ETV Bharat / bharat

5ನೇ ಹಂತದ ಲೋಕಸಭಾ ಚುನಾವಣೆ: ವೋಟ್​ ಮಾಡಿದ ಆರ್​ಬಿಐ ಗವರ್ನರ್, ನಟ ಅಕ್ಷಯ್ ಕುಮಾರ್, ಉದ್ಯಮಿ ಅನಿಲ್​ ಅಂಬಾನಿ - LOK SABHA ELECTION 2024

ಇಂದು (ಸೋಮವಾರ) ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ 8 ರಾಜ್ಯಗಳಲ್ಲಿ ಮತದಾನ ಆರಂಭವಾಗಿದೆ. ಬೆಳಗ್ಗೆ 7ರಿಂದ ಪ್ರಾರಂಭವಾದ ವೋಟಿಂಗ್​ ಸಂಜೆ 6ರ ವರೆಗೆ ನಡೆಯಲಿದೆ.

Uttar Pradesh  Maharashtra  Lok Sabha Election  Voting
ಸಂಗ್ರಹ ಚಿತ್ರ (AP)
author img

By PTI

Published : May 20, 2024, 8:07 AM IST

Updated : May 20, 2024, 9:08 AM IST

ನವದೆಹಲಿ: ಇಂದು (ಸೋಮವಾರ) ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ ಸೇರಿದಂತೆ 8 ರಾಜ್ಯಗಳಲ್ಲಿ ಮತದಾನ ಆರಂಭವಾಗಿದೆ. ಬೆಳಗ್ಗೆ 7ರಿಂದ ಶುರವಾಗಿರುವ ವೋಟಿಂಗ್​ ಸಂಜೆ 6ರ ವರೆಗೆ ಮುಂದುವರಿಯಲಿದೆ. ಒಟ್ಟು 49 ಲೋಕಸಭಾ ಕ್ಷೇತ್ರಗಳಲ್ಲಿ ಐದನೇ ಹಂತದ ಮತದಾನ ಪ್ರಾರಂಭವಾಗಿದೆ.

49 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭ:

  1. ಬಿಹಾರ: ಸೀತಾಮರ್ಹಿ, ಮಧುಬನಿ, ಮುಜಾಫರ್‌ಪುರ, ಸರನ್, ಹಾಜಿಪುರ
  2. ಜಾರ್ಖಂಡ್: ಛತ್ರ, ಕೊಡೆರ್ಮಾ, ಹಜಾರಿಬಾಗ್
  3. ಮಹಾರಾಷ್ಟ್ರ: ಧುಲೆ, ದಿಂಡೋರಿ, ನಾಸಿಕ್, ಪಾಲ್ಘರ್, ಭಿವಂಡಿ, ಕಲ್ಯಾಣ್, ಥಾಣೆ, ಮುಂಬೈ ಉತ್ತರ, ಮುಂಬೈ ವಾಯುವ್ಯ, ಮುಂಬೈ ಈಶಾನ್ಯ, ಮುಂಬೈ ಉತ್ತರ-ಮಧ್ಯ, ಮುಂಬೈ ದಕ್ಷಿಣ-ಮಧ್ಯ, ಮುಂಬೈ ದಕ್ಷಿಣ
  4. ಒಡಿಶಾ: ಬರ್ಗಢ್, ಸುಂದರ್‌ಗಢ್, ಬೋಲಂಗೀರ್, ಕಂಧಮಾಲ್, ಅಸ್ಕಾ
  5. ಉತ್ತರ ಪ್ರದೇಶ: ಮೋಹನ್‌ಲಾಲ್‌ಗಂಜ್, ಲಕ್ನೋ, ರಾಯ್ ಬರೇಲಿ, ಅಮೇಥಿ, ಜಲೌನ್, ಝಾನ್ಸಿ, ಹಮೀರ್‌ಪುರ್, ಬಂದಾ, ಫತೇಪುರ್, ಕೌಶಂಬಿ, ಬಾರಾಬಂಕಿ, ಫೈಜಾಬಾದ್, ಕೈಸರ್‌ಗಂಜ್, ಗೊಂಡಾ
  6. ಪಶ್ಚಿಮ ಬಂಗಾಳ: ಬಂಗಾವ್, ಬ್ಯಾರಕ್‌ಪೋರ್, ಹೌರಾ, ಉಲುಬೇರಿಯಾ, ಶ್ರೀರಾಮಪುರ, ಹೂಗ್ಲಿ, ಆರಂಬಾಗ್​
  7. ಜಮ್ಮು ಮತ್ತು ಕಾಶ್ಮೀರ: ಬಾರಾಮುಲ್ಲಾ
  8. ಲಡಾಖ್: ಲಡಾಖ್

ವೋಟ್​ ಮಾಡಿದ ವಿವಿಧ ಗಣ್ಯರು: ಮುಂಬೈನ ಮತಗಟ್ಟೆಯಲ್ಲಿ ನಟ ಅಕ್ಷಯ್ ಕುಮಾರ್ ಮತದಾನ ಮಾಡಿದರು. ಬಳಿಕ ಮಾತನಾಡಿ ಅವರು, "ನನ್ನ ಭಾರತವು ಅಭಿವೃದ್ಧಿ ಹೊಂದಬೇಕು ಮತ್ತು ಬಲಿಷ್ಠವಾಗಿರಬೇಕು ಎಂದು ನಾನು ಬಯಸುತ್ತೇನೆ. ನಾನು ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಮತ ಹಾಕಿದ್ದೇನೆ'' ಎಂದು ಹೇಳಿದರು.

ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಮುಂಬೈನ ಮತಗಟ್ಟೆಗೆ ಆಗಮಿಸಿ ವೋಟ್​ ಹಾಕಿದರು. ಉದ್ಯಮಿ ಅನಿಲ್​ ಅಂಬಾನಿ ಅವರು ಸರದಿಯಲ್ಲಿ ನಿಂತು ಮುಂಬೈನಲ್ಲಿ ಮತ ಚಲಾಯಿಸಿದರು.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಲಕ್ನೋದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಈ ಚುನಾವಣೆಯಲ್ಲಿ ಬದಲಾವಣೆಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಯಾವತಿ, ಈ ಬಾರಿ ಬದಲಾವಣೆ (ಅಧಿಕಾರ) ಆಗುವ ಭರವಸೆ ನನಗಿದೆ" ಎಂದು ಹೇಳಿದರು.

ಇದನ್ನೂ ಓದಿ: 5ನೇ ಹಂತದ ಲೋಕಸಮರ: ರಾಯ್ ಬರೇಲಿ, ಅಮೇಥಿ ಸೇರಿ 49 ಕ್ಷೇತ್ರಗಳಿಗೆ ಮತದಾನ - ಇಲ್ಲಿದೆ ಸಂಪೂರ್ಣ ವಿವರ - LOK SABHA ELECTION 2024

Last Updated : May 20, 2024, 9:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.