ETV Bharat / bharat

ಕಾಶ್ಮೀರದ ವಾತಾವರಣ ಸೃಷ್ಟಿಸಿ ಕೇಸರಿ ಬೆಳೆದ ಅಣ್ಣ ತಂಗಿ: ಲಕ್ಷಾಂತರ ಆದಾಯದ ನಿರೀಕ್ಷೆ

ವಿಶೇಷ ತರಬೇತಿ ಪಡೆದು ತಮ್ಮದೇ ಊರಲ್ಲಿ ಕಾಶ್ಮೀರದ ತಾಪಮಾನವನ್ನು ಸೃಷ್ಟಿಸಿ ಅಣ್ಣ, ತಂಗಿ ಕೇಸರಿ ಕೃಷಿಯಲ್ಲಿ ತೊಡಗಿದ್ದಾರೆ.

ludhiana brother and sister are cultivating saffron
ಲೂಧಿಯಾನದಲ್ಲಿ ಅಣ್ಣ-ತಂಗಿಯ ಕೇಸರಿ ಕೃಷಿ (ETV Bharat)
author img

By ETV Bharat Karnataka Team

Published : Oct 25, 2024, 4:13 PM IST

Updated : Oct 25, 2024, 6:37 PM IST

ಲೂಧಿಯಾನ(ಪಂಜಾಬ್​): ಉದ್ಯೋಗ, ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಹೆಚ್ಚು ಹಣ ಸಂಪಾದನೆಗಾಗಿ ಯುವಕರು ವಿದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಪಂಜಾಬ್‌ನ ಅಣ್ಣ, ತಂಗಿ ಇಬ್ಬರು ತಮ್ಮೂರಲ್ಲೇ ಇದ್ದು ಲಕ್ಷಾಂತರ ರೂಪಾಯಿ ಆದಾಯದ ಕೃಷಿಗೆ ಕೈಹಾಕಿದ್ದಾರೆ. ಲೂಧಿಯಾನದ ಪುಲ್ಹೋವಲ್​ವಾಲ್​ನ ಅಣ್ಣ ಶಂಕರ್​ ಹಾಗೂ ತಂಗಿ ಆಸ್ತಿಕಾ ಇಬ್ಬರು ಸೇರಿ ತಮ್ಮ ಊರಲ್ಲಿಯೇ ಕೇಸರಿ ಕೃಷಿ ಮಾಡಿ, ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ, ವಿದೇಶಕ್ಕೂ ಕೇಸರಿ ಪೂರೈಸುವ ಯೋಜನೆ​ ಮಾಡಿದ್ದಾರೆ.

ಮುಖ್ಯವಾಗಿ, ಕಾಶ್ಮೀರದಲ್ಲಿ ಕೇಸರಿ ಕೃಷಿ ಮಾಡಲಾಗುತ್ತದೆ. ಯಾಕೆಂದರೆ ಕೇಸರಿ ಕೃಷಿಗೆ ಸೂಕ್ತ ವಾತಾವರಣದ ಬೇಕು. ಅಂದರೆ 10 ಡಿಗ್ರಿ ಸೆಲ್ಸಿಯಸ್​ಗಿಂತ ಕಡಿಮೆ ತಾಪಮಾನದ ಅಗತ್ಯವಿದೆ. ಆ ತಾಪಮಾನ ಕಾಶ್ಮೀರದಲ್ಲಿದ್ದು, ಹೆಚ್ಚಾಗಿ ಅಲ್ಲಿಯೇ ಕೇಸರಿಯನ್ನು ಬೆಳೆಯಲಾಗುತ್ತದೆ. ಆದರೆ ಈ ಅಣ್ಣ ತಂಗಿ ಇಬ್ಬರು ಪಂಜಾಬ್​ನ ತಮ್ಮ ಊರಲ್ಲಿ ಅಷ್ಟೇ ತಾಪಮಾನವನ್ನು ಸೃಷ್ಟಿಸಿ ಕೇಸರಿ ಕೃಷಿ ಪ್ರಾರಂಭಿಸಿದ್ದಾರೆ. ಆಗಸ್ಟ್​ ತಿಂಗಳಿನಲ್ಲಿ ಕೇಸರಿ ಬೀಜ ತಂದು ಕೃಷಿಯನ್ನು ಆರಂಭಿಸಿದ್ದು, ಅಕ್ಟೋಬರ್​ ತಿಂಗಳಲ್ಲಿ ಫಸಲು ಕೈಗೆ ಬರಲು ಪ್ರಾರಂಭಿಸಿದೆ.

ಲೂಧಿಯಾನದಲ್ಲಿ ಅಣ್ಣ-ತಂಗಿಯ ಕೇಸರಿ ಕೃಷಿ (ETV Bharat)

ಶಂಕರ್​ ಹಾಗೂ ಆಸ್ತಿಕಾ ಇಬ್ಬರೂ ಪದವೀಧರರು. ಇಬ್ಬರೂ ತಂದೆಯ ಪ್ರೇರಣೆಯಿಂದ ಕೇಸರಿ ಕೃಷಿ ಮಾಡುತ್ತಿದ್ದಾರೆ. "ವಿದೇಶಕ್ಕೆ ಹೋಗಿ ಹಣ ಗಳಿಸಲು ಆಸೆಯುಳ್ಳವರು ತಮ್ಮ ಸ್ವಂತ ನಗರ ಮತ್ತು ದೇಶದಲ್ಲೇ ಇದ್ದು ಉತ್ತಮ ಹಣ, ಲಾಭ ಗಳಿಸಬಹುದು" ಎನ್ನುತ್ತಾರೆ ಈ ಅಣ್ಣ ತಂಗಿ.

"ಹೊರದೇಶಗಳಲ್ಲೂ ಕೇಸರಿಗೆ ಬೇಡಿಕೆ ಹೆಚ್ಚಿದೆ. ಸದ್ಯ ನಾವು ನಮ್ಮ ದೇಶದಲ್ಲೇ ಪ್ರತಿ ಗ್ರಾಂಗೆ 800 ರೂ.ನಂತೆ ಮಾರಾಟ ಮಾಡುತ್ತಿದ್ದೇವೆ. ವಿದೇಶಕ್ಕೆ ಮಾರಾಟ ಮಾಡುವುದು ನಮ್ಮ ಮುಖ್ಯ ಉದ್ದೇಶ. ವಿದೇಶಗಳಿಂದಲೂ ಆರ್ಡರ್​ಗಳು ಬರಲಾರಂಭಿಸಿದ್ದು, ಹೆಚ್ಚು ಆದಾಯ ಗಳಿಸುವ ನಿರೀಕ್ಷೆಯಿದೆ" ಎಂದು ಅವರು ತಿಳಿಸಿದರು.

ಕೇಸರಿ ಕೃಷಿ ಹೇಗೆ?: "ಕೇಸರಿ ಕೃಷಿಗೆ ಸೂಕ್ತ ತಾಪಮಾನ ಬೇಕಾಗುತ್ತದೆ. 10 ಡಿಗ್ರಿ ಸೆಲ್ಸಿಯಸ್​ಗಿಂತ ಕಡಿಮೆ ತಾಪಮಾನದಲ್ಲಿ ಮಾತ್ರ ಕೇಸರಿ ಕೃಷಿ ಮಾಡಲು ಸಾಧ್ಯ. ಹಾಗಾಗಿ ಅಂತಹ ತಾಪಮಾನ ಹೊಂದಿರುವ ಕಾಶ್ಮೀರದಲ್ಲಿ ಹೆಚ್ಚಾಗಿ ಕೇಸರಿ ಕೃಷಿ ಮಾಡಲಾಗುತ್ತದೆ. ಈಗ ಅಲ್ಲಿಯೂ ತಾಪಮಾನ ಏರಿಕೆಯಾಗತೊಡಗಿದೆ. ಕೇಸರಿಗೆ ವಿವಿಧ ಹಂತಗಳಲ್ಲಿ ವಿಭಿನ್ನ ತಾಪಮಾನಗಳು ಬೇಕಾಗುತ್ತವೆ. ಗಿಡಗಳು ಚಿಕ್ಕದಾಗಿರುವಾಗ ತಾಪಮಾನವನ್ನು 5 ಡಿಗ್ರಿ ಸೆಲ್ಸಿಯಸ್​ಗೆ ಮಾಡಬೇಕು. ಇದಕ್ಕಾಗಿ ನಾವು 14/45 ಅಳತೆಯ ಒಳಾಂಗಣ ಕೊಠಡಿ ನಿರ್ಮಿಸಿದ್ದೇವೆ. ಅದರೊಳಗೆ ಸ್ವಲ್ಪವೂ ಗಾಳಿ ಬರದಂತೆ ವ್ಯವಸ್ಥೆ ಮಾಡಲಾಗಿದೆ. ಇಂತಹ ವ್ಯವಸ್ಥೆಯಲ್ಲಿ ಸುಲಭವಾಗಿ ಕೇಸರಿ ಬೆಳೆಸಬಹುದು" ಎಂದು ಆಸ್ತಿಕಾ ಹಾಗೂ ಶಂಕರ್​ ಮಾಹಿತಿ ನೀಡಿದರು.

ಕೃಷಿಗೆ ತಗುಲಿದ ವೆಚ್ಚವೆಷ್ಟು?: "ಈ ಕೃಷಿಗೆ ಇಲ್ಲಿಯವರೆಗೆ ಸುಮಾರು 50 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ. ಆದರೆ ಕಡಿಮೆ ವೆಚ್ಚದಲ್ಲಿ ಇದನ್ನು ಮಾಡಬಹುದು. 5 ಲಕ್ಷ ರೂ.ನಿಂದ ಪ್ರಾರಂಭಿಸಬಹುದು. ಮತ್ತು ಹೆಚ್ಚಿನ ಸ್ಥಳಾವಕಾಶದ ಅಗತ್ಯವಿಲ್ಲ. ಇಲ್ಲಿ ನಾವು ಇಡೀ ಯೋಜನೆಗೆ ದೊಡ್ಡ ಹವಾನಿಯಂತ್ರಣವನ್ನು ಅಳವಡಿಸಿದ್ದೇವೆ. ಆದರೆ ಮನೆಯಲ್ಲಿ ಎಸಿ ಇದ್ದರೂ ತಾಪಮಾನವನ್ನು ಸ್ಥಿರವಾಗಿ ಇಟ್ಟು, ಅದರಲ್ಲಿಯೂ ಕೇಸರಿ ಕೃಷಿ ಮಾಡಬಹುದು. ಕೇಸರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಈ ಬೆಳೆಗೆ ವಿಶೇಷ ಕಾಳಜಿ ಅಗತ್ಯ. ಇದಕ್ಕೆ ಬೆಳಕು ಬಹಳ ಮುಖ್ಯ. ಹಳದಿ ಬೆಳಕನ್ನು ಸೂರ್ಯನ ಬೆಳಕಿನಂತೆ ಕೇಸರಿಗೆ ನೀಡಬಹುದು. ಮತ್ತೊಂದೆಡೆ, ನೇರಳೆ ದೀಪಗಳು ಕೇಸರಿ ಹೂವಿಗೆ ಆ ಬಣ್ಣವನ್ನು ನೀಡುತ್ತದೆ" ಎಂದು ಹೇಳಿದರು.

ಇರಾನ್​ನಲ್ಲಿ ವಿಶೇಷ ತರಬೇತಿ: "ಚಂಡೀಗಢ ಹಾಗೂ ಇರಾನ್​ಗೆ ಹೋಗಿ ಕೇಸರಿ ಬೆಳೆಯುವ ವಿಶೇಷ ತರಬೇತಿಯನ್ನು ಪಡೆದೆವು. ಮಾತ್ರವಲ್ಲ ಇದಕ್ಕೆ ಬೇಕಾದ ಬೀಜಗಳನ್ನು ದುಬಾರಿ ಬೆಲೆ ನೀಡಿ ತಂದಿದ್ದೇವೆ. ಈ ಬಾರಿ ಒಂದೂವರೆಯಿಂದ ಎರಡೂವರೆ ಕಿಲೋ ಕೇಸರಿ ಫಸಲು ಪಡೆಯುವ ನಿರೀಕ್ಷೆ ಇದೆ. ಅದರ ಪ್ಯಾಕಿಂಗ್​ ಮಾಡುವಂತಹ ಕೆಲವು ಕಾರ್ಮಿಕರನ್ನೂ ನಾವು ನೇಮಿಸಿಕೊಂಡಿದ್ದೇವೆ. ನಗರದಲ್ಲಿದ್ದರೂ, ಸಣ್ಣ ಜಾಗದಲ್ಲಾದರೂ ಈ ಕೃಷಿಯನ್ನು ಮಾಡಬಹುದು. ಆದರೆ ಅದರ ಬಗ್ಗೆ ನಾವು ತಿಳಿದುಕೊಳ್ಳಬೇಕಷ್ಟೇ" ಎನ್ನುತ್ತಾರೆ ಈ ಸಹೋದರ- ಸಹೋದರಿ.

"ವಿದೇಶಕ್ಕೆ ಹೋಗುವ ಬದಲು ನಿಮ್ಮ ಊರಲ್ಲೇ ವ್ಯಾಪಾರ ಮಾಡಿ. ನಮ್ಮನ್ನು ನಾವು ಇತರರಿಗೆ ಮಾದರಿಯಾಗಿ ಮಾಡಬೇಕು ಎಂದುಕೊಂಡೆವು. ನಮ್ಮನ್ನು ನೋಡಿ ಇತರ ಯುವಕರು ಕೂಡ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಆಸೆ ನಮ್ಮದು. ಮೊದಲಿನಿಂದಲೂ ತಂದೆಗೆ ಕೃಷಿಯೆಂದರೆ ಒಲವು. ಮತ್ತು ಅದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡು ಅದನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಕಾರಣ, ನಮ್ಮ ಕನಸಿಗೆ ಮನೆಯವರಿಂದಲೂ ಸಂಪೂರ್ಣ ಬೆಂಬಲ ಸಿಕ್ಕಿತು. ವಿದೇಶಕ್ಕೆ ಹೋಗಲು ಹಣ ಖರ್ಚು ಮಾಡುವ ಬದಲು ಭಾರತದಲ್ಲಿಯೇ ಇದ್ದುಕೊಂಡು ಸ್ವಂತ ಕೆಲಸ ಮಾಡಿಕೊಂಡರೆ ಇದರಲ್ಲಿಯೂ ಸಾಕಷ್ಟು ಯಶಸ್ಸು ಸಾಧಿಸಬಹುದು" ಎನ್ನುವ ಕಿವಿಮಾತು ಈ ಯುವ ಕೃಷಿಕರದ್ದು.

ಇದನ್ನೂ ಓದಿ: ಕಾಶ್ಮೀರದಲ್ಲಿ ಬೆಳೆಯುವ ಕೇಸರಿ ಬೆಣ್ಣೆನಗರಿಯಲ್ಲಿ ಬೆಳೆದ ಯುವಕ: ಇಲ್ಲಿದೆ ಸಕ್ಸಸ್​ ಸ್ಟೋರಿ!

Last Updated : Oct 25, 2024, 6:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.