ಚಂಡೀಗಢ್: ಬಾಲಿವುಡ್ ನಟಿ, ನೂತನ ಬಿಜೆಪಿ ಸಂಸದೆ ಕಂಗನಾ ರನೌತ್ ಅವರಿಗೆ ಸಿಐಎಸ್ಎಫ್ ಮಹಿಳಾ ಕಾನ್ಸ್‌ಟೇಬಲ್‌ವೊಬ್ಬರು ಕಪಾಳಕ್ಕೆ ಹೊಡೆದಿರುವ ಘಟನೆ ಇಂದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ವರದಿಯಾಗಿದೆ. ಆರೋಪಿ ಕಾನ್ಸ್‌ಟೇಬಲ್ ಅನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಐಎಫ್ಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಗೆ ಪ್ರಯಾಣಿಸಲು ಕಂಗನಾ ರನೌತ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ತಪಾಸಣೆ ಸಂದರ್ಭದಲ್ಲಿ ಅವರಿಗೆ ಕಾನ್ಸ್‌ಟೇಬಲ್ ಕಪಾಳಕ್ಕೆ ಬಾರಿಸಿದ್ದಾರೆ ಎಂದು ಕಂಗನಾ ಆಪ್ತರೊಬ್ಬರು ದೂರಿದ್ದಾರೆ.
ರೈತರ ಆಂದೋಲನದ ಸಂದರ್ಭದಲ್ಲಿ ಕಂಗನಾ ಖಲಿಸ್ತಾನಿಗಳ ಕುರಿತು ಕುರಿತು ಹೇಳಿಕೆ ನೀಡಿರುವುದಕ್ಕೆ ಕೋಪಗೊಂಡು ಹಲ್ಲೆ ನಡೆಸಲಾಗಿದೆ. ಆದರೆ, ಘಟನೆಯ ಕುರಿತು ಸಂಪೂರ್ಣ ಮಾಹಿತಿ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ಆರೋಪಿ ಕಾನ್ಸ್‌ಟೇಬಲ್ ಪ್ರತಿಕ್ರಿಯಿಸಿ, "100 ರೂಪಾಯಿಗಾಗಿ ರೈತರು ಪ್ರತಿಭಟನೆ ಕುಳಿತಿದ್ದಾರೆ ಎಂದು ಕಂಗನಾ ಹೇಳಿಕ ನೀಡಿದ್ದರು. ಹಾಗಾದರೆ ಅವರು ಕೂಡಾ ಪ್ರತಿಭಟನೆಗೆ ಕುಳಿತುಕೊಳ್ಳುತ್ತಾರೆಯೇ?. ಆಕೆ ಹೇಳಿಕೆ ನೀಡಿದ್ದ ಸಂದರ್ಭದಲ್ಲಿ ನನ್ನ ತಾಯಿಯೂ ಪ್ರತಿಭಟನೆ ಕುಳಿತಿದ್ದರು" ಎಂದು ಹೇಳಿದರು.
ಘಟನೆ ಖಚಿತಪಡಿಸಿದ ನಟಿ: ಕಂಗನಾ ರನೌತ್ ಖುದ್ದು ಘಟನೆಯನ್ನು ಖಚಿತಪಡಿಸಿದ್ದಾರೆ. ''ನನ್ನ ಮುಖಕ್ಕೆ ಬಾರಿಸಿ, ನಿಂದಿಸಿದ್ದಾರೆ. ನಾನು ಸುರಕ್ಷಿತವಾಗಿದ್ದೇನೆ. ಪಂಜಾಬ್‌ನಲ್ಲಿ ಭಯೋತ್ಪಾದನೆಯ ಬಗ್ಗೆ ಕಳವಳವಿದೆ'' ಎಂದು ಹೇಳಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿಯಾಗಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಂಗನಾ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ನ ವಿಕ್ರಮಾದಿತ್ಯ ಸಿಂಗ್ ವಿರುದ್ಧ 74,000 ಮತಗಳ ಅಂತರದ ಜಯ ದಾಖಲಿಸಿದ್ದಾರೆ.
ಇದನ್ನೂ ಓದಿ: ಶಾರುಖ್ ಒಡೆತನದ ಚಲನಚಿತ್ರ ನಿರ್ಮಾಣ ಸಂಸ್ಥೆ ಹೆಸರಲ್ಲಿ ಫೇಕ್ ಆಫರ್ ಲೆಟರ್: ಎಚ್ಚರ ವಹಿಸುವಂತೆ ಸೂಚನೆ