ETV Bharat / bharat

ರೈಲು ಅಪಘಾತ: ಸಮಯ ಪ್ರಜ್ಞೆ ಮೆರೆದು ಹಲವು ಜನರ ಪ್ರಾಣ ಉಳಿಸಿದ ಚಹಾ ಮಾರುವ ವ್ಯಕ್ತಿ - Jharkhand Train Accident - JHARKHAND TRAIN ACCIDENT

ಜಾರ್ಖಂಡ್​ನಲ್ಲಿ ರೈಲು ಅಪಘಾತ ನಡೆದ ಸಂದರ್ಭದಲ್ಲಿ ಸಮಯ ಪ್ರಜ್ಞೆ ಮೆರೆದ ಚಹಾ ಮಾರುವ ವ್ಯಕ್ತಿಯೋರ್ವ ಹಲವು ಜನರ ಪ್ರಾಣ ಉಳಿಸಿದ್ದಾರೆ.

RUMOR OF FIRE IN TRAIN IN KUMANDI  FIRE IN TRAIN IN LATEHAR  LATEHAR KUMANDI ACCIDENT  The tea seller saved many lives
ಜಾರ್ಖಂಡ್​ನಲ್ಲಿ ರೈಲು ಅಪಘಾತದ ನಂತರ ಕಂಡಬಂದ ದೃಶ್ಯಗಳು (ETV Bharat)
author img

By ETV Bharat Karnataka Team

Published : Jun 15, 2024, 12:01 PM IST

ಪಲಮು (ಜಾರ್ಖಂಡ್​): ಲತೇಹಾರ್‌ನ ಕುಮುಂಡಿಹ್‌ನಲ್ಲಿ ಸಂಭವಿಸಿದ ರೈಲು ಅಪಘಾತ ನಡೆದ ಸಂದರ್ಭದಲ್ಲಿ ಸಮಯ ಪ್ರಜ್ಞೆ ಮೆರೆದ ಚಹಾ ಮಾರುವ ವ್ಯಕ್ತಿ, ರೈಲಿನಲ್ಲಿ ಸಿಲುಕಿಕೊಂಡಿದ್ದ ಅನೇಕ ಪ್ರಯಾಣಿಕರನ್ನು ದೇವರಂತೆ ಕಾಪಾಡಿದ್ದಾನೆ. ಹೌದು, ಚಹಾ ಮಾರುವವನು ಅನೇಕ ಪ್ರಯಾಣಿಕರ ಜೀವ ಉಳಿಸಿದ್ದಾನೆ.

ಜಾರ್ಖಂಡ್​ನ ಲತೇಹರ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ರೈಲು ಅಪಘಾತ ನಡೆದಿದೆ. ಈ ಘಟನೆಯಲ್ಲಿ ಈವರೆಗೆ ಇಬ್ಬರು ಪುರುಷರು, ಒಬ್ಬ ಮಹಿಳೆ ಸೇರಿ ಮೂವರು ಸಾವನ್ನಪ್ಪಿದ್ಧಾರೆ. ಹಲವು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಬನಾರಸ್- ರಾಂಚಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಇಲ್ಲಿನ ಕುಮಾಂಡಿಹ್ ರೈಲು ನಿಲ್ದಾಣ ತಲುಪಿದ ತಕ್ಷಣವೇ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಗ ವ್ಯಕ್ತಿಯೊಬ್ಬರು ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿ, ಇತರರಿಗೆ ಎಚ್ಚರಿಸಿದ್ದಾರೆ. ಈ ವಿಚಾರ ಕಾಳ್ಗಿಚ್ಚಿನಂತೆ ಹಬ್ಬಿದ್ದರಿಂದ ಪ್ರಯಾಣಿಕರು ಆತಂಕದಿಂದ ರೈಲಿನಿಂದ ಕೆಳಗಿಳಿದು ಓಡಲಾರಂಭಿಸಿದ್ದಾರೆ.

ಇದೇ ಸಮಯದಲ್ಲಿ ಎದುರುಗಡೆಯಿಂದ ಗೂಡ್ಸ್ ರೈಲು ಬಂದಿದೆ. ವದಂತಿ ಕೇಳಿ ನೂಕುನುಗ್ಗಲು ಉಂಟಾಗಿದೆ. ಕೆಲವರು ರೈಲಿನಿಂದ ಕೆಳಗಿಳಿದು ಪಕ್ಕದ ಹಳಿಗೆ ತೆರಳಿದ್ದಾರೆ. ಆಗ ಪಕ್ಕದ ಹಳಿಯಲ್ಲಿ ಹಾದು ಹೋಗುತ್ತಿದ್ದ ಗೂಡ್ಸ್ ಟ್ರೈನ್​ ಪ್ರಯಾಣಿಕರಿಗೆ ಢಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವು ಜನರು ಗಾಯಗೊಂಡಿದ್ದಾರೆ.

ಟ್ರ್ಯಾಕ್‌ನಿಂದ ಅನೇಕ ಜನರನ್ನು ಎಳೆದು ರಕ್ಷಿಸಿದ ಟೀ ಮಾರುವ ವ್ಯಕ್ತಿ: ರೈಲಿನಲ್ಲಿ ಟೀ ಮಾರುತ್ತಿದ್ದ ವ್ಯಕ್ತಿ ಕೂಡ ಪ್ರಯಾಣಿಕರೊಂದಿಗೆ ರೈಲಿನಿಂದ ಕೆಳಗಿಳಿದಿದ್ದಾನೆ. ಗೂಡ್ಸ್ ರೈಲು ಹಳಿಯಲ್ಲಿ ಬರುತ್ತಿರುವುದನ್ನು ನೋಡಿದ ಆತ, ಜೋರಾಗಿ ಕೂಗುವ ಮೂಲಕ ಹಲವರನ್ನು ಹಳಿಯಿಂದ ಹೊರಕ್ಕೆ ಎಳೆದಿದ್ದಾನೆ. ಚಹಾ ಮಾರುವ ವ್ಯಕ್ತಿ ಅನೇಕ ಜನರನ್ನು ಹಳಿ ಅಡಿ ಸಿಲುಕಿಕೊಳ್ಳುವುದರಿಂದ ತಪ್ಪಿಸಿದ್ದಾರೆ. ಹಲವು ಜನರನ್ನು ಟ್ರ್ಯಾಕ್ ಮೇಲೆ ಹೋಗದಂತೆ ತಡೆದರು ಎಂದು ಮಹಿಳಾ ರೈಲ್ವೆ ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ರೈಲ್ವೆ ಪ್ರಯಾಣಿಕ ಹೇಳಿದ್ದೇನು?: ರೈಲ್ವೆ ಪ್ರಯಾಣಿಕ ಮಹೇಶ್ ಪ್ರತಿಕ್ರಿಯಿಸಿ, ''ತಾನು ರಾಂಚಿಯಿಂದ ಸಸಾರಂಗೆ ಹೋಗುತ್ತಿದ್ದೇನೆ. ಎಂಜಿನ್​ನಲ್ಲಿ ಬೆಂಕಿ ತಗುಲಿರುವ ವಿಚಾರ ತಿಳಿದು ರೈಲಿನಿಂದ ಕೆಳಗಿಳಿದಿದ್ದೆ. ಪಕ್ಕದ ಹಳಿಯಲ್ಲಿ ಗೂಡ್ಸ್​ ಟ್ರೈನ್​ ಬಂದಿದೆ, ಆಗ ಟೀ ಮಾರುವವನು ಧೈರ್ಯ ತೋರಿ ಜನರನ್ನು ಆ ಹಳಿ ಮೇಲೆ ನಿಂತಿದ್ದವರನ್ನು ಎಳೆದು ರಕ್ಷಣೆ ಮಾಡಿದ್ದಾನೆ.

ಕುಮಾಂಡಿಹ್‌ನಲ್ಲಿ ಅನೇಕ ರೈಲ್ವೆ ಪ್ರಯಾಣಿಕರ ಪ್ರಾಣ ಉಳಿಸಿದ ಆ ಚಹಾ ಮಾರುವ ವ್ಯಕ್ತಿ ಯಾರೆಂದು ಯಾರಿಗೂ ತಿಳಿದಿಲ್ಲ. ಈ ಪ್ರದೇಶದಲ್ಲಿ ಯಾರು ಚಹಾ ಮಾರುತ್ತಿದ್ದಾರೆ ಎಂಬ ಬಗ್ಗೆ ಇನ್ನು ಮಾಹಿತಿ ಬಹಿರಂಗವಾಗಿಲ್ಲ.

ಇದನ್ನೂ ಓದಿ: ಬೋರ್‌ವೆಲ್‌ ದುರಂತ; ಒಂದೂವರೆ ವರ್ಷದ ಬಾಲಕಿ ಸಾವು - GIRL FALLs INto BOREWELL

ETV Bharat Logo

Copyright © 2024 Ushodaya Enterprises Pvt. Ltd., All Rights Reserved.