ನವದೆಹಲಿ: ಲೋಕಸಭೆ ಚುನಾವಣೆಗೆ ಮತದಾನ ಮುಕ್ತಾಯವಾಗಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಈಗಲೇ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು, ಕರ್ನಾಟಕದ 28 ಕ್ಷೇತ್ರಗಳ ಬಗ್ಗೆಯೂ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕಳೆದ ಬಾರಿಗೆ ಹೋಲಿಸಿದರೆ, ಕಾಂಗ್ರೆಸ್ ಕನಿಷ್ಠ 5ರಿಂದ 6 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಬಿಜೆಪಿಗೆ ಇದೇ 5 ರಿಂದ 6 ಸ್ಥಾನಗಳು ನಷ್ಟವಾಗುವ ನಿರೀಕ್ಷೆ ಇದೆ ಎಂದು ಸಮೀಕ್ಷೆಗಳು ಅಂದಾಜಿಸಿವೆ.
ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿವೆ. ಮೈತ್ರಿ ಭಾಗವಾಗಿ ಬಿಜೆಪಿ 25 ಕ್ಷೇತ್ರಗಳು, ಜೆಡಿಎಸ್ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಕಾಂಗ್ರೆಸ್ ಎಲ್ಲ 28 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿದೆ. ಕಳೆದ ಬಾರಿ ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಗೆದ್ದಿತ್ತು. ಈ ಬಾರಿ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ಬಿಜೆಪಿ 25 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಈ ಸಲ ಕೂಡ ಬಿಜೆಪಿ ಹೆಚ್ಚಿನ ಸ್ಥಾನಗಳ ಗಳಿಕೆಯ ನಂಬಿಕೆ ಹೊಂದಿದೆ.
ವಿವಿಧ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಇಲ್ಲಿದೆ..
- ಇಂಡಿಯಾ ಟುಡೆ ಸಮೀಕ್ಷೆ ಪ್ರಕಾರ, ಬಿಜೆಪಿ 20-22, ಕಾಂಗ್ರೆಸ್ 03-05 ಹಾಗೂ ಜೆಡಿಎಸ್ 02-03 ಸ್ಥಾನ ಪಡೆಯಲಿದೆ.
- ನ್ಯೂಸ್ 18 ಪ್ರಕಾರ, ಬಿಜೆಪಿ 21-24, ಕಾಂಗ್ರೆಸ್ 03-07, ಜೆಡಿಎಸ್ 01-02 ಸ್ಥಾನ ಗಳಿಸಲಿದೆ.
- ಆ್ಯಕ್ಸಿಸ್ ಮೈ ಇಂಡಿಯಾ ಪ್ರಕಾರ, ಬಿಜೆಪಿ 23-25, ಕಾಂಗ್ರೆಸ್ 03-05, ಜೆಡಿಎಸ್ 02-03 ಸ್ಥಾನ ಪಡೆಯಲಿದೆ.
- ಸಿಎನ್ಎನ್ ಪ್ರಕಾರ, ಬಿಜೆಪಿ 21-24, ಕಾಂಗ್ರೆಸ್ 03-07, ಜೆಡಿಎಸ್ 01-03 ಸ್ಥಾನ ಗಳಿಸಲಿದೆ.
- ಜನ್-ಕಿ-ಬಾತ್ ಪ್ರಕಾರ, ಬಿಜೆಪಿ 21-23, ಕಾಂಗ್ರೆಸ್ 05-07, ಜೆಡಿಎಸ್ 02-03 ಸ್ಥಾನ ಪಡೆಯಲಿದೆ.
- ಎಬಿಸಿ-ಸಿವೋಟರ್ ಪ್ರಕಾರ, ಬಿಜೆಪಿ 23-25, ಕಾಂಗ್ರೆಸ್ 03-05 ಮತ್ತು ಜೆಡಿಎಸ್ ಶೂನ್ಯ ಎಂದು ಭವಿಷ್ಯ ನುಡಿಯಲಾಗಿದೆ.
ಇದನ್ನೂ ಓದಿ: Exit poll LIVE: ಲೋಕಸಭೆ ಚುನಾವಣೆಯ ಎಕ್ಸಿಟ್ಪೋಲ್ ಸಮೀಕ್ಷೆ- ಯಾರಿಗೆ ಎಷ್ಟು ಸ್ಥಾನ?