ETV Bharat / bharat

ಬಡ್ಗಾಮ್​ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸಿಎಂ ಒಮರ್ ಅಬ್ದುಲ್ಲಾ ರಾಜೀನಾಮೆ

ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಿದ್ದ ಸಿಎಂ ಒಮರ್ ಅಬ್ದುಲ್ಲಾ ಒಂದು ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

OMAR ABDULLAH
ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ (ETV Bharat)
author img

By ANI

Published : 6 hours ago

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಅವರು ಬಡ್ಗಾಮ್​ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಭದ್ರಕೋಟೆಯಾದ ಗಂದರ್ಬಾರ್​ ಕ್ಷೇತ್ರ ಉಳಿಸಿಕೊಂಡಿದ್ದು, ಬಡ್ಗಾಮ್​ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹಂಗಾಮಿ ಸ್ಪೀಕರ್ ಮುಬಾರಕ್ ಗುಲ್ ಇಂದು ಸದನಕ್ಕೆ ತಿಳಿಸಿದರು.

10 ವರ್ಷಗಳ ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಮರ್ ಅಬ್ದುಲ್ಲಾ, ಬಡ್ಗಾಮ್ ಮತ್ತು ಗಂದರ್ಬಾರ್​ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಗಳಿಸಿದ್ದರು. ಬಡ್ಗಾಮ್​ ವಿಧಾನಸಭಾ ಕ್ಷೇತ್ರದಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಗಾ ಸೈಯದ್ ಮುಂತಜೀರ್ ಮೆಹದಿ ವಿರುದ್ಧ 18,485 ಮತಗಳ ಅಂತರದಿಂದ ಗೆದ್ದರೆ, ಗಂದರ್ಬಾರ್ ವಿಧಾನಸಭಾ ಕ್ಷೇತ್ರದಲ್ಲಿ ಪಿಡಿಪಿಯ ಬಶೀರ್ ಅಹ್ಮದ್ ಮಿರ್ ಅವರನ್ನು 10,574 ಮತಗಳಿಂದ ಸೋಲಿಸಿದ್ದರು.

ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾದ ಮೊದಲ ಅವಧಿಯಲ್ಲಿ 2009ರಿಂದ 2014ರವರೆಗೆ ಗಂದರ್ಬಾರ್ ಶಾಸಕರಾಗಿದ್ದರು. ಈ ಕ್ಷೇತ್ರವನ್ನು ಅವರ ತಂದೆ ಫಾರೂಕ್ ಅಬ್ದುಲ್ಲಾ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸ್ಥಾಪಿಸಿದ ತಾತ ಶೇಖ್ ಅಬ್ದುಲ್ಲಾ ಪ್ರತಿನಿಧಿಸಿದ್ದಾರೆ. ಇದೀಗ ಇದೇ ಕ್ಷೇತ್ರವನ್ನು ಒಮರ್ ಉಳಿಸಿಕೊಂಡಿದ್ದಾರೆ.

ನೂತನ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಒಮರ್‌ ಅಬ್ದುಲ್ಲಾ ಕಳೆದ ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ಉಪ ಮುಖ್ಯಮಂತ್ರಿಯಾಗಿ ನೌಶೇರಾದ ಶಾಸಕ ಸುರೀಂದರ್ ಕುಮಾರ್ ಇತರ ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಿದರು.

ಐತಿಹಾಸಿಕ ದಾಲ್‌ ಸರೋವರದ ದಡದಲ್ಲಿರುವ ಶೇರ್‌ ಎ ಕಾಶೀರ್‌ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಜನರಲ್‌ ಮನೋಜ್‌ ಸಿನ್ಹಾ ಪ್ರಮಾಣ ವಚನ ಬೋಧಿಸಿದ್ದರು.

ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಎನ್‌ಸಿ- ಕಾಂಗ್ರೆಸ್​ ಮೈತ್ರಿ; ಬುಧವಾರ ಪ್ರಮಾಣ ಸ್ವೀಕಾರ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.