ETV Bharat / bharat

ಬಿಎಸ್​ಪಿ ಸಂಯೋಜಕರಾಗಿ ಮಾಯಾವತಿ ಸೋದರಳಿಯ ಆಕಾಶ್ ಆನಂದ್ ಮರು ನೇಮಕ - Mayawati reinstates nephew - MAYAWATI REINSTATES NEPHEW

ಬಿಎಸ್​ಪಿ ಸುಪ್ರಿಮೊ ಮಾಯಾವತಿ ತಮ್ಮ ಸೋದರಳಿಯನನ್ನು ಮತ್ತೆ ಪಕ್ಷಕ್ಕೆ ಕರೆತಂದಿದ್ದಾರೆ.

ಬಿಎಸ್​ಪಿ ಸಂಯೋಜಕರಾಗಿ ಮಾಯಾವತಿ ಸೋದರಳಿಯ ಆಕಾಶ್ ಆನಂದ್ ಮರು ನೇಮಕ
ಬಿಎಸ್​ಪಿ ಸಂಯೋಜಕರಾಗಿ ಮಾಯಾವತಿ ಸೋದರಳಿಯ ಆಕಾಶ್ ಆನಂದ್ ಮರು ನೇಮಕ (IANS)
author img

By ETV Bharat Karnataka Team

Published : Jun 23, 2024, 3:46 PM IST

ಲಕ್ನೋ : ಬಿಎಸ್​ಪಿಯ ರಾಷ್ಟ್ರೀಯ ಸಂಯೋಜಕರಾಗಿ ಆಕಾಶ್ ಆನಂದ್ ಅವರನ್ನು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಭಾನುವಾರ ಮರುನೇಮಿಸಿದ್ದಾರೆ. ಒಂದು ತಿಂಗಳ ಹಿಂದೆ ಆಕಾಶ್ ಆನಂದ್​ ಅವರನ್ನು ಪಕ್ಷದ ಪ್ರಮುಖ ಹುದ್ದೆಯಿಂದ ಸ್ವತಃ ಮಾಯಾವತಿ ತೆಗೆದು ಹಾಕಿದ್ದರು. ಆದರೆ ಸದ್ಯ ಈ ವಿಚಾರದಲ್ಲಿ ಯೂಟರ್ನ್ ಹೊಡೆದಿರುವ ಮಾಯಾವತಿ, ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಗೆ ಮರುಸ್ಥಾಪಿಸಿದ್ದಾರೆ ಮತ್ತು ಅವರನ್ನು ಮತ್ತೊಮ್ಮೆ ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಹೆಸರಿಸಿದ್ದಾರೆ.

ಲೋಕಸಭಾ ಚುನಾವಣಾ ಪ್ರಚಾರದ ಮಧ್ಯೆ ಮಾಯಾವತಿ ಆಕಾಶ್ ಆನಂದ್ ಅವರನ್ನು ಪಕ್ಷದ ಹುದ್ದೆಯಿಂದ ತೆಗೆದು ಹಾಕಿದ್ದರು ಮತ್ತು ಅವರು ಪ್ರಬುದ್ಧರಾದ ನಂತರ ತಮ್ಮ ನಿರ್ಧಾರ ಬದಲಾಯಿಸುವುದಾಗಿ ಹೇಳಿದ್ದರು.

ಆದರೆ ಈಗ ತಮ್ಮ ಸೋದರಳಿಯನನ್ನು ಮುಂಬರುವ ಉತ್ತರಾಖಂಡ ವಿಧಾನಸಭಾ ಉಪಚುನಾವಣೆಯ ಸ್ಟಾರ್ ಪ್ರಚಾರಕರಲ್ಲಿ ಒಬ್ಬರೆಂದು ಅವರು ಹೆಸರಿಸಿದ್ದಾರೆ. ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಆಕಾಶ್ ಆನಂದ್ ಅವರ ಆಕ್ರಮಣಕಾರಿ ಭಾಷೆಯ ಬಗ್ಗೆ ಟೀಕೆಗಳು ವ್ಯಕ್ತವಾದ ನಂತರ ಮಾಯಾವತಿ ಅವರನ್ನು ಹುದ್ದೆಯಿಂದ ತೆಗೆದುಹಾಕುವ ನಿರ್ಧಾರ ತೆಗೆದುಕೊಂಡಿದ್ದರು. ಕೇಂದ್ರ ಸರ್ಕಾರವನ್ನು ಭಯೋತ್ಪಾದಕರ ಸರ್ಕಾರ ಎಂದು ಕರೆದ ಅವರ ವಿರುದ್ಧ ಸೀತಾಪುರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

"ಈ ಸರ್ಕಾರವು ಬುಲ್ಡೋಜರ್ ಮತ್ತು ದೇಶದ್ರೋಹಿಗಳ ಸರ್ಕಾರವಾಗಿದೆ. ತನ್ನ ಯುವಕರನ್ನು ಹಸಿವಿನಿಂದ ಸಾಯಿಸುವ ಮತ್ತು ತನ್ನ ಹಿರಿಯರನ್ನು ಗುಲಾಮರನ್ನಾಗಿ ಮಾಡುವ ಭಯೋತ್ಪಾದಕ ಸರ್ಕಾರವಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ರೀತಿಯಲ್ಲೇ ಈ ಸರ್ಕಾರವೂ ಇದೆ" ಎಂದು ಅವರು ಸೀತಾಪುರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದರು.

ಆನಂದ್ ಅವರಲ್ಲದೆ, ಬಿಎಸ್ ಪಿ ಅಭ್ಯರ್ಥಿಗಳಾದ ಮಹೇಂದ್ರ ಯಾದವ್, ಶ್ಯಾಮ್ ಅವಸ್ಥಿ ಮತ್ತು ಅಕ್ಷಯ್ ಕಲ್ರಾ ಮತ್ತು ರ್ಯಾಲಿ ಸಂಘಟಕ ವಿಕಾಸ್ ರಾಜವಂಶಿ ವಿರುದ್ಧ ಸೀತಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಪ್ರಸ್ತುತ, 2024 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲನ್ನು ಪರಾಮರ್ಶಿಸಲು ಬಿಎಸ್​ಪಿ ಮುಖ್ಯಸ್ಥೆ ಭಾನುವಾರ ಸಭೆ ಕರೆದಿದ್ದರು. ಬಿಎಸ್​ಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯವಾಗಿ ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವು ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲವೇಕೆ ಎಂಬ ಬಗ್ಗೆ ಚರ್ಚಿಸಲಾಯಿತು. ಮುಂಬರುವ 2027 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಜಯದ ಕಡೆಗೆ ಮುನ್ನಡೆಸುವುದು ಹೇಗೆ ಎಂಬ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಮಾಯಾವತಿ ಆಕಾಶ್ ಆನಂದ್ ಅವರನ್ನು ಮರಳಿ ಪಕ್ಷದ ಹುದ್ದೆಗೆ ನೇಮಿಸುವ ನಿರ್ಧಾರವನ್ನು ಪ್ರಕಟಿಸಿದರು. ಲೋಕಸಭಾ ಚುನಾವಣೆಯಲ್ಲಿ ಬಿಎಸ್​ಪಿಯ ಕಳಪೆ ಪ್ರದರ್ಶನದ ನಂತರ, ಆಕಾಶ್ ಆನಂದ್ ಅವರನ್ನು ಪಕ್ಷಕ್ಕೆ ಮರಳಿ ಕರೆತರಬೇಕೆಂದು ಕಾರ್ಯಕರ್ತರು ಬಲವಾಗಿ ಪ್ರತಿಪಾದಿಸುತ್ತಿದ್ದರು.

ಇದನ್ನೂ ಓದಿ : ಮಗುವಿನೊಂದಿಗೆ ಹೆದ್ದಾರಿ ಬದಿ ವಾಸಿಸುತ್ತಿದ್ದ ಮಾನಸಿಕ ಅಸ್ವಸ್ಥೆ ಮತ್ತೆ ಕುಟುಂಬ ಸೇರ್ಪಡೆ - Woman Child Rescued

ETV Bharat Logo

Copyright © 2024 Ushodaya Enterprises Pvt. Ltd., All Rights Reserved.