ETV Bharat / bharat

ತಮಿಳುನಾಡು: ನಾಗಪಟ್ಟಿನಂ ಸಂಸದ ಸೆಲ್ವರಾಜ್ ನಿಧನ - Nagapattinam MP Selvaraj - NAGAPATTINAM MP SELVARAJ

ಲೋಕಸಭೆ ಚುನಾವಣೆಗೆ ನಾಲ್ಕನೇ ಹಂತದ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಕಮ್ಯುನಿಸ್ಟ್‌ ಪಕ್ಷದ ಸಂಸದರೊಬ್ಬರು ನಿಧನ ಹೊಂದಿದ್ದಾರೆ.

ನಾಗಪಟ್ಟಿನಂ ಸಂಸದ ಸೆಲ್ವರಾಜ್ ನಿಧನ
ನಾಗಪಟ್ಟಿನಂ ಸಂಸದ ಸೆಲ್ವರಾಜ್ ನಿಧನ (ETV Bharat)
author img

By ETV Bharat Karnataka Team

Published : May 13, 2024, 9:08 AM IST

ಚೆನ್ನೈ: ನಾಗಪಟ್ಟಿನಂ ಲೋಕಸಭಾ ಕ್ಷೇತ್ರದ ಸಂಸದ ಸೆಲ್ವರಾಜ್ (67) ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ್ದಾರೆ.

ಸೆಲ್ವರಾಜ್ ಪರಿಚಯ: ತಿರುವರೂರ್ ಜಿಲ್ಲೆಯ ನೀದಮಂಗಳಮ್‌ನ ಕಪ್ಪಲುಡಯನ್ ಗ್ರಾಮದಲ್ಲಿ 1957ರ ಮಾರ್ಚ್ 16ರಂದು ಸೆಲ್ವರಾಜ್ ಜನಿಸಿದ್ದರು. ಬಾಲ್ಯದಲ್ಲೇ ಕಮ್ಯುನಿಸಂ ಸಿದ್ಧಾಂತ ಬಹುವಾಗಿ ಸೆಳೆದಿತ್ತು. ಹೀಗಾಗಿ ನಂತರದಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷ ಸೇರಿದ್ದರು. ಸತತ ಪರಿಶ್ರಮದ ಬಲದಿಂದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದರು. 1989ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಮೊದಲ ಬಾರಿಗೆ ನಾಗಪಟ್ಟಿನಂ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು.

ಕಮ್ಯುನಿಸ್ಟ್ ಪಕ್ಷದಿಂದ ಲೋಕಸಭಾ ಚುನಾವಣೆಗೆ 6 ಬಾರಿ ಸ್ಪರ್ಧಿಸಿರುವ ಸೆಲ್ವರಾಜ್, 3 ಬಾರಿ ಜಯ ಗಳಿಸಿದ್ದರು. ಭಾರತೀಯ ಕಮ್ಯೂನಿಸ್ಟ್ ಪಕ್ಷದ ರಾಷ್ಟ್ರೀಯ ಸದಸ್ಯನಾಗಿಯೂ ಇವರು ಕೆಲಸ ಮಾಡಿದ್ದಾರೆ.

ಇತ್ತೀಚೆಗೆ, ಉಸಿರಾಟದ ತೊಂದರೆ ಮತ್ತು ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ, ತಿರುವರೂರ್ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಇಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಚೆನ್ನೈನ ಮಿಯಾಟ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು (ಸೋಮವಾರ) ನಸುಕಿನ ಜಾವ ಅಂದಾಜು 2 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಹುಟ್ಟೂರು ನಾಗಪಟ್ಟಿನಂಗೆ ಪಾರ್ಥಿವ ಶರೀರವನ್ನು ರವಾನಿಸಲಾಗಿದೆ.

ಇದನ್ನೂ ಓದಿ: ಚಲಿಸುತ್ತಿದ್ದ ಬೈಕ್​ನಲ್ಲಿ ಕಾಣಿಸಿಕೊಂಡ ಬೆಂಕಿ; ಅಗ್ನಿ ನಂದಿಸುವಾಗ ಟ್ಯಾಂಕ್​ ಸ್ಫೋಟ, 10 ಜನರಿಗೆ ಗಾಯ - Bike Tank Blast

ETV Bharat Logo

Copyright © 2024 Ushodaya Enterprises Pvt. Ltd., All Rights Reserved.