ನಾಗ್ಪುರ (ಮಹಾರಾಷ್ಟ್ರ): ಬಿಜೆಪಿ ನಾಯಕಿ ಸನಾ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಲಭಿಸಿದೆ. ಸನಾ ಖಾನ್ ಹತ್ಯೆಯಾದ ಸ್ಥಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿದೆ. ಆರೋಪಿ ಅಮಿತ್ ಶಾಹು, ಸನಾ ಖಾನ್ ಹೊರತಾಗಿ ಇನ್ನಿಬ್ಬರ ರಕ್ತದ ಕಲೆಗಳು ಇರುವುದು ಬೆಳಕಿಗೆ ಬಂದಿದೆ. ಈ ರಕ್ತದ ಕಲೆಗಳು ಮಹಿಳೆ ಮತ್ತು ಪುರುಷನಿಗೆ ಸೇರಿವೆ. ಆದ್ದರಿಂದ ಆ ಸ್ಥಳದಲ್ಲಿ ಹಂತಕ ಅಮಿತ್ ಶಾಹು ಮತ್ತು ಸನಾ ಖಾನ್ ಹೊರತುಪಡಿಸಿ ಒಬ್ಬ ಪುರುಷ ಮತ್ತು ಮತ್ತೋರ್ವ ಮಹಿಳೆ ಇದ್ದರು. ಸನಾ ಖಾನ್ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕಿಯಾಗಿದ್ದರು. ಸನಾ ಖಾನ್ ಅವರನ್ನು ಕಳೆದ ವರ್ಷ ಆಗಸ್ಟ್ 2 ರಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ಹತ್ಯೆ ಮಾಡಲಾಗಿತ್ತು.
ಅಪರಾಧ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳ ರಕ್ತದ ಕಲೆಗಳು ಪತ್ತೆ: ಜಬಲ್ಪುರದಲ್ಲಿರುವ ಪ್ರಮುಖ ಆರೋಪಿ ಅಮಿತ್ ಸಾಹು ಅವರ ಮನೆಯಲ್ಲಿ ತನಿಖೆ ನಡೆಸುತ್ತಿರುವಾಗ, ನಾಗ್ಪುರ ಪೊಲೀಸರು ವಿಧಿವಿಜ್ಞಾನ ಪರೀಕ್ಷೆಯಲ್ಲಿ ಅಮಿತ್ ಶಾಹು, ಸನಾ ಖಾನ್ ಹೊರತುಪಡಿಸಿ ಇತರ ಇಬ್ಬರ ರಕ್ತದ ಕಲೆಗಳನ್ನು ಪತ್ತೆಹಚ್ಚಿದ್ದಾರೆ. ಆ ರಕ್ತವನ್ನು ಪೊಲೀಸರು ಡಿಎನ್‌ಎ ಪರೀಕ್ಷೆ ನಡೆಸಿದ್ದು, ಅದು ಸನಾ ಖಾನ್ ಮತ್ತು ಅಮಿತ್ ಸಾಹು ಹೊರತುಪಡಿಸಿ ಬೇರೆಯವರದ್ದು ಎಂಬುದು ಬೆಳಕಿಗೆ ಬಂದಿದೆ. ಹಾಗಾದರೆ ಕೊಲೆ ನಡೆದ ಮನೆಯಲ್ಲಿ ಬೇರೆ ಯಾರಾದರೂ ಇದ್ದಾರಾ ಎಂಬ ಪ್ರಶ್ನೆಯೊಂದು ಇದೀಗ ಮೂಡಿದೆ.
ಬೇಸ್‌ಬಾಲ್ ಬ್ಯಾಟ್‌ನಿಂದ ಕೊಲೆ: ಆಗಸ್ಟ್ 2 ರಂದು ಬೆಳಗ್ಗೆ ಅಮಿತ್ ಸಾಹು ಸನಾ ಖಾನ್ ಅವರ ದೇಹವನ್ನು ಬೇಸ್‌ಬಾಲ್ ಬ್ಯಾಟ್‌ನಿಂದ ಹೊಡು ಹತ್ಯೆ ಮಾಡಿ ನಂತರ ಹಿರಾನ್ ನದಿಯಲ್ಲಿ ಎಸೆದಿದ್ದರು. ಆದರೆ, ಅದಕ್ಕೂ ಮುನ್ನ ಅಮಿತ್ ಸಾಹು ಅವರ ಮನೆಗೆ ಬಂದ ಮನೆಗೆಲಸದ ಮಹಿಳೆಯು, ಸನಾ ಖಾನ್ ಶವ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿದ್ದರು. ಈ ವಿಷಯವನ್ನು ಆಕೆ ಪೊಲೀಸರಿಗೆ ತಿಳಿಸಿದ್ದರು. ಆದರೆ, ಆ ಬಳಿಕ ಮನೆಗೆಲಸದ ಮಹಿಳೆ ನಾಪತ್ತೆಯಾಗಿದ್ದಳು. ಎರಡು ದಿನಗಳ ಹಿಂದೆ, ನಾಗ್ಪುರ ಪೊಲೀಸರು ಆಕೆಯನ್ನು ಪತ್ತೆ ಮಾಡಿದ್ದರು. ಸದ್ಯ ಆಕೆಯನ್ನು ಜಬಲ್ಪುರದಿಂದ ನಾಗ್ಪುರಕ್ಕೆ ಕರೆತರಲಾಗಿದೆ.
ಹಲವರ ರಕ್ತ ಪರೀಕ್ಷೆ ಆರಂಭ: ಜಬಲ್‌ಪುರದಲ್ಲಿ ಖಾನ್ ಹತ್ಯೆಯಾದ ಮನೆಯಲ್ಲಿ ಇನ್ನೂ ಇಬ್ಬರ ರಕ್ತದ ಕಲೆಗಳು ಪತ್ತೆಯಾಗಿದ್ದು, ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೊಸದಾಗಿ ಪತ್ತೆಯಾದ ರಕ್ತದ ಕಲೆಗಳು ಯಾರದ್ದು ಎಂಬುದನ್ನು ಕಂಡು ಹಿಡಿಯಲು ನಾಗ್ಪುರ ಪೊಲೀಸರು ಆರೋಪಿ ಅಮಿತ್ ಸಾಹು ಅವರ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರ ರಕ್ತ ಪರೀಕ್ಷೆಯನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ ಆರೋಪಿ ಅಮಿತ್ ಹಾಗೂ ಇತರರ ಕುಟುಂಬಸ್ಥರೂ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಾಹುಲ್ ಮದನೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆಪರೇಷನ್ ಕಮಲ ಆರೋಪ: 2ನೇ ಸಲ ವಿಶ್ವಾಸಮತ ಯಾಚಿಸಿದ ದೆಹಲಿ ಸಿಎಂ ಕೇಜ್ರಿವಾಲ್