ETV Bharat / bharat

ಇಂದು ಎಡಗೈ ಬಳಕೆದಾರರ ದಿನ: ಇವರ ವಿಶೇಷತೆ ಗೊತ್ತೇ? ಪ್ರಧಾನಿ ಮೋದಿ ಸೇರಿ ಜಗತ್ತಿನ ಪ್ರಸಿದ್ಧ ಲೆಫ್ಟ್‌ ಹ್ಯಾಂಡರ್ಸ್ ಲಿಸ್ಟ್‌ ಇಲ್ಲಿದೆ - Left Handers Day

author img

By ETV Bharat Karnataka Team

Published : Aug 13, 2024, 3:05 PM IST

ಎಡಗೈ ಬಳಕೆದಾರರ ವಿಭಿನ್ನ ಅನುಭವಗಳ ಕುರಿತು ಜಾಗೃತಿ, ಒಳಗೊಳ್ಳುವಿಕೆ, ಅರ್ಥೈಸಿಕೊಳ್ಳುವಿಕೆ, ವಿಶಿಷ್ಟ ಸಾಮರ್ಥ್ಯವನ್ನು ಗುರುತಿಸುವಿಕೆ ಹಾಗೂ ಅನೇಕ ಕ್ಷೇತ್ರಗಳಲ್ಲಿ ಅವರ ಕೊಡುಗೆಗಳ ಕುರಿತು ತಿಳಿಸುವುದು ಎಡಗೈ ಬಳಕೆದಾರರ ದಿನದ ಉದ್ದೇಶ.

left-handers-day-showing-diversity-and-individuality-of-left-handed-individuals
ಎಡಗೈ ಬಳಕೆದಾರರ ದಿನ (ETV Bharat)

ಅನೇಕ ಬಾರಿ ಎಡಗೈ ಬರಹಗಾರರನ್ನು ಬೆರಗುಗಣ್ಣುಗಳಿಂದ ನೋಡುತ್ತಿರುತ್ತೇವೆ. ಅವರಲ್ಲಿರುವ ಈ ವಿಶಿಷ್ಟ ಗುಣದೊಂದಿಗೆ ಅವರು ಎದುರಿಸುವ ಸವಾಲುಗಳಿಗೆ ಮೆಚ್ಚುಗೆ ವ್ಯಕ್ತಪಡಿಸುವ ಉದ್ದೇಶದಿಂದ ಇಂದು ಅಂತಾರಾಷ್ಟ್ರೀಯ ಎಡಗೈ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದ ಆಚರಣೆಗಾಗಿ ವಿಶ್ವದ ಮೂಲೆ ಮೂಲೆಯ ಜನರು ಒಟ್ಟಾಗುತ್ತಾರೆ. ಈ ಮೂಲಕ ನಿರ್ದಿಷ್ಟ ಸವಾಲುಗಳ ಕುರಿತು ಬೆಳಕು ಚೆಲ್ಲುವ ಹಾಗು ಅವರಿಗೆ ಬೆಂಬಲ ನೀಡಲಾಗುತ್ತಿದೆ.

ಪ್ರಸ್ತುತ ವರ್ಷದ ಅಂತಾರಾಷ್ಟ್ರೀಯ ಎಡಗೈ ದಿನದ ಆಚರಣೆಯಲ್ಲಿ ಜಗತ್ತಿನೆಲ್ಲೆಡೆಯ ಎಡಗೈ ಬಳಕೆದಾರರ ವೈವಿಧ್ಯತೆ ಮತ್ತು ವ್ಯಕ್ತಿತ್ವ ಪ್ರದರ್ಶನದ ಮೇಲೆ ಗಮನಹರಿಸಲಾಗುತ್ತಿದೆ.

ದಿನದ ಇತಿಹಾಸ: ಎಡಗೈ ಬಳಕೆದಾರರ ವಿಶಿಷ್ಟತೆ, ವ್ಯಕ್ತಿತ್ವಕ್ಕೆ ಗೌರವ ನೀಡುವ ಮೂಲಕ ಈ ದಿನಾಚರಣೆ ನಡೆಯುತ್ತದೆ. 1976ರಲ್ಲಿ ಲೆಫ್ಟ್​​ಹ್ಯಾಂಡರ್​ ಇಂಟರ್ನ್ಯಾಷನಲ್​ ಸಂಸ್ಥಾಪಕ ಡೀನ್​ ಆರ್​​ ಕ್ಯಾಪ್ಬೆಲ್​ ಈ ದಿನವನ್ನು ಸ್ಥಾಪಿಸಿದರು. ಅಂದಿನಿಂದ ದಿನಾಚರಣೆ ನಡೆಯುತ್ತಿದೆ. ಎಡಗೈ ಬಳಕೆದಾರರು 1,600ರಲ್ಲಿ ದೆವ್ವಗಳೊಂದಿಗೆ ಸಂಬಂಧ ಹೊಂದಿದ್ದರು ಎಂಬ ನಂಬಿಕೆಯಿಂದ ಇಂದಿನ ಆಧುನಿಕ ಕಾಲದವರೆಗೆ ಅವರು ಅನೇಕ ಅಡೆತಡೆ ಮತ್ತು ಸವಾಲುಗಳನ್ನು ಪ್ರತಿನಿತ್ಯದ ಕೆಲಸಗಳಲ್ಲಿ ಎದುರಿಸುತ್ತಿದ್ದಾರೆ.

ಮಹತ್ವ: ಎಡಗೈ ಬಳಕೆದಾರರ ವಿಭಿನ್ನ ಅನುಭವಗಳ ಕುರಿತು ಜಾಗೃತಿ, ಒಳಗೊಳ್ಳುವಿಕೆ, ಅರ್ಥೈಸಿಕೊಳ್ಳುವಿಕೆ, ವಿಶಿಷ್ಟ ಸಾಮರ್ಥ್ಯವನ್ನು ಗುರುತಿಸುವುದು ಹಾಗೂ ಅನೇಕ ಕ್ಷೇತ್ರಗಳಲ್ಲಿನ ಅವರ ಕೊಡುಗೆಗಳನ್ನು ತಿಳಿಸುವುದು ದಿನದ ಮಹತ್ವ.

  • ಜಾಗೃತಿ: ಎಡಗೈ ಬಳಕೆದಾರರು ಎದುರಿಸುವ ಸವಾಲಿನ ಕುರಿತು ಜಾಗೃತಿ ಮೂಡಿಸುವುದು.
  • ವೈವಿಧ್ಯತೆಯ ಆಚರಣೆ: ವಿಶಿಷ್ಟ ಗುಣ ಮತ್ತು ಪ್ರತಿಭೆಗೆ ಮನ್ನಣೆ ನೀಡುವುದು.
  • ಉದ್ಯಮ ಮತ್ತು ಉತ್ಪಾದನೆಯ ಉತ್ಪನ್ನಗಳನ್ನು ಎಡಗೈ ಮತ್ತು ಬಲಗೈ ಬಳಕೆದಾರರಿಬ್ಬರು ಬಳಕೆ ಮಾಡುವಂತೆ ವಿನ್ಯಾಸ ಮಾಡಲು ಪ್ರೋತ್ಸಾಹ ನೀಡುವುದು.

ಆಸಕ್ತಿಕರ ಅಂಶಗಳು:

  • ಜಗತ್ತಿನಲ್ಲಿ ಅಂದಾಜು ಶೇ 12ರಷ್ಟು ಮಂದಿ ಎಡಗೈ ಬಳಕೆದಾರರಾದರೆ, ಶೇ 87ರಷ್ಟು ಬಲಗೈ ಹಾಗೂ 1ರಷ್ಟು ಮಂದಿ ಎರಡು ಕೈ ಬಳಕೆದಾರರಾಗಿದ್ದಾರೆ.
  • ಎಡಗೈ ಬಳಕೆದಾರರು ಅಲರ್ಜಿಗೆ ತೆರೆದುಕೊಳ್ಳುವವರಾಗಿದ್ದು, ಇವರು ಅಪರೂಪದ ಸ್ವಯಂ ರೋಗನಿರೋಧಕ ಸಮಸ್ಯೆಯಿಂದ ಎರಡು ಪಟ್ಟು ಹೆಚ್ಚು ಬಳಲುತ್ತಾರೆ.
  • ಬಲಗೈ ಬಳಕೆದಾರರಿಗಿಂತ ಎಡಗೈ ಬಳಕೆದಾರರಲ್ಲಿ ಮೈಗ್ರೇನ್​ ಹೆಚ್ಚು ಎಂದು ಅಧ್ಯಯನ ತಿಳಿಸಿದೆ.
  • ಇತರರಿಗೆ ಹೋಲಿಸಿದಾಗ ಬಹುತೇಕ ಎಡಗೈ ಬಳಕೆದಾರರು ಕಳಪೆ ನಿದ್ರೆ ಗುಣಮಟ್ಟವನ್ನು ಹೊಂದಿರುತ್ತಾರೆ.
  • ಎಡಗೈ ಬಳಕೆದಾರರು ತಮ್ಮ ಬಲ ಬದಿಯ ಮಿದುಳನ್ನು ಹೆಚ್ಚು ಬಳಕೆ ಮಾಡುತ್ತಾರೆ.
  • ಇವರಲ್ಲಿ ಇತರರಿಗಿಂತ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯ ಹೆಚ್ಚು.

ಎಡಗೈ ಬಳಕೆದಾರರು QWERTY ಕೀಬೋರ್ಡ್​ನಲ್ಲಿ ಟೈಪಿಂಗ್​​ ಪ್ರಯೋಜನ ಹೊಂದಿರುತ್ತಾರೆ. 3,000 ಇಂಗ್ಲಿಷ್​ ಪದವನ್ನು ಎಡಗೈ ಒಂದೇ ಬಳಕೆ ಮಾಡಿದರೆ, 300 ಶಬ್ಧಗಳಿಗೆ ಬಲಗೈ ಬಳಕೆ ಮಾಡಿ ಟೈಪ್​ ಮಾಡುತ್ತಾರೆ.

ಅನೇಕ ಸಂಸ್ಕೃತಿಗಳು ಮತ್ತು ದೇಶಗಳಲ್ಲಿ ಎಡಗೈ ಬಳಕೆದಾರರ ಬಗ್ಗೆ ಅನೈಸರ್ಗಿಕ ಚಿಂತನೆಯೊಂದಿದೆ. ಭಾರತದಂತಹ ಪೂರ್ವಭಾಗದ ದೇಶದಲ್ಲಿ ಅಥವಾ ಮಧ್ಯ ಪ್ರಾಚ್ಯದಲ್ಲಿ ಇವರನ್ನು ಕಟುರರು ಎಂದು ಹೇಳಲಾಗುತ್ತಿದೆ. ಬ್ರಿಟನ್​ನಲ್ಲಿ ಎಡಗೈ ಬಳಕೆದಾರ ಮಗುವಿಗೆ ಬಲಗೈ ಬಳಕೆ ಮಾಡುವಂತೆ ಬಲವಂತ ಮಾಡಲಾಗುತ್ತದೆ.

ಸಮಸ್ಯೆಗಳು: ಅನೇಕ ಎಡಗೈ ಬಳಕೆದಾರರ ಮಗುವಿಗೆ ಬರವಣಿಗೆ ಸೇರಿದಂತೆ ಅನೇಕ ಚಟುವಟಿಕೆಗೆ ಬಲಗೈ ಬಳಕೆ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಈ ರೀತಿಯ ಬಲವಂತದ ಅಳವಡಿಕೆಯಿಂದ ಅವರಲ್ಲಿ ಕಲಿಕೆಯಲ್ಲಿ ತೊಡಕು, ಡಿಸ್ಲೆಕ್ಸಿಯಾ, ಮಾತು ಸೇರಿದಂತೆ ಅನೇಕ ಸಮಸ್ಯೆಗೆ ಕಾರಣವಾಗಬಹುದು. ಎಡಗೈ ಬಳಕೆದಾರರು ವಿವಿಧ ಕಾರ್ಯಕ್ಕೆ ತಮ್ಮ ದೇಹದ ಎರಡು ಭಾಗಗಳನ್ನು ಬಳಕೆ ಮಾಡುತ್ತಾರೆ.

ಎಡಗೈ ಬಳಕೆದಾರರು ಚಟುವಟಿಕೆಗಳಲ್ಲಿ ಹೆಚ್ಚು ಗಾಯಗಳಿಗೆ ಒಳಗಾಗುವ ಅಪಾಯ ಹೊಂದಿರುತ್ತಾರೆ. ಅನೇಕ ಸಾಧನಗಳನ್ನು ಬಲಗೈ ಬಳಕೆದಾರರಿಗೆ ವಿನ್ಯಾಸ ಮಾಡಿರುವುದರಿಂದ ಪ್ರಾಥಮಿಕವಾಗಿ ಇವರು ಅನೇಕ ಸಮಸ್ಯೆ ಎದುರಿಸುತ್ತಾರೆ. ಅಲ್ಲದೇ ಉದ್ದೇಶಪೂರ್ವಕ ತಾರತಮ್ಯವನ್ನು ಎದುರಿಸಬಹುದು. ಕೆಲವು ಸಮಾಜದಲ್ಲಿ ಇವರನ್ನು ಅದೃಷ್ಟಹೀನರು ಎಂದೂ ಭಾವಿಸುತ್ತಾರೆ.

ಜನಪ್ರಿಯ ಎಡಗೈ ಬಳಕೆದಾರರು: ಅಮಿತಾಬ್​​ ಬಚ್ಚನ್​, ಸಚಿನ್​ ತೆಂಡೂಲ್ಕರ್​, ಪ್ರಧಾನಿ ನರೇಂದ್ರ ಮೋದಿ, ರತನ್​ ಟಾಟಾ, ಕರಣ್​ ಜೋಹರ್​, ಕಪಿಲ್​ ಶರ್ಮಾ, ಪ್ರಿನ್ಸ್​ ವಿಲಿಯಂ, ಕಿನು ರೆವೆಸ್​, ಬುಜ್​ ಅಲ್ಡ್ರಿನ್​, ಒಪ್ರಾ ವಿನ್ಫ್ರೈ, ಜುಲಿಯಾ ರೊಬರ್ಟ್​​, ಲೆಬ್ರೊನ್​ ಜೇಮ್ಸ್​, ನೆಡ್​ ಫ್ಲಂಡರ್ಸ್​, ಲೇಡಿ ಗಾಗಾ, ಬರಾಕ್​ ಒಬಾಮ, ನಿಕೊಲಾ ಕಿಡ್ಮನ್​, ಜಾನ್​ ಸ್ಟೆವರ್ಟ್​​, ಬೆಬೆ ರುತ್​​, ಸ್ಕರ್ಲೆಟ್​​ ಜಾನ್ಸಾನ್​, ಹುಜ್​ ಜಾಕ್​ಮ್ಯಾನ್​, ಕಾರ್ಡಿ ಬಿ, ಬಿಲ್​ ಗೇಟ್ಸ್​​, ಎಂಜಲಿನಾ ಜೂಲಿ, ಜೂಡಿ ಗಾರ್ಲ್ಯಂಡ್​, ವಿಲ್​ ಫೆರ್ರೆಲ್​, ಮೊರ್ಗಾನ್​ ಫ್ರಿಮಾನ್​, ಡೇವಿಡ್​ ಬೊವಿ, ಸೆತ್​​ ರೊಜೆನ್​, ಸಂಡೆ ಕುಫಸ್​, ಮಾರ್ಕ್ ಜುಗರ್​ಬರ್ಗ್​​, ಟಿನಾ ಫೆಯ್ಸ್​.

ಇದನ್ನೂ ಓದಿ: 2036ಕ್ಕೆ 152 ಕೋಟಿ ತಲುಪಲಿರುವ ಭಾರತದ ಜನಸಂಖ್ಯೆ; ಮಹಿಳೆಯರ ಸಂಖ್ಯೆಯಲ್ಲಿ ಏರಿಕೆ, ಯುವಕರ ಸಂಖ್ಯೆ ಇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.