ETV Bharat / bharat

ಗ್ರಾಹಕರ ಸೆಳೆಯಲು 'ಇಂಗ್ಲಿಷ್​ ಕಲಿಕೆ' ಬ್ಯಾನರ್: ಲಿಕ್ಕರ್​ ಶಾಪ್​ ಮಾಲೀಕನಿಗೆ ಬಿತ್ತು ₹10 ಸಾವಿರ ದಂಡ - Controversial Banner

'ಬೆಳಗಿನ ಹೊತ್ತು ಇಂಗ್ಲಿಷ್​ ಕಲಿಯಬೇಕೇ ಇಲ್ಲಿಗೆ ಭೇಟಿ ನೀಡಿ' ಎಂದು ಲಿಕ್ಕರ್​ ಶಾಪ್‌ನೆಡೆಗೆ ರಸ್ತೆ ಮಾರ್ಗವನ್ನು ಸೂಚಿಸುವ ಬ್ಯಾನರ್​ ಅನ್ನು ಮಾಲೀಕ ದೊಡ್ಡದಾಗಿ ಹಾಕಿದ್ದ.

liquor-shop-owner-in-burhanpur-was-fined-rs-10-000-after-a-controversial-banner
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Jul 29, 2024, 11:42 AM IST

ಬುರ್ಹಾನ್ಪುರ್: ಗ್ರಾಹಕರನ್ನು ಸೆಳೆಯಲು ಅಂಗಡಿ ಮಾಲೀಕರು ಹೊಸ ಹೊಸ ಕಸರತ್ತು ಮಾಡುತ್ತಿರುತ್ತಾರೆ. ಇದೇ ರೀತಿ ವಿಭಿನ್ನ ಆಲೋಚನೆಯ ಮೂಲಕ ವ್ಯಾಪಾರ ಹೆಚ್ಚಿಸಲು ಬ್ಯಾನರ್​ ಹಾಕಿ ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದ ಮದ್ಯದಂಗಡಿ ಮಾಲೀಕನ ಉಪಾಯವೊಂದು ಕೈಕೊಟ್ಟಿದೆ. ಇದರ ಪರಿಣಾಮ, ನಿಯಮ ಉಲ್ಲಂಘಿಸಿದ ಕಾರಣಕ್ಕೆ 10 ಸಾವಿರ ದಂಡ ತೆರುವಂತಾಗಿದೆ.

ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಬುರ್ಹಾನ್ಪುರ್​ ಜಿಲ್ಲೆಯ ನಾಚನಖೇಡನಲ್ಲಿನ ಮದ್ಯದಂಗಡಿ ಮಾಲೀಕ ಬೆಳಗಿನ ಹೊತ್ತು ಇಂಗ್ಲಿಷ್​ ಕಲಿಯಬೇಕೇ ಇಲ್ಲಿಗೆ ಭೇಟಿ ನೀಡಿ ಎಂದು ಲಿಕ್ಕರ್​ ಶಾಪ್​ ರಸ್ತೆ ಮಾರ್ಗವನ್ನು ಸೂಚಿಸುವ ಬ್ಯಾನರ್​ ಅನ್ನು ದೊಡ್ಡದಾಗಿ ಹಾಕಿದ್ದ.

ಮದ್ಯ ಸೇರಿದ ಬಳಿಕ ಜನರ ಬಾಯಿಂದ ಇಂಗ್ಲಿಷ್​ ಪದಗಳು ಹೊರಬರುವ ಹಿನ್ನೆಲೆಯಲ್ಲಿ ಮಾಲೀಕ ಈ ರೀತಿಯ ಪ್ರಯೋಗ ನಡೆಸಿದ್ದಾನೆ. ಈ ಪೋಸ್ಟರ್​ ಆತನ ಮದ್ಯ ಮಾರಾಟ ಹೆಚ್ಚಿಸಿದೆಯೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಬ್ಯಾನರ್‌ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ಪೋಸ್ಟರ್​ಗೆ ಸಕಾರಾತ್ಮಕ ಮತ್ತು ನಕಾರಾತ್ಮಕ ಟೀಕೆಗಳು ವ್ಯಕ್ತವಾಗುವ ಜೊತೆಗೆ ಈ ಪ್ರಕರಣ ಜಿಲ್ಲಾಡಳಿತ ಮಟ್ಟದಲ್ಲಿ ಅಧಿಕಾರಿಗಳ ಗಮನ ಸೆಳೆದಿದೆ. ಇದನ್ನು ಗಮನಿಸಿದ ಬುರ್ಹಾನ್‌ಪುರ ಜಿಲ್ಲಾಧಿಕಾರಿ ಭವ್ಯಾ ಮಿತ್ತಲ್, ಮದ್ಯ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ಸೂಚಿಸಿದ್ದಾರೆ. ಈ ಬೆನ್ನಲ್ಲೇ ಅಬಕಾರಿ ಇಲಾಖೆ ಅಧಿಕಾರಿಗಳು ಅಂಗಡಿ ಪರವಾನಗಿ ಸಂಬಂಧ ನೋಟಿಸ್​ ಜಾರಿ ಮಾಡಿದ್ದಾರೆ.

ಈ ನೋಟಿಸ್​ಗೆ ಉತ್ತರಿಸಿರುವ ಲಿಕ್ಕರ್​ ಶಾಪ್​ ಮಾಲೀಕ, ನಾನು ಯಾವುದೇ ಗಂಭೀರ ತಪ್ಪೆಸಗಿಲ್ಲ. ಅಂಗಡಿಯಿಂದ 40- 50 ಅಡಿ ದೂರದಲ್ಲಿರುವ ಇನ್ನೊಬ್ಬ ವ್ಯಕ್ತಿಯ ಖಾಸಗಿ ಜಮೀನಿನಲ್ಲಿ ಪೋಸ್ಟರ್​ ಹಾಕಿದ್ದೇನೆ. ನನಗೆ ಗೊತ್ತಿಲ್ಲದಂತೆ ಯಾರೋ ಬೇರೆ ವ್ಯಕ್ತಿ ದುರುದ್ದೇಶದಿಂದ ಪಿತೂರಿ ನಡೆಸಿ ಈ ರೀತಿ ಬ್ಯಾನರ್​ ಹಾಕಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾನೆ.

ಆದರೆ, ತಮ್ಮ ಉತ್ತರ ತೃಪ್ತಿಕರವಾಗಿಲ್ಲ. ಮದ್ಯದ ಪರವಾನಗಿಯ ಷರತ್ತುಗಳನ್ನು ಉಲ್ಲಂಘಿಸಿದ್ದೀರಿ ಎಂದು ಅಧಿಕಾರಿಗಳು 10,000 ರೂ. ದಂಡ ವಿಧಿಸಿದ್ದಾರೆ.

ಇದನ್ನೂ ಓದಿ: ಮದುವೆ ಹೆಸರಿನಲ್ಲಿ ದೇಶದ ವಿವಿಧ ರಾಜ್ಯಗಳ 20ಕ್ಕೂ ವಿಚ್ಛೇದಿತರು, ವಿಧವೆಯರನ್ನು ವಂಚಿಸಿದ ಚಾಲಾಕಿ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.