ETV Bharat / bharat

ಇವಿಎಂನಲ್ಲಿ ತಪ್ಪು ಬಟನ್​ ಒತ್ತಿದರೆ ಏನು ಮಾಡಬೇಕು?: ಮತ್ತೊಮ್ಮೆ ಮತ ಹಾಕಲು ಅವಕಾಶ ಇದೆಯಾ? - evm malfunctions - EVM MALFUNCTIONS

ಇವಿಎಂ ಬಟನ್​ ತಪ್ಪಾಗಿ ಒತ್ತಿದರೆ ಏನು ಮಾಡಬೇಕು?, ಮತದಾನದ ವೇಳೆ ಇವಿಎಂ ಕೆಲಸ ಮಾಡದಿದ್ದರೆ ಹೇಗೆ? ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಉದ್ಭವಿಸುತ್ತವೆ. ಇವೆಲ್ಲವುಗಳಿಗೆ ಉತ್ತರ ತಿಳಿಯಬೇಕಾದರೆ, ನೀವು ಈ ಲೇಖನ ಓದಬೇಕು.

ಇವಿಎಂನಲ್ಲಿ ತಪ್ಪು ಬಟನ್​ ಒತ್ತಿದರೆ ಏನು ಮಾಡಬೇಕು

author img

By ETV Bharat Karnataka Team

Published : Apr 18, 2024, 2:24 PM IST

ಹೈದರಾಬಾದ್​: ಲೋಕಸಭೆ ಚುನಾವಣೆಗೆ ಏಪ್ರಿಲ್ 19 ರಂದು (ಶುಕ್ರವಾರ) ಮೊದಲ ಸುತ್ತಿನ ಮತದಾನಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮತದಾನಕ್ಕೆ ಬಳಸುವ ಇವಿಎಂಗಳ ಬಗ್ಗೆ ಅನೇಕರಿಗೆ ಹಲವು ಅನುಮಾನಗಳಿವೆ.

ಇವಿಎಂ ಎಂದರೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್. ಇದು ಮುಖ್ಯವಾಗಿ ಎರಡು ಭಾಗಗಳನ್ನು ಒಳಗೊಂಡಿದೆ. ಒಂದು ಘಟಕವನ್ನು ಬ್ಯಾಲೆಟ್ ಯೂನಿಟ್ (ಬಿಯು) ಎಂದು ಕರೆದರೆ, ಇನ್ನೊಂದನ್ನು ಕಂಟ್ರೋಲ್ ಯುನಿಟ್ (ಸಿಯು) ಎನ್ನಲಾಗುತ್ತದೆ. ನಾವು ಮತ ಹಾಕುವ ಇವಿಎಂ ಯಂತ್ರವನ್ನು ಬ್ಯಾಲೆಟ್ ಯುನಿಟ್ (ಬಿಯು) ನಿಯಂತ್ರಿಸುತ್ತದೆ. ಇದನ್ನು ವಿಶೇಷ ಸ್ಥಳದಲ್ಲಿ ಸ್ಥಾಪಿಸಲಾಗಿರುತ್ತದೆ. ಅಲ್ಲಿಗೆ ಹೋಗಿ ಗೌಪ್ಯ ಮತ ಚಲಾಯಿಸಬೇಕು.

ಇದರ ಪೂರ್ಣ ನಿಯಂತ್ರಣವು ಪ್ರಿಸೈಡಿಂಗ್ ಅಧಿಕಾರಿ ಅಥವಾ ಮತಗಟ್ಟೆ ಅಧಿಕಾರಿಯ ಬಳಿ ಇರುತ್ತದೆ. ಇದಕ್ಕೆ ಬ್ಯಾಲೆಟ್ ಯೂನಿಟ್ ಮತ್ತು ಕಂಟ್ರೋಲ್ ಯೂನಿಟ್ ಅನ್ನು 5 ಮೀಟರ್ ಉದ್ದದ ಕೇಬಲ್ ಮೂಲಕ ಸಂಪರ್ಕಿಸಲಾಗಿರುತ್ತದೆ. ಇದರಲ್ಲಿ ಎಷ್ಟು ಮಂದಿ ಮತ ಚಲಾಯಿಸಿದ್ದಾರೆ ಎಂಬುದನ್ನ ಕಾಲಕಾಲಕ್ಕೆ ನಿಯಂತ್ರಣ ಯೂನಿಟ್​ ತೋರಿಸುತ್ತದೆ. ಇವುಗಳ ಜತೆಗೆ ‘ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್’ (ವಿವಿ ಪ್ಯಾಟ್) ಯಂತ್ರವೂ ಜೊತೆಗಿರುತ್ತದೆ. ಇದರ ಕೆಲಸವೆಂದರೆ, ನಾವು ಇವಿಎಂನಲ್ಲಿ ಮತ ಚಲಾಯಿಸಿದಾಗ, ವಿವಿ ಪ್ಯಾಟ್‌ನಲ್ಲಿನ ಸ್ಲಿಪ್​ನಲ್ಲಿ ಅದು ಮುದ್ರಿತವಾಗಿ ಕೆಳಗೆ ಇರಿಸಲಾದ ಬಾಕ್ಸ್‌ನಲ್ಲಿ ಬೀಳುತ್ತದೆ. ಇವಿಎಂಗಳು ಬ್ಯಾಟರಿ ಚಾಲಿತವಾಗಿದ್ದು, ವಿದ್ಯುತ್​ನ ಅಗತ್ಯವಿಲ್ಲ. ವಿದ್ಯುತ್ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಬಳಕೆಗೆ ಯೋಗ್ಯವಾಗಿವೆ.

ಇವಿಎಂ ಕೆಟ್ಟು ನಿಂತರೆ ಏನಾಗುತ್ತದೆ?: ಮತದಾನ ನಡೆಯುತ್ತಿರುವಾಗ ಇವಿಎಂ ಏಕಾಏಕಿ ಅರ್ಧದಲ್ಲಿ ಕೆಟ್ಟು ನಿಂತರೆ, ಹಾಕಿದ ಮತಗಳು ಏನಾಗುತ್ತವೆ ಎಂಬುದು ಎಲ್ಲರಲ್ಲಿ ಮೂಡುವ ಪ್ರಶ್ನೆ. ಹೀಗಾದಾಗ ಭಯದ ಚಿಂತೆಯೇ ಬೇಡ. ಇವಿಎಂನಲ್ಲಿರುವ ಬ್ಯಾಲೆಟ್ ಯೂನಿಟ್ ಮತ್ತು ಕಂಟ್ರೋಲ್ ಯೂನಿಟ್​ಗಳು ತಾಂತ್ರಿಕವಾಗಿ ಕೆಲಸ ಮಾಡದಿದ್ದರೆ, ಅಲ್ಲಿಯವರೆಗೂ ಮತದಾರರು ಚಲಾಯಿಸಿದ ಎಲ್ಲ ಮತಗಳು ಕಂಟ್ರೋಲ್ ಯೂನಿಟ್​ನಲ್ಲಿ ಸೇವ್​ ಆಗಿರುತ್ತವೆ. ಅಲ್ಲಿಂದ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಹುದು. ಹಾಗೊಂದು ವೇಳೆ ಕಂಟ್ರೋಲ್​ ಯೂನಿಟ್​ ಕೂಡ ಕೈಕೊಟ್ಟಲ್ಲಿ ವಿವಿ ಪ್ಯಾಟ್ ಯಂತ್ರದಲ್ಲಿನ ಚೀಟಿಗಳಲ್ಲಿ ನಿಮ್ಮ ಮತ ಅಡಕವಾಗಿರುತ್ತದೆ.

ಹೀಗಾಗಿ ಯಾವುದೇ ಸಮಸ್ಯೆ ಉಂಟಾದಂತೆ ನೋಡಿಕೊಳ್ಳಲು ಚುನಾವಣಾ ಆಯೋಗವು ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಮತ್ತು ವಿವಿ ಪ್ಯಾಟ್‌ಗಳನ್ನು ಕಳುಹಿಸುತ್ತದೆ. ಕೆಟ್ಟು ನಿಂತ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿಗಳು ಮೀಸಲು ಇರಿಸಲಾಗಿರುವ ಯಂತ್ರಗಳನ್ನು ಕಳುಹಿಸುತ್ತಾರೆ. ಅವುಗಳನ್ನು ಉಳಿದವರು ಮತ ಚಲಾವಣೆ ಮಾಡಬಹುದು. ಕೆಟ್ಟ ಇವಿಎಂಗಳಲ್ಲಿ ದಾಖಲಾದ ಮತಗಳನ್ನು ಎಣಿಕೆ ದಿನದಂದು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ತಾಂತ್ರಿಕ ಕಾರಣದಿಂದ ಕಂಟ್ರೋಲ್ ಯೂನಿಟ್‌ನಲ್ಲಿನ ಮತಗಳು ಸಿಗದಿದ್ದಲ್ಲಿ, ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಸಲಾಗುತ್ತದೆ. ವಿವಿಪ್ಯಾಟ್ ಯಂತ್ರ ವಿಫಲವಾದರೆ ಮತ್ತೊಂದು ಹೊಸ ವಿವಿಪ್ಯಾಟ್ ಅನ್ನು ಅಳವಡಿಸಬಹುದು.

ಇವಿಎಂನಲ್ಲಿ ತಪ್ಪು ಬಟನ್ ಒತ್ತಿದಾಗ ಏನು ಮಾಡಬೇಕು?: ಇವಿಎಂನಲ್ಲಿ ಯಾವುದೇ ಬಟನ್​ ಒತ್ತಿದಾಗ ಸದ್ದು ಉಂಟಾಗಿ ಕೆಂಪು ಬಣ್ಣದ ಸಿಗ್ನಲ್​ ಹೊರಸೂಸುತ್ತದೆ. ಬಳಿಕ ವಿವಿ ಪ್ಯಾಟ್​ನಲ್ಲಿ ಸ್ಲಿಪ್​ ಮುದ್ರಿತವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನಿಗದಿತ ಅಭ್ಯರ್ಥಿಯ ಬದಲಾಗಿ ಬೇರೊಂದು ಅಭ್ಯರ್ಥಿಗೆ ಮತ ಹಾಕಿದಲ್ಲಿ ಏನು ಮಾಡಬೇಕು. ನಾವು ಮತ್ತೆ ಇನ್ನೊಮ್ಮೆ ಮತ ಹಾಕುವ ಅವಕಾಶ ಇದೆಯೇ ಎಂಬ ಪ್ರಶ್ನೆಗೆ ಖಂಡಿತವಾಗಿಯೂ 'ಇಲ್ಲ' ಎಂಬುದೇ ಉತ್ತರ.

ಅಚಾನಕ್ಕಾಗಿ ತಪ್ಪು ಗುಂಡಿ ಒತ್ತಿದಾಗ ಮತ್ತೊಮ್ಮೆ ಮತ ಚಲಾಯಿಸುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಮತಗಟ್ಟೆ ಅಧಿಕಾರಿಯ ಅನುಮತಿ ಪಡೆಯಬೇಕು. 'ಚುನಾವಣಾ ನಿಯಮಗಳು- 1961' ರ ನಿಯಮ ಸಂಖ್ಯೆ 49MA ಪ್ರಕಾರ ಚುನಾವಣಾಧಿಕಾರಿಗಳು ಅಂತಹ ಸಂದರ್ಭಗಳಲ್ಲಿ ಮತದಾರರಿಂದ ಲಿಖಿತ ದಾಖಲೆ ಪಡೆಯಬಹುದು. ಮತದಾರ ಮಾಡಿದ ಎಡವಟ್ಟು ನಿಜವಾದಲ್ಲಿ ಮಾತ್ರ ಚುನಾವಣಾಧಿಕಾರಿ ಅನುಮತಿ ನೀಡಿ ಮತ್ತೊಮ್ಮೆ ಮತದಾನ ಮಾಡಲು ಅವಕಾಶ ಕೊಡುತ್ತಾರೆ. ಈ ಎಲ್ಲ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಅನುಮತಿ ನೀಡುವವರೆಗೆ ಆ ಇವಿಎಂನಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗುತ್ತದೆ.

ಇದನ್ನೂ ಓದಿ: ನಾಳೆ ಮೊದಲ ಹಂತದ ಮತದಾನ: 4ನೇ ಹಂತದ ಚುನಾವಣೆಗೆ ಅಧಿಸೂಚನೆ ಪ್ರಕಟ - Election Notification Released

ETV Bharat Logo

Copyright © 2025 Ushodaya Enterprises Pvt. Ltd., All Rights Reserved.