ETV Bharat / bharat

ಕೇರಳದಲ್ಲಿ ಸಿಪಿಐ (ಎಂ) ಘಟಾನುಘಟಿ ನಾಯಕರ ಸೋಲು: ಸಿಎಂ ಪಿಣರಾಯಿ ವಿಜಯನ್​ಗೆ ಹಿನ್ನಡೆ - Lok Sabha Election Results 2024 - LOK SABHA ELECTION RESULTS 2024

ಕೇರಳದಲ್ಲಿ ಸಿಪಿಐ (ಎಂ) ನ ಹಲವಾರು ಹಿರಿಯ ನಾಯಕರು ಸೋಲಿನ ಅಂಚಿಗೆ ಬಂದಿದ್ದಾರೆ.

ಸಿಎಂ ಪಿಣರಾಯಿ ವಿಜಯನ್​
ಸಿಎಂ ಪಿಣರಾಯಿ ವಿಜಯನ್​ (IANS image)
author img

By ETV Bharat Karnataka Team

Published : Jun 4, 2024, 5:16 PM IST

ತಿರುವನಂತಪುರಂ : ಸಿಪಿಐ(ಎಂ)ನ ಹಿರಿಯ ನಾಯಕರಾದ ಕೆ.ಕೆ. ಶೈಲಜಾ, ಥಾಮಸ್ ಐಸಾಕ್, ಎ. ವಿಜಯರಾಘವನ್, ಎಲಮಾರಂ ಕರೀಂ, ಸಿ. ರವೀಂದ್ರನಾಥ್ ಮತ್ತು ಎಂ.ವಿ. ಜಯರಾಜನ್ ಅವರನ್ನೊಳಗೊಂಡ ಸಿಪಿಐ(ಎಂ)ನ ಅನೇಕ ಹಿರಿಯ ನಾಯಕರು ಲೋಕಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಹಿನ್ನಡೆಯಲ್ಲಿದ್ದಾರೆ. ಮತ ಎಣಿಕೆ ಇನ್ನೂ ಪೂರ್ಣಗೊಳ್ಳದಿದ್ದರೂ ಇವರ ಸೋಲು ಖಚಿತವಾಗಿದೆ. ಈ ಮೂಲಕ ಸಿಎಂ ಪಿಣರಾಯಿ ಅವರಿಗೂ ರಾಜಕೀಯವಾಗಿ ಹಿನ್ನಡೆ ಆದಂತಾಗಿದೆ.

ಸಿಪಿಐ (ಎಂ) ನ ಏಕೈಕ ಹಾಲಿ ಸಂಸದ ಅಲಪ್ಪುಳದ ಎಎಂ ಆರಿಫ್ ಅವರು ಕಾಂಗ್ರೆಸ್​ನ ಪ್ರಬಲ ನಾಯಕ ಮತ್ತು ಎರಡು ಬಾರಿ ಅಲಪ್ಪುಳದ ಮಾಜಿ ಸಂಸದ ಕೆ.ಸಿ. ವೇಣುಗೋಪಾಲ್ ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಎಡಪಕ್ಷಗಳ ಪ್ರಚಾರದ ನೇತೃತ್ವ ವಹಿಸಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಇರುವ ಏಕೈಕ ಸಮಾಧಾನವೆಂದರೆ ಅವರ ಕ್ಯಾಬಿನೆಟ್ ಸಹೋದ್ಯೋಗಿ ಕೆ ರಾಧಾಕೃಷ್ಣನ್ ಅವರು ಸುಮಾರು 20,000 ಮತಗಳ ಮುನ್ನಡೆ ಕಾಯ್ದುಕೊಂಡಿರುವುದು ಮತ್ತು ಅಟ್ಟಿಂಗಲ್​ನಲ್ಲಿ ಪಕ್ಷದ ಶಾಸಕ ವಿ ಜಾಯ್ ಸುಮಾರು 2,000 ಮತಗಳಿಂದ ಮುಂದಿರುವುದು.

ಪಕ್ಷದ ಜನಪ್ರಿಯ ಶಾಸಕಿ ಮತ್ತು ಮಾಜಿ ಆರೋಗ್ಯ ಸಚಿವೆ ಶೈಲಜಾ ಅವರು ಯುವ ಕಾಂಗ್ರೆಸ್ ಶಾಸಕ ಶಫಿ ಪರಂಬಿಲ್ ವಿರುದ್ಧ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋತಿರುವುದು ದೊಡ್ಡ ಆಘಾತವಾಗಿದೆ. ಹಾಲಿ ರಾಜ್ಯಸಭಾ ಸದಸ್ಯ ಮತ್ತು ಮಾಜಿ ರಾಜ್ಯ ಕೈಗಾರಿಕಾ ಸಚಿವ ಎಳಮಾರಮ್ ಕರೀಮ್ ಅವರು ಕೋಝಿಕೋಡ್​ನಲ್ಲಿ ಹಾಲಿ ಕಾಂಗ್ರೆಸ್ ಸಂಸದರಿಗಿಂತ 1.40 ಲಕ್ಷ ಮತಗಳಿಂದ ಹಿಂದುಳಿದಿದ್ದಾರೆ.

ಕಣ್ಣೂರಿನ ಪ್ರಬಲ ನಾಯಕ ಮತ್ತು ಸಿಎಂ ವಿಜಯನ್ ಅವರ ಆಪ್ತ ಎಂ.ವಿ. ಜಯರಾಜನ್ ಅವರು ಹಾಲಿ ಕಾಂಗ್ರೆಸ್ ಸಂಸದ ಕೆ.ಸುಧಾಕರನ್ ವಿರುದ್ಧ ತಮ್ಮ ತವರು ನೆಲದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ. ಸಿಪಿಐ (ಎಂ) ಪಾಲಿಟ್ ಬ್ಯೂರೋ ಸದಸ್ಯ ಎ.ವಿಜಯರಾಘವನ್ ಅವರು ಕಾಂಗ್ರೆಸ್ ಸಂಸದ ವಿ.ಕೆ. ಶ್ರೀಕಂದನ್ ಎದುರು ಸೋಲು ಕಂಡಿದ್ದಾರೆ. ಮಾಜಿ ರಾಜ್ಯ ಶಿಕ್ಷಣ ಸಚಿವ ಸಿಪಿಐ (ಎಂ) ನಾಯಕ ಸಿ ರವೀಂದ್ರನಾಥ್ ಅವರು ಹಾಲಿ ಕಾಂಗ್ರೆಸ್ ಸಂಸದ ಬೆನ್ನಿ ಬೆಹನನ್ ವಿರುದ್ಧ ಸೋತಿದ್ದಾರೆ. "ಫಲಿತಾಂಶವನ್ನು ಘೋಷಿಸದಿದ್ದರೂ, ನಾನು ಗೆಲ್ಲುತ್ತೇನೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ" ಎಂದು ರಾಧಾಕೃಷ್ಣನ್ ಹೇಳಿದರು.

ಎಡಪಕ್ಷಗಳ ಪ್ರಚಾರದ ನೇತೃತ್ವ ವಹಿಸಿದ್ದ ಮತ್ತು ತಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಕೊನೆಯ ಮಾತಾಗಿದ್ದ ಸಿಎಂ ಪಿಣರಾಯಿ ವಿಜಯನ್ ಅನುಭವಿಗಳನ್ನೇ ಕಣಕ್ಕಿಳಿಸಿದ್ದರು. ಆದರೂ ರಾಜಕೀಯ ಪರಿಸ್ಥಿತಿಗಳು ಅವರಿಗೆ ಪ್ರತಿಕೂಲವಾಗಿ ಪರಿಣಮಿಸಿವೆ.

ಇದನ್ನೂ ಓದಿ : ಉತ್ತರ ಪ್ರದೇಶದಲ್ಲಿ ಬಿಜೆಪಿಯ ಘಟಾನುಘಟಿಗಳಿಗೆ ಮತದಾರ ಶಾಕ್; ಸ್ಮೃತಿ, ಮೇನಕಾ ಸೇರಿ ಯಾರಿಗೆಲ್ಲ ಹಿನ್ನಡೆ? - uttar pradesh Lok Sabha Results 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.