ETV Bharat / bharat

ಮುಂಬೈ: ಅಕ್ರಮ ಜಾಹೀರಾತು ಫಲಕ ಬಿದ್ದು 16 ಜನ ಸಾವು ಪ್ರಕರಣ, ಆರೋಪಿ ಸೆರೆ - Mumbai Hoarding Collapse - MUMBAI HOARDING COLLAPSE

ದೂಳು ಸಹಿತ ಜೋರಾಗಿ ಬೀಸಿದ ಬಿರುಗಾಳಿಗೆ ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಬೃಹತ್ ಅನಧಿಕೃತ​ ಜಾಹೀರಾತು ಫಲಕ ಬಿದ್ದು 16 ಜನ ಮೃತಪಟ್ಟಿದ್ದರು.

MUMBAI HOARDING CASE  Mumbai police  NDRF  Bhavesh Bhinde
ಆರೋಪಿ ಭವೇಶ್ ಭಿಂಡೆ (ANI)
author img

By ETV Bharat Karnataka Team

Published : May 17, 2024, 8:23 AM IST

ಮುಂಬೈ(ಮಹಾರಾಷ್ಟ್ರ): ವಾಣಿಜ್ಯ ನಗರಿ ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಬೃಹತ್ ಜಾಹೀರಾತು ಫಲಕ ಬಿದ್ದು ಸಂಭವಿಸಿದ ಭಾರೀ ಸಾವು ನೋವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಹೀರಾತು ಫಲಕ ಅಳವಡಿಸಿದ್ದ ಖಾಸಗಿ ಕಂಪನಿಯ ನಿರ್ದೇಶಕ ಭವೇಶ್ ಭಿಂಡೆ ಎಂಬಾತನನ್ನು ಮುಂಬೈ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಹೋರ್ಡಿಂಗ್ ನಿರ್ಮಿಸಿದ ಜಾಹೀರಾತು ಸಂಸ್ಥೆ ಇಗೋ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಭಿಂಡೆಯನ್ನು ಮುಂಬೈ ಪೊಲೀಸರ ಅಪರಾಧ ವಿಭಾಗ ಅರೆಸ್ಟ್​ ಮಾಡಿದೆ. ಸೋಮವಾರ ಮುಂಬೈನಲ್ಲಿ ಧೂಳು ಸಹಿತ ಬೀಸಿದ ಬಿರುಗಾಳಿಗೆ ಜಾಹೀರಾತು ಫಲಕ ಕುಸಿದು ಪೆಟ್ರೋಲ್ ಪಂಪ್‌ ಮೇಲೆ ಬಿದ್ದಿತ್ತು. ಘಟನೆಯಲ್ಲಿ 16 ಜನ ಸಾವನ್ನಪ್ಪಿ, 75ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಎನ್‌ಡಿಆರ್‌ಎಫ್ ಅಧಿಕಾರಿಗಳ ಪ್ರಕಾರ, ಅಕ್ರಮವಾಗಿ ಅಳವಡಿಸಲಾಗಿದ್ದ 120 ಅಡಿ x 120 ಅಡಿ ಜಾಹೀರಾತು ಫಲಕ ಪೆಟ್ರೋಲ್ ಬಂಕ್​ ಬಳಿ ಕುಸಿದಿದೆ. ಘಟನಾ ಸ್ಥಳದಲ್ಲಿ 66 ಗಂಟೆಗಳ ಕಾಲ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆ ಗುರುವಾರ ಬೆಳಿಗ್ಗೆ 10.30ರ ಸುಮಾರಿಗೆ ಮುಕ್ತಾಯಗೊಂಡಿದೆ.

ಇದನ್ನೂ ಓದಿ: ಮಾನ್ಸೂನ್‌ಗೂ ಮುನ್ನ ಸಿಡಿಲು ಬಡಿದು 12 ಸಾವು; ಹಲವು ಕಡೆ ಅಪಾರ ಹಾನಿ - LIGHTNING KILLS 12

ETV Bharat Logo

Copyright © 2025 Ushodaya Enterprises Pvt. Ltd., All Rights Reserved.