ETV Bharat / bharat

ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದೇ ದಿನಕ್ಕೆ ರಾಜೀನಾಮೆ ನೀಡಿದ ಸಿಕ್ಕಿಂ ಸಿಎಂ ಪತ್ನಿ: ಕಾರಣ ಇದು! - Sikkim CMs wife steps down as MLA

ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ತಮಾಂಗ್ ಅವರ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಕ್ಲೀನ್​ ಸ್ವೀಪ್​ ಮಾಡಿದೆ. ಈ ನಡುವೆ ಸಿಎಂ ಪತ್ನಿ ಎಂಎಲ್​ಎ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮರುಗಳಿಗೆಯಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Krishna Kumari Rai wife of Sikkim Chief Minister Prem Singh Tamang quit as the MLA
ಕೃಷ್ಣ ಕುಮಾರಿ ರೈ (ಕೃಪೆ: ಐಎಎನ್​ಎಸ್​​)
author img

By IANS

Published : Jun 14, 2024, 10:26 AM IST

ಗ್ಯಾಂಗ್ಟಕ್​, ಸಿಕ್ಕಿಂ: ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದೇ ದಿನದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್​ ಸಿಂಗ್​ ತಮಾಂಗ್​​ ಅವರ ಪತ್ನಿ ಕೃಷ್ಣ ಕುಮಾರಿ ರೈ ಸುದ್ದಿಯಾಗಿದ್ದಾರೆ. ನಾಮ್ಚಿ ಸಿಂಘಿತಾಂಗ್‌ ಕ್ಷೇತ್ರದಿಂದ ಅವರು ಆಯ್ಕೆಯಾಗಿದ್ದರು.

ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ತಮಾಂಗ್ ಅವರ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 32 ಸ್ಥಾನಗಳಲ್ಲಿ 31 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚನೆ ಮಾಡಿತ್ತು. ಅಲ್ಲದೇ ಈ ಪಕ್ಷ ಲೋಕಸಭೆಯಲ್ಲೂ ಒಂದು ಸ್ಥಾನ ಗೆದ್ದಿದೆ. ಆದರೆ, ಇದೀಗ ನಡೆದ ದಿಢೀರ್​ ಬೆಳವಣಿಗೆಯೊಂದರಲ್ಲಿ ಅವರು ಎಂಎಲ್​ಎ ಸ್ಥಾನ ತ್ಯಜಿಸಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಕ್ಕೆ ಕಾರಣ ತಿಳಿಸಿರುವ ಮುಖ್ಯಮಂತ್ರಿ, ಇದು ಪಕ್ಷದ ಸರ್ವಾನುಮತದ ನಿರ್ಣಯ ಎಂದಿದ್ದಾರೆ.

ಪಕ್ಷದ ಒಮ್ಮತದ ನಿರ್ಧಾರದ ಅನುಸಾರವಾಗಿ ತಮ್ಮ ಪತ್ನಿ ಶಾಸಕಿ ಸ್ಥಾನ ತೊರೆದಿದ್ದಾಳೆ, ಪಕ್ಷದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೃಷ್ಣ ಕುಮಾರಿ ರೈ ಅವರು, ಪಕ್ಷದ ಸಂಸದೀಯ ಸಮಿತಿ ಕೋರಿಕೆ ಮೇರೆಗೆ ಚುನಾವಣೆಗೆ ಸ್ಪರ್ಧಿಸಿದ್ದರು. ಸಿಕ್ಕಿಂ ಕ್ರಾಂತಿಕಾರಿ ಪಕ್ಷ ಸಮರ್ಥ ಮತ್ತು ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರಿಗೆ ಅವಕಾಶ ನೀಡಲು ಬದ್ಧವಾಗಿದೆ. ನಾಮ್ಚಿ ಸಿಂಗಿತಾಂಗ್ ಕ್ಷೇತ್ರದ ನಿವಾಸಿಗಳು ಇದೀಗ ಮತ್ತೊಂದು ಬಾರಿ ಅವರ ಹಿತಾಸಕ್ತಿಗೆ ಕೆಲಸ ಮಾಡುವ ಶಾಸಕರನ್ನು ಆಯ್ಕೆ ಮಾಡುವ ಭರವಸೆ ಇದೆ ಎಂದು ಸಿಎಂ ತಿಳಿಸಿದ್ದಾರೆ.

ರಾಜೀನಾಮೆಗೆ ಮುನ್ನ ಹೇಳಿಕೆ ನೀಡಿದ್ದ ಕೃಷ್ಣ ಕುಮಾರಿ ರೈ, ನಾಮ್ಚಿ ಸಿಂಗಿತಾಂಗ್​ ಕ್ಷೇತ್ರಕ್ಕೆ ನಾನು ಅಧಿಕೃತವಾಗಿ ರಾಜೀನಾಮೆಯನ್ನು ಸಲ್ಲಿಸುತ್ತಿದ್ದು, ಭಾರದ ಹೃದಯದಿಂದ ನಾನು ಈ ಕುರಿತು ತಿಳಿಸುತ್ತಿದ್ದೇನೆ. ನಾನು ರಾಜಕೀಯ ಪ್ರವೇಶ ಮಾಡುತ್ತೇನೆ ಎಂದು ಊಹಿಸಿರಲಿಲ್ಲ. ಜನರಿಂದ ಸಿಕ್ಕ ಅಪೂರ್ವ ಬೆಂಬಲದಿಂದ ನನ್ನ ಊಹೆಗೂ ನಿಲುಕದ ರೀತಿ ಗೆದ್ದು ಬಂದೆ, ಇದಕ್ಕಾಗಿ ನಾನು ಋಣಿಯಾಗಿರುತ್ತೇನೆ. ನಾನು ಸದಾ ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಯ ಕುರಿತು ಗಮನವನ್ನು ಕೇಂದ್ರೀಕರಿಸುತ್ತೇನೆ. ಇದೇ ಕಾರಣಕ್ಕೆ ನಾನು ಚುನಾವಣೆಗೆ ಪ್ರವೇಶಿಸಿದೆ. ನಮ್ಮ ಪಕ್ಷದ ಸಂಸದೀಯ ಮಂಡಳಿ ನಿರ್ಧಾರವನ್ನು ನಾನು ಗೌರವಿಸಿದ್ದೇನೆ ಎಂದರು.

ನಾಮ್ಚಿ - ಸಿಂಗಿತಂಗ್ ಕ್ಷೇತ್ರದ ಕಣಕ್ಕೆ ಇಳಿಯಲಿರುವ ಹೊಸ ಅಭ್ಯರ್ಥಿಯು ಜನರ ಸೇವೆ ಸಲ್ಲಿಸುವ ಬದ್ಧತೆ ಮತ್ತು ಸಮರ್ಪಿತ ವ್ಯಕ್ತಿಯಾಗಿರುತ್ತಾರೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ. ಇನ್ನು ರೈ ರಾಜೀನಾಮೆಯನ್ನು ಸ್ಪೀಕರ್​​ ಅಂಗೀಕರಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಚುನಾವಣೆ ಗೆದ್ದ ದಂಪತಿ: ಲೋಕಸಭೆಯಲ್ಲಿ ಕಾಣಸಿಗಲಿದೆ ಅಪರೂಪದ ಸಂಸದರ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.