ರಾಂಚಿ (ಜಾರ್ಖಂಡ್): ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ಗೆ ಜಾರ್ಖಂಡ್ ಹೈಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ನ್ಯಾಯಮೂರ್ತಿ ರಂಗನ್ ಮುಖೋಪಾಧ್ಯಾಯ ಅವರಿದ್ದ ನ್ಯಾಯಪೀಠವು ಹೇಮಂತ್ ಸೊರೇನ್‌ಗೆ ಸಾಮಾನ್ಯ ಜಾಮೀನು ನೀಡಿದೆ. ಜೂನ್ 13ರಂದು ಹೇಮಂತ್ ಸೊರೇನ್ ಪರ ವಕೀಲರು ಹಾಗೂ ಜಾರಿ ನಿರ್ದೇಶನಾಲಯದ ಎಎಸ್‌ಜಿ ಎಸ್.ವಿ. ರಾಜು ಅವರ ವಾದ, ಪ್ರತಿವಾದಗಳನ್ನು ಆಲಿಸಿದ ಬಳಿಕ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.
ರಾಂಚಿಯ ಬಡಗೈ ಪ್ರದೇಶದಲ್ಲಿ 8.86 ಎಕರೆ ಭೂಮಿ ಕಬಳಿಕೆ ಪ್ರಕರಣದಲ್ಲಿ ಇಡಿ ಜನವರಿ 31 ರಂದು ಮಾಜಿ ಸಿಎಂ ಹೇಮಂತ್ ಸೊರೆನ್ ಅವರನ್ನು ಬಂಧಿಸಿತ್ತು. ಅಂದಿನಿಂದ ಅವರು ರಾಂಚಿಯ ಬಿರ್ಸಾ ಮುಂಡಾ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ಜಾಮೀನು ಅರ್ಜಿ ವಿಚಾರಣೆ ವೇಳೆ ಅವರ ಪರ ವಕೀಲ ಕಪಿಲ್ ಸಿಬಲ್ ತಮ್ಮ ವಾದದಲ್ಲಿ ಈ ಪ್ರಕರಣ ಸಿವಿಲ್ ಸ್ವರೂಪದ್ದು ಎಂದು ಹೇಳಿದ್ದರು. ಭೂಮಿಯನ್ನು ಭೂರಹಿತ ಎಂದು ಬಣ್ಣಿಸಿ, ಅದನ್ನು ವರ್ಗಾಯಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ಅಕ್ರಮ ಹಣ ವರ್ಗಾವಣೆಯಾಗಿಲ್ಲ.
ಇಡಿ ಪರ ವಕೀಲರ ವಾದ: ಅದೇ ಸಮಯದಲ್ಲಿ, ಹೇಮಂತ್ ಸೊರೇನ್ ಅವರು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕಾರಿಗಳ ಸಹಾಯವನ್ನು ತೆಗೆದುಕೊಂಡಿದ್ದಾರೆ ಎಂದು ಇಡಿ ಪರವಾಗಿ ಹೇಳಲಾಗಿದೆ. ನಿಜವಾಗಿ ಆ ಭೂಮಿ ಅವರಿಗೆ ಸೇರಿದ್ದು, ಅವರ ಮಾಜಿ ರಾಜಕೀಯ ಸಲಹೆಗಾರರೂ ಇದನ್ನು ಒಪ್ಪಿಕೊಂಡಿದ್ದಾರೆ. ಭೂ ಹಗರಣ ಪ್ರಕರಣದಲ್ಲಿ ಬಂಧಿತರಾಗಿರುವ ಕಂದಾಯ ನೌಕರ ಭಾನು ಪ್ರತಾಪ್ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಇಡಿ ಹೇಳಿಕೊಂಡಿದೆ.
ಅಷ್ಟೇ ಅಲ್ಲ, ಸಂಬಂಧಪಟ್ಟ ಜಮೀನಿನಲ್ಲಿ ಬ್ಯಾಂಕ್ವೆಟ್ ಹಾಲ್ ನಿರ್ಮಿಸುವ ಯೋಜನೆಯೂ ಇತ್ತು. ಆರ್ಕಿಟೆಕ್ಟ್ ವಿನೋದ್ ಸಿಂಗ್ ಅವರು ಹೇಮಂತ್ ಸೊರೆನ್ ಅವರ ಮೊಬೈಲ್‌ನಲ್ಲಿ ಇದಕ್ಕೆ ಸಂಬಂಧಿಸಿದ ನಕ್ಷೆಯನ್ನೂ ಕಳುಹಿಸಿದ್ದರು. ಹೇಮಂತ್ ಸೊರೇನ್‌ಗೆ ಜಾಮೀನು ಸಿಕ್ಕರೆ, ಸರ್ಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತನಿಖೆಗೆ ಅಡ್ಡಿಯಾಗಬಹುದು ಎಂದು ಇಡಿ ಪರ ವಕೀಲರು ತಮ್ಮ ವಾದ ಮಂಡಿಸಿದ್ದಾರೆ.