ಕೋಟಾ (ರಾಜಸ್ಥಾನ): ಜಂಟಿ ಪ್ರವೇಶ ಪರೀಕ್ಷೆ (JEE) ಮೇನ್ಸ್ 2024ರ ಸೆಷನ್ 2ರ ನೋಂದಣಿ ದಿನಾಂಕವನ್ನು ಮಾ.4ರ ವರೆಗೆ ವಿಸ್ತರಿಸಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಆದೇಶ ಮಾಡಿದೆ.
JEE ಮೇನ್ಸ್ ಸೆಷನ್ 2ರ ನೋಂದಣಿ ಪ್ರಕ್ರಿಯೆಯು ಫೆ.2 ರಿಂದ ಪ್ರಾರಂಭವಾಗಿತ್ತು. ಮಾ.2ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಇದೀಗ ಮಾರ್ಚ್ 04 ರ ವರೆಗೆ ವಿಸ್ತರಿಸಲಾಗಿದೆ.
ಇನ್ನೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ಈ ಅಧಿಕೃತ ವೆಬ್ಸೈಟ್ಗೆ ತೆರಳಿ jeemain.nta.ac.in ನಾಳೆ (ಸೋಮವಾರ) ರಾತ್ರಿ 10:50ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ ಅರ್ಜಿ ಶುಲ್ಕವನ್ನು ಪಾವತಿಸಲು ಮಾ. 4 ರಾತ್ರಿ 11:50ರ ವರೆಗೆ ಸಮಯಾವಕಾಶ ಇರಲಿದೆ. ಅಪ್ಲಿಕೇಶನ್ ವಿಂಡೋ ರಾತ್ರಿ 10:50ಕ್ಕೆ ಕ್ಲೋಸ್ ಆಗಲಿದ್ದು, ಶುಲ್ಕ ಪಾವತಿ ವಿಂಡೋ ರಾತ್ರಿ 11:50ಕ್ಕೆ ಮುಚ್ಚಲಾಗುತ್ತದೆ. ಜೆಇಇ ಮೇನ್ಸ್ ಸೆಷನ್ 2 ಪರೀಕ್ಷೆ ಏ.1 ರಿಂದ ಏ.15ರ ವರೆಗೆ ನಡೆಯಲಿವೆ.
ಪರೀಕ್ಷೆ ಶುಲ್ಕ ವಿಧಾನ: ಅರ್ಜಿ ಸಲ್ಲಿಸಿದ ಬಳಿಕ ಡೆಬಿಟ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕವನ್ನು ಪಾವತಿಸಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವೇಳೆ ಯಾವುದೇ ತಪ್ಪುಗಳು ಆದಲ್ಲಿ ಮಾರ್ಚ್ 6 ಮತ್ತು 7 ರಂದು ಸರಿಪಡಿಸಲು ಅವಕಾಶ ನೀಡಲಾಗುತ್ತದೆ. ಇದಕ್ಕಾಗಿ ತಿದ್ದುಪಡಿ ವಿಂಡೋವನ್ನು ಸಹ ತೆರೆಯಲಾಗುತ್ತದೆ.
ಶುಲ್ಕದ ವಿವರ: ಪೇಪರ್ 1 ಅಥವಾ ಪೇಪರ್ 2ಗಾಗಿ ಅರ್ಜಿ ಶುಲ್ಕವು ಈ ರೀತಿ ಇರಲಿದೆ. ಸಾಮಾನ್ಯ ವರ್ಗದ ಪುರುಷ ಅಭ್ಯರ್ಥಿಗೆ ರೂ.1000 ಮತ್ತು ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗೆ ರೂ 800. Gen-EWS/OBC (NCL) ವರ್ಗದ ಪುರುಷ ಅಭ್ಯರ್ಥಿಗಳಿಗೆ ರೂ. 900 ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ. 800, SC/ST/PWD ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 500 ಇರಲಿದೆ.
ಏ. 4ರಿಂದ ಪರೀಕ್ಷೆ: ಎರಡನೇ ಅವಧಿಯ ಪರೀಕ್ಷೆ ಏ.04 ರಿಂದ 15 ರ ವರೆಗೆ ನಡೆಸಲಾಗುವುದು. ಮೇನ್ಸ್ ಪರೀಕ್ಷೆಯನ್ನು ಕನ್ನಡ, ಇಂಗ್ಲಿಷ್, ಹಿಂದಿ, ಬೆಂಗಾಲಿ, ಅಸ್ಸಾಮಿ, ಮಲಯಾಳಂ, ಗುಜರಾತಿ, ಒರಿಯಾ, ಮರಾಠಿ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ 13 ಭಾಷೆಗಳಲ್ಲಿ ನಡೆಸಲಾಗುತ್ತದೆ.
ಇದನ್ನೂ ಓದಿ: ಮೈಸೂರು ವಿವಿ ಘಟಿಕೋತ್ಸವ: ಎಂಎಸ್ಸಿಯಲ್ಲಿ ಮೇಘನಾಗೆ 15 ಗೋಲ್ಡ್ ಮೆಡಲ್, ಕನ್ನಡದಲ್ಲಿ ತೇಜಸ್ವಿನಿಗೆ 10 ಚಿನ್ನದ ಪದಕ