ETV Bharat / bharat

ಮರಾಠರಿಗೆ ಒಬಿಸಿ ಮೀಸಲಾತಿ ಘೋಷಿಸಿದ ಸಿಎಂ ಶಿಂಧೆ: ಉಪವಾಸ ಸತ್ಯಾಗ್ರಹ ಕೈಬಿಟ್ಟ ಹೋರಾಟಗಾರರು

ಸರ್ಕಾರ ಭರವಸೆ ನೀಡಿದ ಬಳಿಕ, ಮರಾಠ ಮೀಸಲಾತಿಗಾಗಿ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಳ್ಳಲಾಗಿದೆ.

ಮರಾಠರಿಗೆ ಒಬಿಸಿ ಮೀಸಲಾತಿ
ಮರಾಠರಿಗೆ ಒಬಿಸಿ ಮೀಸಲಾತಿ
author img

By ETV Bharat Karnataka Team

Published : Jan 27, 2024, 4:20 PM IST

ಮುಂಬೈ (ಮಹಾರಾಷ್ಟ್ರ) : ಮರಾಠಿ ಮೀಸಲಾತಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಮನೋಜ್ ಜಾರಂಗೆ ನೇತೃತ್ವದಲ್ಲಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಶನಿವಾರ ಹಿಂಪಡೆಯಲಾಗಿದೆ. ಸಿಎಂ ಏಕನಾಥ್​ ಶಿಂಧೆ ಅವರು ಧರಣಿ ಸ್ಥಳಕ್ಕೆ ಆಗಮಿಸಿ, ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿದೆ ಎಂದು ಭರವಸೆ ನೀಡಿದ, ಬಳಿಕ ಹೋರಾಟವನ್ನು ಕೊನೆಗೊಳಿಸಲಾಗಿದೆ.

ಮರಾಠರಿಗೆ ಒಬಿಸಿ ಸ್ಥಾನಮಾನ ನೀಡಬೇಕು ಎಂದು 46 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಕಳೆದ 6 ತಿಂಗಳಿನಿಂದ ಮನೋಜ್​ ಜಾರಂಗೆ ನೇತೃತ್ವದಲ್ಲಿ ಪ್ರತಿಭಟನೆ ಜೋರಾಗಿ ನಡೆಯುತ್ತಿದೆ. ಶುಕ್ರವಾರದಿಂದ ಅವರು ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇದರ ಬೆನ್ನಲ್ಲೇ ಸರ್ಕಾರ ಬೇಡಿಕೆಗೆ ಸ್ಪಂದಿಸಿದೆ.

ಜ್ಯೂಸ್​ ಕುಡಿಸಿದ ಸಿಎಂ: ಶನಿವಾರ ಬೆಳಗ್ಗೆ 10.45ರ ಸುಮಾರಿಗೆ ಸಿಎಂ ಏಕನಾಥ್​ ಶಿಂಧೆ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಜಾರಂಗೆ ಅವರ ಜೊತೆ ಮಾತುಕತೆ ನಡೆಸಿದರು. ಸರ್ಕಾರ ಮರಾಠರ ಪರವಾಗಿದೆ. ಮೀಸಲಾತಿ ಕೊಡಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಬಳಿಕ ತಮ್ಮ ಕೈಯಿಂದಲೇ ಜ್ಯೂಸ್ ನೀಡುವ ಮೂಲಕ ಉಪವಾಸ ಅಂತ್ಯಗೊಳಿಸಲು ಕೋರಿದರು. ಜಾರಂಗೆ ಅವರು ಜ್ಯೂಸ್​ ಸೇವಿಸಿ ಉಪವಾಸ ವಾಪಸ್​ ಪಡೆದರು.

ಈ ವೇಳೆ ಮಾತನಾಡಿದ ಹೋರಾಟಗಾರ ಮನೋಜ್​ ಜಾರಂಗೆ ಅವರು, ಮರಾಠ ಸಮುದಾಯವನ್ನು ಇತರ ಹಿಂದುಳಿದ ವರ್ಗಗಳ (ಒಬಿಸಿ) ವರ್ಗಕ್ಕೆ ಸೇರಿಸಲು ಮತ್ತು ಶಿಕ್ಷಣ, ಸಾಮಾಜಿಕ, ರಾಜಕೀಯ ಮೀಸಲಾತಿ ನೀಡುವ ಬಗ್ಗೆ ಆಶ್ವಾಸನೆ ನೀಡಿದೆ. ನಮ್ಮ ಎಲ್ಲ ಬೇಡಿಕೆಗಳನ್ನು ಅಂಗೀಕರಿಸಿರುವುದರಿಂದ ಧರಣಿಯನ್ನು ಹಿಂಪಡೆಯುತ್ತಿರುವುದಾಗಿ ಘೋಷಿಸಿದರು.

ಇದೇ ವೇಳೆ ಮಾತನಾಡಿದ ಸಿಎಂ ಶಿಂಧೆ, ಮರಾಠರಿಗೆ ಮೀಸಲಾತಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ನೇಮಕಗೊಂಡ ನ್ಯಾಯಮೂರ್ತಿ ಸಂದೀಪ್ ಶಿಂಧೆ (ನಿವೃತ್ತ) ಸಮಿತಿಯ ಅವಧಿಯನ್ನು ವಿಸ್ತರಿಸಲಾಗುವುದು. ಸಮುದಾಯವು ಒಗ್ಗಟ್ಟಾಗಿ ತನ್ನ ಹಕ್ಕುಗಳಿಗಾಗಿ ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.

ಅಧಿಸೂಚನೆ ಪ್ರಕಟ, ಕೇಸ್​ ವಾಪಸ್​​ಗೆ ಆಗ್ರಹ: ಉಪವಾಸ ಸತ್ಯಾಗ್ರಹ ಆರಂಭಿಸಿದ ಮನೋಜ್​ ಜಾರಂಗೆ ಮತ್ತು ಸರ್ಕಾರದ ಪರವಾಗಿ ಸಚಿವರ ನಿಯೋಗದ ಮಧ್ಯೆ ಶುಕ್ರವಾರ ರಾತ್ರಿ ವಿಸ್ತೃತ ಚರ್ಚೆಗಳು ನಡೆದವು. ಸರ್ಕಾರವು ಮರಾಠ ಮೀಸಲಾತಿ ನೀಡುವ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿತು. ಅದರ ಪ್ರತಿಯನ್ನು ಜಾರಂಗೆ ಅವರಿಗೆ ಮಧ್ಯರಾತ್ರಿ 2 ಗಂಟೆಗೆ ಹಸ್ತಾಂತರಿಸಲಾಯಿತು.

ಬಳಿಕ 6 ತಿಂಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಸಮುದಾಯದವರ ವಿರುದ್ಧ ದಾಖಲಾಗಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಯಿತು. ಇದನ್ನು ಸರ್ಕಾರವೂ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಮರಾಠ ಹೋರಾಟಗಾರರು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಸರ್ಕಾರದ ಭರವಸೆ ಬಳಿಕ ಅಂತ್ಯವಾಗಿತ್ತು.

ಇದನ್ನೂ ಓದಿ: ಮರಾಠ ಮೀಸಲಾತಿಗೆ ಸಿಎಂ ಶಿಂಧೆ ಭರವಸೆ: ಮನೋಜ್​ ಜಾರಂಗೆ 16 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.