ETV Bharat / bharat

ಹೈದರಾಬಾದ್​:​ ಮೆಟ್ರೋ ನಿಲ್ದಾಣದ ಬಳಿ ಕಾಣಿಸಿಕೊಂಡ ಚಿರತೆ, ಜನರಲ್ಲಿ ಆತಂಕ - LEOPARD SPOTTED IN MIYAPUR

ಸ್ಟೇಷನ್​ ಹಿಂಬದಿಯ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದ ಕಾರ್ಮಿಕರಿಗೆ ಚಿರತೆ ಕಾಣಿಸಿಕೊಂಡಿದೆ. ಅವರು ತಕ್ಷಣಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Etv Bharat
Etv Bharat (Etv Bharat)
author img

By ETV Bharat Karnataka Team

Published : Oct 19, 2024, 2:49 PM IST

ಹೈದರಾಬಾದ್​: ಇಲ್ಲಿನ ಮಿಯಾಪುರ್​ ಮೆಟ್ರೋ ಸ್ಟೇಷನ್​ ಬಳಿ ಮುಂಜಾನೆ ಚಿರತೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಚಿರತೆ ಕಂಡ ನಿವಾಸಿಗಳು ಮತ್ತು ಈ ಪ್ರದೇಶದ ಕಟ್ಟಡ ನಿರ್ಮಾಣ ಕಾರ್ಮಿಕರು ಗಾಬರಿಗೊಂಡಿದ್ದಾರೆ.

ಸ್ಟೇಷನ್​ ಹಿಂಬದಿಯ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದ ಕಾರ್ಮಿಕರಿಗೆ ಚಿರತೆ ಕಾಣಿಸಿಕೊಂಡಿದೆ. ಅವರು ತಕ್ಷಣಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಚಿರತೆಯ ಚಲನವಲನ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಮರಳಿನ ರಾಶಿ ಮೇಲೆ ಓಡಾಡುತ್ತಿರುವ ಚಿರತೆ ಫೋಟೋವನ್ನು ಪಡೆದು ಅಧಿಕಾರಿಗಳಿಗೆ ನೀಡಿದ್ದಾರೆ. ತಕ್ಷಣಕ್ಕೆ ಅರಣ್ಯ ಅಧಿಕಾರಿಗಳು ಕೂಡ ಪೊಲೀಸರೊಂದಿಗೆ ಸ್ಥಳಕ್ಕೆ ಬಂದಿದ್ದು, ಶೋಧ ಕಾರ್ಯ ನಡೆಸಿದ್ದಾರೆ.

ಪೊಲೀಸ್​ ಮತ್ತು ಅರಣ್ಯ ಅಧಿಕಾರಿಗಳು ಜಂಟಿಯಾಗಿ ಚಿರತೆ ಶೋಧದ ಕಾರ್ಯವನ್ನು ಆರಂಭಿಸಿದರು. ಈ ವೇಳೆ ಚಂದ್ರನಾಯಕ್ ತಾಂಡಾ ಹಾಗೂ ಸಮೀಪದ ಕಾಲೋನಿ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಪರಿಸ್ಥಿತಿ ಹತೋಟಿಗೆ ಬರುವವರೆಗೂ ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಹೋಗದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸದ್ಯ ಲಭ್ಯವಾಗಿರುವ ಚಿರತೆಯ ಕಾಲಿನ ಹೆಜ್ಜೆ ಗುರುತನ್ನು ಅಳೆಯಲಾಗುತ್ತಿದೆ. ಚಿರತೆ ಕಾಲು ಅಳತೆ ಸುಮಾರು 7 ರಿಂದ 7.5 ಸೆಂ.ಮೀ ಇದೆ. ಆದರೆ ಸಿಕ್ಕ ಹೆಜ್ಜೆ ಗುರುತು 3 ರಿಂದ 3.5ಸೆಂ. ಮೀ ಇದ್ದು, ಚಿರತೆ ಹುಡುಕುವ ಪ್ರಯತ್ನ ನಡೆದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಶಂಶಾಬಾದ್ ವಿಮಾನ ನಿಲ್ದಾಣ ಮತ್ತು ವಿಕಾರಾಬಾದ್ ಬಳಿಯ ಪ್ರದೇಶಗಳಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದವು. ಈ ಹಿಂದೆ ಅರಣ್ಯಾಧಿಕಾರಿಗಳು ಅವುಗಳನ್ನು ಹಿಡಿದು ನಲ್ಲಮಲ್ಲಾ ಅರಣ್ಯಕ್ಕೆ ಸ್ಥಳಾಂತರಿಸಿದ್ದರು. ಆದರೆ, ಇದೀಗ ಮಿಯಾಪುರ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಭಯ ಮೂಡಿಸಿದ್ದು, ಆದಷ್ಟು ಬೇಗ ಚಿರತೆಯನ್ನು ಹಿಡಿಯುವಂತೆ ಜನರು ಅಧಿಕಾರಿಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಭಾರತದ ಡ್ರೋನ್ ನಗರವಾಗಲಿದೆ 'ಅಮರಾವತಿ'!; ದೇಶದಲ್ಲಿಯೇ ಮೊದಲ ಬಾರಿಗೆ 5,500 ಡ್ರೋನ್‌ಗಳ ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.