ETV Bharat / bharat

ಕೇರಳದಲ್ಲಿ ಲಘು ಭೂಕಂಪ: ಬೆಳ್ಳಂಬೆಳಗ್ಗೆ ಭಯಭೀತಗೊಂಡು ಮನೆಯಿಂದ ಹೊರ ಬಂದ ಜನ - LIGHT EARTHQUAKE IN KERALA - LIGHT EARTHQUAKE IN KERALA

ಕೇರಳ ರಾಜ್ಯದಲ್ಲಿ ಲಘು ಭೂಕಂಪನದ ಅನುಭವವಾಗಿದೆ. ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಇಂದು ಬೆಳಗ್ಗೆ 8.16ಕ್ಕೆ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಮೂರು ತೀವ್ರತೆಗಳು ದಾಖಲಾಗಿವೆ.

LIGHT MAGNITUDE  EARTHQUAKES HIT VARIOUS AREAS  THRISSUR AND PALAKKAD  KERALA
ಕೇರಳದಲ್ಲಿ ಲಘು ಭೂಕಂಪ, ಬೆಳ್ಳಂಬೆಳಗ್ಗೆ ಭಯಭೀತಗೊಂಡ ಜನ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Jun 15, 2024, 12:58 PM IST

ಎರ್ನಾಕುಲಂ (ಕೇರಳ): ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಲಘು ಭೂಕಂಪನವಾಗಿದೆ. ಬೆಳಗ್ಗೆ 8.16ಕ್ಕೆ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಸೆಂಟರ್ ಪ್ರಕಾರ, ರಿಕ್ಟರ್ ಮಾಪಕದಲ್ಲಿ ಮೂರು ತೀವ್ರತೆಗಳು ದಾಖಲಾಗಿವೆ. ತ್ರಿಶೂರ್ ಜಿಲ್ಲೆಯ ಕುನ್ನಂಕುಲಂ, ವೆಲ್ಲರಕಾಡ್, ಮುಂಡೂರು, ಎರುಮಪೆಟ್ಟಿ ಕರಿಯನ್ನೂರ್, ವೆಲ್ಲತೇರಿ, ವೆಲ್ಲೂರು ಮತ್ತು ನೆಲ್ಲಿಕುನ್ ಭಾಗಗಳಲ್ಲಿ ಭೂಕಂಪ ಸಂಭವಿಸಿದೆ. ಪಾಲಕ್ಕಾಡ್, ತಿರುಮಿಟಕೋಡ್, ಕುಮಾರನೆಲ್ಲೂರ್ ಮತ್ತು ಆಲತ್ತೂರ್ ಪ್ರದೇಶದಲ್ಲಿ ಈ ಕಂಪನ ಕಂಡು ಬಂದಿದೆ.

ಭೂಕಂಪನವು ಮೂರ್ನಾಲ್ಕು ಸೆಕೆಂಡುಗಳ ಕಾಲ ಸಂಭವಿಸಿತು. ಕೆಲ ಮನೆಗಳಲ್ಲಿ ತಟ್ಟೆಗಳು ಅಲುಗಾಡಿದ್ದು, ಗೃಹೋಪಯೋಗಿ ವಸ್ತುಗಳು ಕೆಳಗೆ ಬಿದ್ದಿವೆ. ದೊಡ್ಡ ಶಬ್ದದಿಂದ ಭೂಮಿ ಕಂಪಿಸಿತು. ಜನರು ಗಾಬರಿಗೊಂಡು ಮನೆಯಿಂದ ಹೊರಗೆ ಓಡಿ ಬಂದರು. ಈ ಘಟನೆಯಲ್ಲಿ ಯಾವುದೇ ಹಾನಿ ಅಥವಾ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಇದೇ ವೇಳೆ ಜನತೆ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಅಧಿಕಾರಿಗಳ ತಂಡಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅದರಂತೆ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಭೂಕಂಪದ ಕೇಂದ್ರ ಬಿಂದು ತ್ರಿಶೂರ್​ನಿಂದ 18 ಕಿ.ಮೀ ಉತ್ತರ ಭಾಗದಲ್ಲಿತ್ತು ಎಂಬುದು ದೃಢಪಟ್ಟಿದೆ.

ಓದಿ: ತಿರುಮಲ ತಿರುಪತಿ ದೇವಸ್ಥಾನದ ಇಒ ಆಗಿ ಐಎಎಸ್​ ಅಧಿಕಾರಿ ಶ್ಯಾಮಲಾ ರಾವ್​ ನೇಮಕ - TTD New EO

ETV Bharat Logo

Copyright © 2024 Ushodaya Enterprises Pvt. Ltd., All Rights Reserved.