ETV Bharat / bharat

ಪತಿ ಇಲ್ಲದ ವೇಳೆ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಮಹಿಳೆ - WOMAN SUICIDE WITH CHILDREN

ಮಹಿಳೆಯೊಬ್ಬರು ಮನೆಯಲ್ಲಿ ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Nov 6, 2024, 7:35 PM IST

ಪುರ್ನಿಯಾ(ಬಿಹಾರ): ಮಹಿಳೆಯೊಬ್ಬರು ಮನೆಯಲ್ಲಿ ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೈಸಾ ಬ್ಲಾಕ್‌ನ ರೌತಾ ಪೊಲೀಸ್ ಠಾಣೆ ವ್ಯಾಪ್ತಿಯ ಕಿಲ್ಪಾಡಾ ಗ್ರಾಮದಲ್ಲಿ ನಡೆದಿದೆ. ಬಬಿತಾ ದೇವಿ (32), ಮಕ್ಕಳಾದ ರಿಯಾ (8), ಸೂರಜ್ (5), ಸುಜಿತ್ (3 ) ಮೃತರು. ಈ ವಿಷಯದ ತಿಳಿದ ಪತಿ ತಲೆಮರೆಸಿಕೊಂಡಿದ್ದಾನೆ.

"ಪತಿ ದೇವಸ್ಥಾನಕ್ಕೆ ಹೋಗಿದ್ದಾಗ ಮಹಿಳೆ ತಮ್ಮ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆಗೆ ಮಾನಸಿಕ ಸಮಸ್ಯೆ ಇತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಎಫ್‌ಎಸ್‌ಎಲ್ ತಂಡವನ್ನು ಸ್ಥಳಕ್ಕೆ ಕರೆಸಲಾಗಿದ್ದು, ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ" ಎಂದು ರೌತಾ ಪೊಲೀಸ್ ಠಾಣಾಧಿಕಾರಿ ಜ್ಞಾನ ರಂಜನ್ ತಿಳಿಸಿದ್ದಾರೆ.

ಇದನ್ನೂ ಓದಿ: ಜ್ಯೋತಿಷಿಯ ಮಾತು ಕೇಳಿ ಪತ್ನಿ ಸೇರಿ ಮೂವರು ಮಕ್ಕಳನ್ನು ಗುಂಡಿಕ್ಕಿ ಕೊಂದ ವ್ಯಕ್ತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.