ತಿರುವನಂತಪುರ: ಈಗಾಗಲೇ ನಿರಂತರ ಮಳೆಗೆ ನಲುಗಿರುವ ಕೇರಳದಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸದ್ಯ ಇರುವ ಹವಾಮಾನ ಪರಿಸ್ಥಿತಿ ಮತ್ತು ಮಳೆ ಮಾರುತಗಳು ಮುಂದುವರೆಯಲಿವೆ ಎಂದೂ ತಿಳಿಸಿದೆ.
ಉತ್ತರ ಕೇರಳದ ಕರಾವಳಿಯಿಂದ ದಕ್ಷಿಣ ಗುಜರಾತ್ ಕರಾವಳಿವರೆಗೆ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದ್ದು, ಮತ್ತೊಂದು ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ಗುರುತಿಸಲಾಗಿದೆ. ಕೇರಳದ ಕರಾವಳಿಯುದ್ದಕ್ಕೂ ಪಶ್ಚಿಮ, ವಾಯುವ್ಯ ಮಾರುತದಿಂದಾಗಿ ದಕ್ಷಿಣ ರಾಜ್ಯಗಳಿಗೆ ಮುಂದಿನ ಐದು ದಿನ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.
ಕೋಝಿಕ್ಕೋಡ್, ವಯನಾಡ್, ಕಣ್ಣೂರಿನಲ್ಲಿ ಆರೆಂಜ್ ಅಲರ್ಟ್ (6 ಸೆ.ಮೀನಿಂದ 20 ಸೆ.ಮೀ ಮಳೆ) ಮತ್ತು ಕಾಸರಗೋಡು ಸೇರಿದಂತೆ ಐದು ಜಿಲ್ಲೆಗಳಿಗಗೆ ಯೆಲ್ಲೋ ಅಲರ್ಟ್ (6 ರಿಂದ 11 ಸೆ.ಮೀ ಮಳೆ) ಘೋಷಣೆ ಮಾಡಲಾಗಿದೆ.
ಕರ್ನಾಟಕದಲ್ಲೂ ಮುಂದುವರೆಯಲಿರುವ ಮಳೆ: ಕರ್ನಾಟಕದ ಕರಾವಳಿ ಸೇರಿದಂತೆ ದಕ್ಷಿಣ ಒಳನಾಡಿನಲ್ಲೂ ಕೂಡ ಮುಂದಿನ ಐದು ದಿನ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಈ ವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.
ಇದನ್ನೂ ಓದಿ: ಹಾವೇರಿ: ನಿರಂತರ ಮಳೆಗೆ ಮನೆ ಮೇಲ್ಚಾವಣಿ ಕುಸಿದು ಮೂವರು ಸಾವು, ಮೂವರಿಗೆ ಗಾಯ