನ ಮಜಲುಗಳನ್ನು ಹೊಂದಿದೆ. ಇದು ಒಂದು ಕಡೆ ಹತ್ತಿಕುಳಿ ಚಹಾ ತೋಟವಾಗಿದ್ದರೆ ಮತ್ತೆ ಕರ್ಬಿ ಬೆಟ್ಟಗಳ ರಮಣೀಯ ಸೌಂದರ್ಯವು ಸೈಟ್‌ನ ಪ್ರಶಾಂತತೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಈ ಅತಿಥಿ ಗೃಹವು 2022ರಲ್ಲಿ ಭಾರತದ ಅಂದಿನ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅವರು ವಿಶ್ವ ಪರಂಪರೆಯ ತಾಣಕ್ಕೆ ಭೇಟಿ ನೀಡಿದಾಗ ಆತಿಥ್ಯ ವಹಿಸುವ ವಿಶೇಷತೆ ಪಡೆದುಕೊಂಡಿದೆ. ಮುಂದಿನ ವರ್ಷ ಈಗಿನ ಅಧ್ಯಕ್ಷೆ ದ್ರೌಪದಿ ಮುರ್ಮು ಕಾಜಿರಂಗಕ್ಕೆ ಆಗಮಿಸಿ, ಈ ಅತಿಥಿಗೃಹದಲ್ಲಿ ರಾತ್ರಿ ಕಳೆಯಲಿದ್ದಾರೆ.

ಭಾರತ ಸ್ವಾತಂತ್ರ್ಯ ಪಡೆದ ಕೆಲವು ವರ್ಷಗಳ ನಂತರ ಅಂದರೆ 1957ರಲ್ಲಿ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕಾಜಿರಂಗದ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದರು. ನೆಹರೂ ಅವರು ತಮ್ಮ ಪುತ್ರಿ ಇಂದಿರಾಗಾಂಧಿ ಅವರೊಂದಿಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಕೊಹೊರಾ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಬೆನ್ನಿನ ಮೇಲೆ ಕುಳಿತು ಉದ್ಯಾನಕ್ಕೆ ಭೇಟಿ ನೀಡಿ ಗಮನ ಸೆಳೆದಿದ್ದರು.

ನೆಹರೂ ಬಳಿಕ 1978ರಲ್ಲಿ ಇಂದಿರಾ ಗಾಂಧಿ ಕಾಜಿರಂಗಕ್ಕೆ ಭೇಟಿ ನೀಡಿದ್ದರು. ವಿಶೇಷ ಎಂದರೆ ಆ ಸಮಯದಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿರಲಿಲ್ಲ. ಆ ಸಮಯದಲ್ಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಆದರೆ 1988ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಅವರು ಪತ್ನಿ ಸೋನಿಯಾ ಅವರೊಂದಿಗೆ ಕಾಜಿರಂಗಕ್ಕೆ ಭೇಟಿ ನೀಡಿದ್ದರು. ಆದರೆ ಬನಾನಿ ಪ್ರವಾಸಿ ಮಂದಿರದಲ್ಲಿ ಊಟ ಮಾಡಿ ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡದೇ ವಾಪಸಾಗಿದ್ದರು. ಇದೀಗ ನರೇಂದ್ರ ಮೋದಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಅವರು ಭಾರತದ ಮೂರನೇ ಪ್ರಧಾನಿಯಾಗಲಿದ್ದಾರೆ.

ಇದನ್ನೂ ಓದಿ: ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ರಾಯಲ್ ಬೆಂಗಾಲ್ ಹುಲಿ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.