ETV Bharat / bharat

ಕಾಶ್ಮೀರದಲ್ಲಿ ಯಾತ್ರಾರ್ಥಿಗಳು ಸಂಚರಿಸುತ್ತಿದ್ದ ಬಸ್‌ನ ಮೇಲೆ ಭಯೋತ್ಪಾದಕ ದಾಳಿ - 10ಮಂದಿ ಸಾವು: ಉಗ್ರರಿಗಾಗಿ ಭದ್ರತಾ ಪಡೆಗಳಿಂದ ತೀವ್ರ ಶೋಧ - TERROR ATTACK IN KASHMIR - TERROR ATTACK IN KASHMIR

Indian Army launched search operation: ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರಾರ್ಥಿಗಳು ಸಂಚರಿಸುತ್ತಿದ್ದ ಬಸ್‌ನ ಮೇಲೆ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆ ಭದ್ರತಾ ಪಡೆಗಳಿಂದ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

Terror Attack  Jammu and Kashmir  Ten pilgrims died  Indian Army launched search operation
ಜಮ್ಮು ಮತ್ತು ಕಾಶ್ಮೀರ: ಯಾತ್ರಾರ್ಥಿಗಳು ಸಂಚರಿಸುತ್ತಿದ್ದ ಬಸ್‌ನ ಮೇಲೆ ಭಯೋತ್ಪಾದಕ ದಾಳಿ, ಭದ್ರತಾ ಪಡೆಗಳಿಂದ ತೀವ್ರ ಶೋಧ ಕಾರ್ಯಾಚರಣೆ (ANI)
author img

By ETV Bharat Karnataka Team

Published : Jun 10, 2024, 10:09 AM IST

ರಿಯಾಸಿ (ಜಮ್ಮು ಮತ್ತು ಕಾಶ್ಮೀರ): ಶಿವ ಖೋರಿಯಿಂದ ಬರುತ್ತಿದ್ದ ಬಸ್‌ನ ಮೇಲೆ ಭಾನುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಹತ್ತು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಭಾರತೀಯ ಸೇನೆಯು ಸೋಮವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಹ ರಿಯಾಸಿಗೆ ಆಗಮಿಸಿದೆ. ಘಟನಾ ಸ್ಥಳ ಮತ್ತು ಸುತ್ತಮುತ್ತಲಿನ ದಟ್ಟ ಅರಣ್ಯ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯಲ್ಲಿ ಡ್ರೋನ್‌ಗಳನ್ನು ಸಹ ಬಳಸಲಾಗುತ್ತಿದೆ.

ಘಟನೆ ಬಗ್ಗೆ ಡಿಸಿ ಮಾಹಿತಿ ನೀಡಿದ್ದಿಷ್ಟು: ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. 33 ಮಂದಿ ಗಾಯಗೊಂಡಿದ್ದಾರೆ ಎಂದು ರಿಯಾಸಿ ಜಿಲ್ಲಾಧಿಕಾರಿ ವಿಶೇಷ್ ಮಹಾಜನ್ ಭಾನುವಾರ ರಾತ್ರಿ ದೃಢಪಡಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಶಿವ ಖೋರಿ ದೇಗುಲದಿಂದ ಕತ್ರಾಕ್ಕೆ ತೆರಳುತ್ತಿದ್ದ ಬಸ್, ರಜೌರಿ ಜಿಲ್ಲೆಯ ಗಡಿಯಲ್ಲಿರುವ ರಿಯಾಸಿ ಜಿಲ್ಲೆಯ ಪೌನಿ ಪ್ರದೇಶವನ್ನು ತಲುಪಿದಾಗ ಸಂಜೆ 6.10ರ ಸುಮಾರಿಗೆ ಭಯೋತ್ಪಾದಕರ ದಾಳಿಗೆ ಒಳಗಾಗಿದೆ.

ರಿಯಾಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಿಷ್ಟು: "ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಗಾಯಾಳುಗಳನ್ನು ನರೈನಾ ಮತ್ತು ರಿಯಾಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರ ಗುರುತುಗಳನ್ನು ದೃಢೀಕರಿಸಲಾಗಿಲ್ಲ. ಪ್ರಾಥಮಿಕ ವರದಿಗಳ ಪ್ರಕಾರ, ಅವರು ಉತ್ತರ ಪ್ರದೇಶಕ್ಕೆ ಸೇರಿದವರು ಎಂಬುಂದು ತಿಳಿದಿದೆ" ಎಂದು ರಿಯಾಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮೋಹಿತಾ ಶರ್ಮಾ ತಿಳಿಸಿದ್ದಾರೆ.

ದಾಳಿ ಖಂಡಿಸಿದ ಲೆಫ್ಟಿನೆಂಟ್ ಗವರ್ನರ್ : ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಈ ದಾಳಿಯ ಇದರ ಹಿಂದೆ ಇರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. "ರಿಯಾಸಿಯಲ್ಲಿ ಬಸ್ ಮೇಲೆ ನಡೆದ ಭಯೋತ್ಪಾದನಾ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಹುತಾತ್ಮ ನಾಗರಿಕರ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸುತ್ತೇನೆ. ನಮ್ಮ ಭದ್ರತಾ ಪಡೆಗಳು ಮತ್ತು JKP ಭಯೋತ್ಪಾದಕರನ್ನು ಸೆರೆ ಹಿಡಿಯಲು ಜಂಟಿ ಕಾರ್ಯಾಚರಣೆ ಪ್ರಾರಂಭಿಸಿವೆ" ಎಂದು ಮನೋಜ್ ಸಿನ್ಹಾ ಎಕ್ಸ್​ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

''ಪ್ರಧಾನಿ ನರೇಂದ್ರ ಮೋದಿ ಜಿ ಅವರು ಈ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ನನಗೆ ತಿಳಿಸಿದ್ದಾರೆ. ಈ ಹೇಯ ಕೃತ್ಯದ ಹಿಂದಿರುವ ಎಲ್ಲರಿಗೂ ಶೀಘ್ರದಲ್ಲೇ ಶಿಕ್ಷೆಯಾಗಲಿದೆ. ಗಾಯಗೊಂಡವರಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಆರೈಕೆ ಮತ್ತು ಸಹಾಯವನ್ನು ಒದಗಿಸುವಂತೆ ಪ್ರಧಾನಮಂತ್ರಿ ನಿರ್ದೇಶನ ನೀಡಿದ್ದಾರೆ" ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದರು.

ರಕ್ಷಣಾ ಇಲಾಖೆಯ ತಜ್ಞ ಹೇಮಂತ್ ಮಹಾಜನ್ ಪ್ರತಿಕ್ರಿಯಿಸಿ, " ಪ್ರಧಾನಿ ಮೋದಿ ಮತ್ತು ಮಂತ್ರಿಮಂಡಲದ ಪ್ರಮಾಣ ವಚನ ಸಮಾರಂಭಕ್ಕೆ ನಾವು ಪಾಕಿಸ್ತಾನವನ್ನು ಹೊರತುಪಡಿಸಿ ಎಲ್ಲಾ ನೆರೆಹೊರೆಯ ದೇಶಗಳ ಗಣ್ಯರನ್ನು ಆಹ್ವಾನಿಸಿದ್ದೇವೆ. ಈ ಸಮಯದಲ್ಲಿ ಭಯೋತ್ಪಾದಕ ದಾಳಿ ನಡೆದರೆ, ಅದರ ಹಿಂದಿರುವ ಉದ್ದೇಶ ಬಹಳ ಸ್ಪಷ್ಟವಾಗಿದೆ" ಎಂದು ಕಿಡಿಕಾರಿದರು.

"ನೀವು ಗಮನಿಸಿರಬಹುದು, ಕಾಶ್ಮೀರದಲ್ಲಿ ಪ್ರವಾಸೋದ್ಯಮ ಹೆಚ್ಚಾಗಿದೆ. ಇದು ನಿವಾಸಿಗಳಿಗೆ ತಮ್ಮ ವ್ಯಾಪಾರ ಮಾಡಲು ಮತ್ತು ಉದ್ಯೋಗಗಳನ್ನು ಪಡೆಯಲು ಅವಕಾಶಗಳನ್ನು ನೀಡುತ್ತದೆ. ಇಂತಹ ಭಯೋತ್ಪಾದಕ ದಾಳಿಗಳು ಎಲ್ಲವನ್ನೂ ಹಾನಿಗೊಳಿಸುತ್ತವೆ" ಎಂದು ಕೆಂಡಕಾರಿದರು. "ಅಮರನಾಥ ಯಾತ್ರೆ ಪ್ರಾರಂಭವಾಗಲಿದೆ ಮತ್ತು ಈ ದಾಳಿ ನಡೆದ ಮಾರ್ಗದ ಮೂಲಕ ಯಾತ್ರೆ ಸಾಗುತ್ತದೆ. ಭಾರತೀಯ ಸೇನೆಯ ನೇತೃತ್ವದ ಭದ್ರತಾ ಪಡೆಗಳು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿರುವವರನ್ನು ಸೆರೆಹಿಡಿಯಲು ಅಥವಾ ಹತ್ಯೆ ಮಾಡಲು ಆಕ್ರಮಣಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದರು.

ಇದನ್ನೂ ಓದಿ: ಮೋದಿ ಸರ್ಕಾರ 3.0 ಅಸ್ತಿತ್ವಕ್ಕೆ: 30 ಸಂಪುಟ ಸಚಿವರು, 5 ಸ್ವತಂತ್ರ ನಿರ್ವಹಣೆ, 36 ರಾಜ್ಯಖಾತೆ ಸಚಿವರಿಂದ ಪ್ರಮಾಣ ಸ್ವೀಕಾರ - Modi Government

ETV Bharat Logo

Copyright © 2025 Ushodaya Enterprises Pvt. Ltd., All Rights Reserved.