ಲಖನೌ (ಉತ್ತರಪ್ರದೇಶ) : ವಿಪಕ್ಷಗಳ ಇಂಡಿಯಾ ಕೂಟದಲ್ಲಿ ಸೀಟು ಹಂಚಿಕೆ ಸೂತ್ರ ಅಂತಿಮವಾಗುವ ಮೊದಲೇ ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ನೇತೃತ್ವದ ಸಮಾಜವಾದಿ ಪಕ್ಷ (ಎಸ್ಪಿ) ಮುಂಬರುವ ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನೇ ಅಖೈರುಗೊಳಿಸಿದೆ. ಅಖಿಲೇಶ್ ಅವರ ಪತ್ನಿ ಸೇರಿದಂತೆ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ಪಕ್ಷ ಬಿಡುಗಡೆ ಮಾಡಿದೆ.
- — Samajwadi Party (@samajwadiparty) January 30, 2024 " class="align-text-top noRightClick twitterSection" data="
— Samajwadi Party (@samajwadiparty) January 30, 2024
">— Samajwadi Party (@samajwadiparty) January 30, 2024
ಅಖಿಲೇಶ್ ಪತ್ನಿ, ಹಾಲಿ ಸಂಸದೆಯಾಗಿರುವ ಡಿಂಪಲ್ ಯಾದವ್ ತಮ್ಮ ಕ್ಷೇತ್ರವಾದ ಮೈನ್ಪುರಿಯಿಂದ ಮರು ಆಯ್ಕೆ ಬಯಸಿದ್ದಾರೆ. ಇದಲ್ಲದೇ ಸಂಭಾಲ್ ಕ್ಷೇತ್ರದಿಂದ ಪಕ್ಷದ ನಾಯಕ ಶಫೀಕರ್ ರಹಮಾನ್ ಬರ್ಕೆ ಅವರಿಗೆ ಟಿಕೆಟ್ ನೀಡಲಾಗಿದೆ.
ಉಳಿದಂತೆ ಫಿರೋಜಾಬಾದ್ನಿಂದ ಅಕ್ಷಯ್ ಯಾದವ್, ಖೇರಿಯಿಂದ ಉತ್ಕರ್ಷ್ ವರ್ಮಾ, ಎತಾಹ್ ಕ್ಷೇತ್ರಕ್ಕೆ ದೇವೇಶ್ ಶಕ್ಯಾ, ಧೌರಾಹರಾಕ್ಕೆ ಆನಂದ್ ಭದೌರಿಯಾ, ಬದೌನ್ನಿಂದ ಧರ್ಮೇಂದ್ರ ಯಾದವ್, ಲಖನೌನಿಂದ ರವಿದಾಸ್ ಮೆಹ್ರೋತ್ರಾ, ಹಲವು ವಿವಾದಗಳಿಂದ ಕುಖ್ಯಾತಿಯಾಗಿರುವ ಉನ್ನಾವೋ ಕ್ಷೇತ್ರದಿಂಣದ ಅನು ಟಂಡನ್, ಅಕ್ಬರ್‌ಪುರ್ ಕ್ಷೇತ್ರದಿಂದ ರಾಜಾರಾಂ ಪಾಲ್, ಫರುಕಾಬಾದ್ನಿಂದ ಡಾ. ನವಲ್ ಕಿಶೋರ್ ಶಕ್ಯಾ, ಫೈಜಾಬಾದ್ಗೆ ಅವಧೇಶ್ ಪ್ರಸಾದ್, ಬೈದಾ ಕ್ಷೇತ್ರಕ್ಕೆ ಶಿವಶಂಕರ್ ಸಿಂಗ್ ಪಟೇಲ್, ಬಸ್ತಿಯಲ್ಲಿ ರಾಮಪ್ರಸಾದ್ ಚೌಧರಿ, ಅಂಬೇಡ್ಕರ್ ನಗರದಿಂದ ಲಾಲ್ಜಿ ವರ್ಮಾ, ಸಿಎಂ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರವಾದ ಗೋರಖ್‌ಪುರದಿಂದ ಕಾಜಲ್ ನಿಶಾದ್ ಅವರಿಗೆ ಪಕ್ಷ ಟಿಕೆಟ್ ನೀಡಲು ಮುಂದಾಗಿದೆ.
ಸೀಟು ಹಂಚಿಕೆ ಚರ್ಚೆ: ದೇಶದಲ್ಲಿ ಕಾಂಗ್ರೆಸ್ ಜೊತೆ ಉಳಿದ ವಿಪಕ್ಷಗಳು ಸೀಟು ಹಂಚಿಕೆ ಚರ್ಚೆ ನಡೆಸುತ್ತಿದ್ದರೆ ಇತ್ತ, ಅಖಿಲೇಶ್ ಯಾದವ್ ಅವರು ವೇಗವಾಗಿ ಮಾತುಕತೆ ನಡೆಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಜೊತೆಗೆ ಸೀಟು ಹಂಚಿಕೆ ಬಗ್ಗೆ ಮಾತುಕತೆ ಮುಗಿಸಿದ್ದು, 11 ಸ್ಥಾನಗಳನ್ನು ಕೈ ಪಕ್ಷಕ್ಕೆ ಬಿಟ್ಟು ಕೊಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಇನ್ನೊಂದು ಮಿತ್ರ ಪಕ್ಷವಾದ ರಾಷ್ಟ್ರೀಯ ಲೋಕದಳಕ್ಕೆ 7 ಸ್ಥಾನ ನೀಡಲಾಗುವುದು. ಎಸ್ಪಿ ಅಭ್ಯರ್ಥಿಗಳು 62 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಇದರಲ್ಲಿ ಒಂದು ಅಥವಾ ಎರಡು ಸ್ಥಾನಗಳನ್ನು ಇತರ ಮಿತ್ರ ಪಕ್ಷಗಳಿಗೆ ನೀಡುವ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಕಾಂಗ್ರೆಸ್ ಸೇರಿದಂತೆ ಮಿತ್ರ ಪಕ್ಷಗಳ ಜೊತೆಗೆ ಸೀಟು ಹಂಚಿಕೆ ಬಗ್ಗೆ ಅಧಿಕೃತ ಮಾಹಿತಿ ನೀಡದ ಹೊರತಾಗಿಯೂ ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿರುವ ಅಖಿಲೇಶ್ ಯಾದವ್ ಅಚ್ಚರಿ ಉಂಟು ಮಾಡಿದ್ದಾರೆ. ಪಶ್ಚಿಮಬಂಗಾಳದಲ್ಲಿ ಟಿಎಂಸಿ ಮತ್ತು ಪಂಜಾಬ್ನಲ್ಲಿ ಆಪ್, ಕಾಂಗ್ರೆಸ್ ಜೊತೆಗೆ ಸೀಟು ಹಂಚಿಕೆ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿವೆ.
ಇದನ್ನೂ ಓದಿ: ಯುಪಿಯಲ್ಲಿ ಇಂಡಿಯಾ ಒಕ್ಕೂಟದ ಸೀಟುಗಳ ಹಂಚಿಕೆ ಒಪ್ಪಂದ ಪೂರ್ಣ: ಕಾಂಗ್ರೆಸ್ಗೆ 11 ಸ್ಥಾನ ಬಿಟ್ಟುಕೊಟ್ಟ ಎಸ್ಪಿ