ETV Bharat / bharat

ಕಾಶ್ಮೀರದ ದೇಗುಲಗಳ ಭೂಮಿಯನ್ನು ವಶಕ್ಕೆ ಪಡೆಯುವಂತೆ ಜಿಲ್ಲಾಡಳಿತಕ್ಕೆ ನ್ಯಾಯಾಲಯ ಆದೇಶ - seizure of temple lands in kashmir - SEIZURE OF TEMPLE LANDS IN KASHMIR

ಶ್ರೀನಗರದ ಬಾರ್ಜುಲ್ಲಾದಲ್ಲಿರುವ ಐತಿಹಾಸಿಕ ರಘುನಾಥ್ ಜಿ ದೇವಸ್ಥಾನದ ಆಸ್ತಿಯನ್ನು ವಶಕ್ಕೆ ಪಡೆಯುವಂತೆ ಶ್ರೀನಗರ ಆಡಳಿತಕ್ಕೆ ನ್ಯಾಯಾಲಯ ಆದೇಶಿಸಿದೆ.

jammu-kashmir-high-court-orders-seizure-of-temple-lands-says-mahants-babas-had-taken-advantage
ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್​ (ಈಟಿವಿ ಭಾರತ್​​)
author img

By ETV Bharat Karnataka Team

Published : Aug 14, 2024, 12:21 PM IST

ಶ್ರೀನಗರ: ಮಹತ್ವದ ಆದೇಶ ಪ್ರಕಟಿಸಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ ಹೈಕೋರ್ಟ್​​ ಶ್ರೀನನಗರದಲ್ಲಿರುವ ಅನೇಕ ದೇವಸ್ಥಾನದ ಆಸ್ತಿಗಳನ್ನು ನಿಯಂತ್ರಣಕ್ಕೆ ಪಡೆಯುವಂತೆ ಜಿಲ್ಲಾ ಆಯುಕ್ತರಿಗೆ ಸೂಚಿಸಿದೆ. ಇದೇ ವೇಳೆ ಸ್ಥಳೀಯರೊಂದಿಗೆ ಸೇರಿ ಮಹಂತರು ಮತ್ತು ಬಾಬಾಗಳು, ಸ್ಥಳೀಯರು ಪರಿಸ್ಥಿತಿಯ ಲಾಭ ಪಡೆದುಕೊಂಡಿದ್ದಾರೆ ಎಂದು ಕೋರ್ಟ್​​ ತಿಳಿಸಿದೆ.

ಶ್ರೀನಗರದ ಬಾರ್ಜುಲ್ಲಾದಲ್ಲಿರುವ ಐತಿಹಾಸಿಕ ರಘುನಾಥ್ ಜಿ ದೇವಸ್ಥಾನದ ಆಸ್ತಿಯನ್ನು ವಶಕ್ಕೆ ಪಡೆಯುವಂತೆ ಶ್ರೀನಗರ ಆಡಳಿತಕ್ಕೆ ನ್ಯಾಯಾಲಯ ಆದೇಶಿಸಿದೆ. ದೇಗುಲದ 159 ಕನಲ್​ನ ಭೂಮಿಯನ್ನು ಕಾಶ್ಮೀರ್​ ಬಾರ್​ ಅಸೋಸಿಯೇಷನ್​ ಅಧ್ಯಕ್ಷ ಮಿಯಾನ್​ ಕ್ವಯುಮ್​ ಮತ್ತು ಆತನ ಸಹೋದರ ಸ್ವಾದೀನ ಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಈ ಸಂಬಂಧ ಮಂಗಳವಾರ ಶ್ರೀನಗರದ ಜಿಲ್ಲಾ ಆಯುಕ್ತರಿಗೆ ನಿರ್ದೇಶಿಸಿದ ನ್ಯಾಯಾಲಯ, ಶ್ರೀನಗರದಲ್ಲಿನ ಸತು ಬರ್ಬರ್​​ ಶ್ರೀ ಭಜರಂಗ್​ ದೇವ್​ ಧರಮ್​ ದಾಸ್​​ ಜಿ ಮಂದಿರ್​​ ಸೇರಿದಂತೆ ಹಲವು ದೇಗುಲದ ಆಸ್ತಿ ಮತ್ತು ನಿರ್ವಹಣೆಯನ್ನು ವಹಿಸಿಕೊಳ್ಳುವಂತೆ ತಿಳಿಸಿದೆ. 1990ರ ಬಳಿಕ ಅತಿಕ್ರಮಣಗಳು ಮತ್ತು ದುರುಪಯೋಗಕ್ಕೆ ಒಳಗಾಗಿರುವ ಪ್ರದೇಶದಾದ್ಯಂತ ದೇವಾಲಯಗಳ ಸ್ವತ್ತುಗಳನ್ನು ರಕ್ಷಿಸುವ ಮತ್ತು ನಿರ್ವಹಣೆ ಈ ಆದೇಶದ ಉದ್ದೇಶವಾಗಿದೆ.

ನ್ಯಾ. ಸಂಜೀವ್​ ಕುಮಾರ್​ ಮತ್ತು ಎಂಎ ಚೌಧರಿ ಒಳಗೊಂಡ ವಿಭಾಗೀಯ ಪೀಠ, ಈ ಅರ್ಜಿ ವಿಲೇವಾರಿ ನಡೆಸಿದೆ. ಜೊತೆಗೆ ದೇಗುಲಗಳ ಒಟ್ಟಾರೆ ನಿರ್ವಹಣೆ ಮತ್ತು ದೈನಂದಿನ ಸಂಪ್ರದಾಯ ಮೇಲ್ವಿಚಾರಣೆ ನಡೆಸಲು ಕಂದಾಯ ಮತ್ತು ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಸಮಿತಿಯನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಈ ದೇಗುಲಗಳ ಆಸ್ತಿಯು ದೇವರಿಗೆ ಸಂಬಂಧಿಸಿದ್ದಾಗಿದೆ. ಈ ಸಂಬಂಧ ಯಾವುದೇ ವ್ಯಕ್ತಿ ಮಾಲೀಕತ್ವ ಅಥವಾ ನಿರ್ವಹಣೆ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದಿದೆ.

ಇದೇ ವೇಳೆ ನ್ಯಾಯಾಲಯ, ಮಹಾರಾಜರ ಈ ದೇಗುಲಗಳ ನಿರ್ಮಾಣಕ್ಕೆ ತಮ್ಮ ಆಸ್ತಿಯನ್ನು ನೀಡಿದ್ದಾರೆ ಎಂದು ತಿಳಿಸಿತು. ಈ ದೇಗುಲಗಳಿಂದ ಬರುವ ಆದಾಯವನ್ನು ದೇಗುಲಗಳ ನಿರ್ವಹಣೆ ಮತ್ತು ದತ್ತಿ ಚಟುವಟಿಕೆಗೆ ಬಳಕೆ ಮಾಡಲು ಬೆಂಬಲಿಸಬೇಕು. ಈ ಆಸ್ತಿ ದಾಖಲಾಗದೇ ಇರುವ ಹಿನ್ನೆಲೆ ಇದೀಗ ಇವು ನಿರ್ವಹಣೆ ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಾದಗಳು ಹುಟ್ಟಿಕೊಂಡಿವೆ.

ಬಾರ್ಜುಲ್ಲಾದಲ್ಲಿರುವ ರಘುನಾಥ್ ಜಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಮಿಯಾನ್​ ಕ್ವಯುಮ್ ಮತ್ತು ಆತನ ಸಹೋದರ ವಶಕ್ಕೆ ಪಡೆದಿರುವ ಆರು ಕನಲ್ಸ್​ ಸೇರಿದಂತೆ 159 ಕನಲ್​​ ಭೂಮಿ ಸ್ವಾಧೀನ ಪಡಿಸಿಕೊಂಡಿರುವ 159 ಕನಲ್​ ಅನ್ನು ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯ ಆದೇಶಿಸಿದೆ. ಈ ಆಸ್ತಿ ಹಕ್ಕಿನ ಕುರಿತಾಗಿ ಮಿಯಾನ್​ ಕುಟುಂಬ ಈ ಹಿಂದೆ ಕಾಶ್ಮೀರದ ವಿಭಾಗೀಯ ಆಯುಕ್ತರ ಆದೇಶವನ್ನು ಪ್ರಶ್ನಿಸಿ ಸರಣಿ ಅರ್ಜಿಗಳನ್ನು ಸಲ್ಲಿಸಿತ್ತು.

ಇದನ್ನೂ ಓದಿ: ವಯನಾಡ್​ನಲ್ಲಿ ಭೂಕುಸಿತಕ್ಕೆ ಕಾರಣ ಬಹಿರಂಗ: ನಾಲ್ಕು ದೇಶಗಳ ಸಂಶೋಧಕರ ತಂಡದ ವರದಿ ಹೀಗಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.