ETV Bharat / bharat

ಗ್ಯಾಂಗ್​​ಸ್ಟರ್​​ ಲಾರೆನ್ಸ್​ ಬಿಷ್ಣೋಯಿ ಹತ್ಯೆಗೆ ₹1,11,11,111 ಬಹುಮಾನ ಘೋಷಿಸಿದ ಕರ್ಣಿ ಸೇನೆ - GANGSTER BISHNOI

ಗ್ಯಾಂಗ್​​ಸ್ಟರ್​​ ಲಾರೆನ್ಸ್​ ಬಿಷ್ಣೋಯಿಯನ್ನು ಹತ್ಯೆ ಮಾಡಲು ಕರ್ಣಿ ಸೇನೆ ಬಹುಮಾನ ಘೋಷಿಸಿದೆ. ತನ್ನ ನಾಯಕನ ಕೊಲೆಯ ಸೇಡು ತೀರಿಸಿಕೊಳ್ಳಲು ಅದು ಮುಂದಾಗಿದೆ.

ಗ್ಯಾಂಗ್​​ಸ್ಟರ್​​ ಲಾರೆನ್ಸ್​ ಬಿಷ್ಣೋಯಿ
ಗ್ಯಾಂಗ್​​ಸ್ಟರ್​​ ಲಾರೆನ್ಸ್​ ಬಿಷ್ಣೋಯಿ (ETV Bharat)
author img

By ETV Bharat Karnataka Team

Published : Oct 22, 2024, 7:45 PM IST

ನವದೆಹಲಿ: ಎನ್​ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ, ಬಾಲಿವುಡ್ ನಟ ಸಲ್ಮಾನ್​ ಖಾನ್​ ಕೊಲೆಗೆ ಸಂಚು ಆರೋಪ ಸೇರಿದಂತೆ ಹಲವು ಪಾತಕ ಪ್ರಕರಣಗಳಲ್ಲಿ ಸಿಲುಕಿ ಜೈಲಿನಲ್ಲಿರುವ ಗ್ಯಾಂಗ್​​ಸ್ಟರ್​​ ಲಾರೆನ್ಸ್​​ ಬಿಷ್ಣೋಯಿ ತಲೆಗೆ ಕ್ಷತ್ರಿಯ ಕರ್ಣಿ ಸೇನೆ ಬಹುಮಾನ ಘೋಷಿಸಿದೆ.

ಜೈಲಿನಲ್ಲಿರುವ ಬಿಷ್ಣೋಯಿ ಕೊಂದರೆ 1 ಕೋಟಿ ರೂಪಾಯಿ ನಗದು ಬಹುಮಾನ ನೀಡುವುದಾಗಿ ಕ್ಷತ್ರಿಯ ಕರ್ಣಿ ಸೇನೆ ಪೊಲೀಸರಿಗೆ ನೇರ ಆಫರ್​​ ನೀಡಿದೆ. ಈ ಬಗ್ಗೆ ಅದರ ಮುಖ್ಯಸ್ಥ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಪಾತಕಿ ಕೊಂದರೆ ಕೋಟಿ ರೂಪಾಯಿ: ಗ್ಯಾಂಗ್​​ಸ್ಟರ್​​ ಲಾರೆನ್ಸ್ ಬಿಷ್ಣೋಯಿಯನ್ನು ಎನ್‌ಕೌಂಟರ್‌ನಲ್ಲಿ ಕೊಂದ ಯಾವುದೇ ಪೊಲೀಸ್ ಅಧಿಕಾರಿಗೆ ನಗದು ಬಹುಮಾನ ನೀಡಲಾಗುವುದು. ಪಾತಕಿಯನ್ನು ಕೊಂದವರಿಗೆ ಒಂದು ಕೋಟಿ ಹನ್ನೊಂದು ಲಕ್ಷದ ಹನ್ನೊಂದು ಸಾವಿರ ನೂರಾ ಹನ್ನೊಂದು ರೂಪಾಯಿ (₹1,11,11,111) ಕೊಡಲಾಗುವುದು ಎಂದು ಕ್ಷತ್ರಿಯ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜ್‌ ಶೆಖಾವತ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಾಜ್ ಶೇಖಾವತ್ ಅವರು ಹೇಳುವಂತೆ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ ಅಮರ್ ಶಹೀದ್ ಸುಖದೇವ್ ಸಿಂಗ್ ಗೊಗಮೆಡಿ ಅವರ ಹತ್ಯೆಗೆ ಕಾರಣ. ಹೀಗಾಗಿ ಆ ಗುಂಪಿನ ನಾಯಕ ಎಂದು ಗುರುತಿಸಿಕೊಂಡಿರುವ ಲಾರೆನ್ಸ್​ ಬಿಷ್ಣೋಯಿ ಎನ್​ಕೌಂಟರ್​ ಆಗಬೇಕು ಎಂದು ಕರ್ಣಿ ಸೇನೆಯ ಮುಖ್ಯಸ್ಥರು ಗುಡುಗಿದ್ದಾರೆ.

ಕರ್ಣಿ ಸೇನೆ ಮುಖ್ಯಸ್ಥನ ಹತ್ಯೆ ಕೇಸ್: ಕರ್ಣಿ ಸೇನೆಯ ಮುಖ್ಯಸ್ಥರಾಗಿದ್ದ ಗೋಗಮೇಡಿ ಅವರನ್ನು 2023ರ ಡಿಸೆಂಬರ್​​ 5ರಂದು ರಾಜಸ್ಥಾನದ ಜೈಪುರದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಹತ್ಯೆಯ ಕೆಲವೇ ಗಂಟೆಗಳ ನಂತರ ಲಾರೆನ್ಸ್​​ ಬಿಷ್ಣೋಯಿ ಗ್ಯಾಂಗ್​ ದಾಳಿಯ ಹೊಣೆ ಹೊತ್ತಿದ್ದನು. ಗ್ಯಾಂಗ್​​ನಲ್ಲಿ ಗುರುತಿಸಿಕೊಂಡಿದ್ದ ಆರೋಪಿ ರೋಹಿತ್​ ಗೋಡಾರಾ ಕೊಲೆ ಮಾಡಿದ್ದು ತಾನೇ ಎಂದು ಹೇಳಿಕೊಂಡಿದ್ದ. ಇದೀಗ ಆತ, ಹೆಸರು ಬದಲಿಸಿಕೊಂಡು ಕೆನಡಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಗ್ಯಾಂಗ್​​ಸ್ಟರ್​​ ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ ಅಕ್ಟೋಬರ್​ 12ರಂದು ಎನ್​ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪ ಹೊತ್ತಿದೆ. ಇತ್ತ, ಬಾಲಿವುಡ್​​ ನಟ ಸಲ್ಮಾನ್​ ಖಾನ್​ ಅವರ ಹತ್ಯೆಗೂ ಸಂಚು ರೂಪಿಸಿದ ಬಗ್ಗೆ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಲಾರೆನ್ಸ್​ ಬಿಷ್ಣೋಯಿ ಜೈಲಿನಲ್ಲಿದ್ದುಕೊಂಡೇ ಪಾತಕಿಗಳ ಗುಂಪಿನ ನೇತೃತ್ವ ವಹಿಸಿದ್ದಾನೆ.

ಇದನ್ನೂ ಓದಿ: ರಜಪೂತ​ ಕರ್ಣಿ ಸೇನಾ ಮುಖ್ಯಸ್ಥನಿಗೆ ಗುಂಡಿಕ್ಕಿ ಹತ್ಯೆ, ಹೊಣೆ ಹೊತ್ತ ಬಿಷ್ಣೋಯ್ ಗ್ಯಾಂಗ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.