ಮುಂಬೈ, (ಮಹಾರಾಷ್ಟ್ರ): ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಅಪರಿಚಿತ ಕರೆಯೊಂದು ಸಂಚಲನ ಮೂಡಿಸಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ವ್ಯಕ್ತಿಯೊಬ್ಬ ದುರುದ್ದೇಶ ಅಥವಾ ದೊಡ್ಡ ಅನಾಹುತ ನಡೆಸಲು ಮುಂಬೈಗೆ ಬರುತ್ತಿದ್ದಾನೆ ಎಂದು ಅಪರಿಚಿತ ವ್ಯಕ್ತಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ತಿಳಿಸಿದ್ದಾನೆ.
Mumbai Police Alert : ಅಷ್ಟೇ ಅಲ್ಲ ಲಾರೆನ್ಸ್ ಬಿಷ್ಣೋಯ್ ಅವರ ಆಪ್ತರು ದಾದರ್ ರೈಲು ನಿಲ್ದಾಣಕ್ಕೆ ಬರಲಿದ್ದಾರೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾನೆ. ಈ ಸುದ್ದಿ ಕೇಳಿ ಇಡೀ ಪೊಲೀಸ್ ಇಲಾಖೆಯಲ್ಲಿ ಆತಂಕ ಮನೆ ಮಾಡಿದೆ. ಮುಂಬೈ ಪೊಲೀಸ್, ರೈಲ್ವೆ ಪೊಲೀಸ್, ಆರ್‌ಪಿಎಫ್ ಸೇರಿದಂತೆ ಎಲ್ಲ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಪ್ರಸ್ತುತ, ಮುಂಬೈ ಪೊಲೀಸರು ಕರೆ ಮಾಡಿದ ವ್ಯಕ್ತಿ ಮತ್ತು ಅವರ ಸ್ಥಳವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಕಳೆದ ನಾಲ್ಕು ತಿಂಗಳಲ್ಲಿ ಮುಂಬೈ ಪೊಲೀಸರಿಗೆ ಅಪರಿಚಿತ ವ್ಯಕ್ತಿಗಳಿಂದ ಒಟ್ಟು 8 ಸುಳ್ಳು ಕರೆಗಳು ಬಂದಿದ್ದು, ಎರಡು ಬೆದರಿಕೆ ಮೇಲ್‌ಗಳು ಬಂದಿವೆ. ಅಪರಿಚಿತ ವ್ಯಕ್ತಿಯೊಬ್ಬರು ನಿನ್ನೆ ತಡರಾತ್ರಿ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ವ್ಯಕ್ತಿ ಮುಂಬೈಗೆ ಆಗಮಿಸುತ್ತಿದ್ದಾರೆ ಮತ್ತು ದೊಡ್ಡ ಅನಾಹುತವನ್ನೇ ಸೃಷ್ಟಿಸಲಿದ್ದಾರೆ ಎಂದು ಹೇಳಿದ್ದಾನೆ. ಕರೆ ಮಾಡಿದವರು ದಾದರ್ ರೈಲ್ವೆ ನಿಲ್ದಾಣವನ್ನು ಉಲ್ಲೇಖಿಸಿದ್ದರಿಂದ ಮುಂಬೈ ಪೊಲೀಸರು ಜಿಆರ್‌ಪಿ ಮತ್ತು ಆರ್‌ಪಿಎಫ್ ಅನ್ನು ಸಂಪರ್ಕಿಸಿದ್ದಾರೆ.
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದ ವ್ಯಕ್ತಿಯೊಬ್ಬರು ಮುಂಬೈನ ದಾದರ್ ರೈಲು ನಿಲ್ದಾಣಕ್ಕೆ ಬೆಳಗ್ಗೆ 10 ಗಂಟೆಗೆ ಆಗಮಿಸುತ್ತಾರೆ ಎಂದು ಅಪರಿಚಿತ ಕರೆ ಮಾಡಿದವರು ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ವ್ಯಕ್ತಿ ಕೆಂಪು ಶರ್ಟ್ ಧರಿಸಿರುತ್ತಾನೆ ಅಂತಾ ಕ್ಲ್ಯೂ ಸಹ ನೀಡಿದ್ದಾನೆ.
ಬುಧವಾರ, ಸಲ್ಮಾನ್‌ನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಕ್ಯಾಬ್ವೊಂದು ಬಂದಿತು. ಇಲ್ಲಿ ಲಾರೆನ್ಸ್ ಬಿಷ್ಣೋಯ್ ಯಾರು, ಅವರಿಗಾಗಿ ಕ್ಯಾಬ್ ಬಂದಿದೆ ಎಂದು ಚಾಲಕ ಹೇಳಿ್ದ್ದಾನೆ. ಲಾರೆನ್ಸ್ ಬಿಷ್ಣೋಯ್ ಹೆಸರು ಕೇಳಿದ ತಕ್ಷಣ ಅಲ್ಲಿ ಸಂಚಲನ ಉಂಟಾಯಿತು. ಕೂಡಲೇ ಇದರ ಮಾಹಿತಿ ಪೊಲೀಸರಿಗೆ ತಿಳಿಸಲಾಯಿತು. ಪೊಲೀಸರು ಕೂಡಲೇ ಪ್ರಕರಣದ ತನಿಖೆ ಕೈಗೊಂಡರು. ಸಲ್ಮಾನ್ ಅಪಾರ್ಟ್‌ಮೆಂಟ್‌ಗೆ ಕ್ಯಾಬ್ ಕಳುಹಿಸಿದ್ದು ರೋಹಿತ್ ತ್ಯಾಗಿ ಎಂಬುದು ಪೊಲೀಸರಿಗೆ ತನಿಖೆ ಮೂಲಕ ಗೊತ್ತಾಯಿತು. ರೋಹಿತ್ ತ್ಯಾಗಿ ಆನ್‌ಲೈನ್‌ನಲ್ಲಿ ಕ್ಯಾಬ್ ಬುಕ್ ಮಾಡಿದ್ದರು. ಬಳಿಕ ಅವರನ್ನು ಗಾಜಿಯಾಬಾದ್‌ನಲ್ಲಿ ಬಂಧಿಸಲಾಗಿದೆ. ತ್ಯಾಗಿ ಅವರ ಪ್ರಕಾರ, ಅವರು ತಮಾಷೆಗಾಗಿ ಇದನ್ನು ಮಾಡಿದ್ದಾರೆ ಎಂಬುದು ತಿಳಿದು ಬಂದಿತು. ರೋಹಿತ್ ತ್ಯಾಗಿಯನ್ನು ಐಪಿಸಿ ಸೆಕ್ಷನ್ 505 ಮತ್ತು 290 ಅಡಿಯಲ್ಲಿ ಬಂಧಿಸಲಾಗಿದೆ. ಸ್ಥಳೀಯ ನ್ಯಾಯಾಲಯ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.