ETV Bharat / bharat

ಇಂದು ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನ: ಇವು ಪರಿಸರ ವ್ಯವಸ್ಥೆಗೆ ಏಕೆ ಮುಖ್ಯ ಗೊತ್ತಾ? - international vulture awareness day

ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಮೊದಲ ಶನಿವಾರ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಈ ದಿನದ ವಿಶೇಷತೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ರಣಹದ್ದು
ರಣಹದ್ದು (ETV Bharat)
author img

By ETV Bharat Karnataka Team

Published : Sep 7, 2024, 6:37 AM IST

ಹೈದರಾಬಾದ್: ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಮೊದಲ ಶನಿವಾರ ಅಂದರೆ ಇಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ನಮ್ಮ ಪರಿಸರ ವ್ಯವಸ್ಥೆಗಳಲ್ಲಿ ರಣಹದ್ದುಗಳ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ರಣಹದ್ದುಗಳನ್ನು ಕ್ರೂರ, ಕೊಳಕು ಪಕ್ಷಿಗಳೆಂದು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಆದರೆ, ವಾಸ್ತವವಾಗಿ ಈ ಪಕ್ಷಿಗಳು ನೈಸರ್ಗಿಕ ಪ್ರಪಂಚದ ಅಪ್ರತಿಮ ಹೀರೋಗಳಾಗಿವೆ.

ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನದ ಆಚರಣೆ ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್ ಕಿಂಗ್ಡಮ್​ನಲ್ಲಿ ಮೊದಲು ಪ್ರಾರಂಭವಾಯಿತು. ಮೊದಲ ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನ (ಐವಿಎಡಿ)ಯನ್ನು ಸೆಪ್ಟೆಂಬರ್ 2009 ರಲ್ಲಿ ಆಚರಿಸಲಾಯಿತು.

ರಣಹದ್ದುಗಳು ಪರಿಸರ ವ್ಯವಸ್ಥೆಗೆ ಏಕೆ ಮುಖ್ಯ?: ರಣಹದ್ದುಗಳಿಂದ ನಾವೆಲ್ಲರೂ ಪ್ರಯೋಜನ ಪಡೆಯುತ್ತೇವೆ. ರಣಹದ್ದುಗಳು ಉಚಿತವಾಗಿ ಪರಿಸರ ವ್ಯವಸ್ಥೆಗೆ ಸೇವೆ ಒದಗಿಸುತ್ತವೆ. ಪೋಷಕಾಂಶಗಳ ಮರುಬಳಕೆ, ಮಣ್ಣು ಮತ್ತು ನೀರಿನ ಮಾಲಿನ್ಯ ತಡೆಗಟ್ಟಲು ಮತ್ತು ರೋಗಗಳ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ರಣಹದ್ದುಗಳು ನಿರ್ಣಾಯಕ ಪಾತ್ರವಹಿಸುತ್ತವೆ.

ಉದಾಹರಣೆಗೆ, ಗ್ರಿಫಾನ್ ರಣಹದ್ದುಗಳು ಪ್ರಾಣಿಗಳ ಕಳೇಬರದ ಮಾಂಸವನ್ನು ಸೇವಿಸುತ್ತವೆ. ಇದು ಆಹಾರ ಸರಪಳಿ ಮೂಲಕ ಶಕ್ತಿಯ ವರ್ಗಾವಣೆಯನ್ನು ಬೆಂಬಲಿಸುತ್ತದೆ. ಇವುಗಳ ಉಪಸ್ಥಿತಿಯು ಕಾಡು ನಾಯಿಗಳಂತಹ ಇತರ ಫ್ಯಾಕಲ್ಟೇಟಿವ್ ಸ್ಕ್ಯಾವೆಂಜರ್​ಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ರೋಗ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತವೆ.

ಸಿನೆರಿಯಸ್ ರಣಹದ್ದು ಹಲವಾರು ಕಾರಣಗಳಿಗಾಗಿ ಪ್ರಮುಖ ಪ್ರಭೇದವಾಗಿದೆ. ಈ ಬೇಟೆಯ ಪಕ್ಷಿಯು ತನ್ನ ಆವಾಸಸ್ಥಾನದ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಅಳಿವಿನ ಅಂಚಿನಲ್ಲಿರುವ ರಣಹದ್ದುಗಳು: ಜಗತ್ತಿನಲ್ಲಿ 23 ರಣಹದ್ದು ಪ್ರಭೇದಗಳಿವೆ. ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಐಯುಸಿಎನ್​ನ (ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್) ಅಳಿವಿನಂಚಿನಲ್ಲಿರುವ ಪ್ರಭೇದಗಳ ಕೆಂಪು ಪಟ್ಟಿಯಲ್ಲಿ ಇವೆ.

ಭಾರತದಲ್ಲಿ ರಣಹದ್ದು ಗಣತಿ: ತಮಿಳುನಾಡು, ಕರ್ನಾಟಕ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಏಳು ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ರಣಹದ್ದುಗಳ ಸಂಖ್ಯೆಯು ಫೆಬ್ರವರಿ 2023 ರಲ್ಲಿ 246 ರಿಂದ ಡಿಸೆಂಬರ್​ನಲ್ಲಿ 308ಕ್ಕೆ ಗಮನಾರ್ಹವಾಗಿ ಏರಿಕೆ ಕಂಡಿವೆ. ಇದು ರಣಹದ್ದುಗಳನ್ನು ರಕ್ಷಿಸುವ ಮತ್ತು ಹೆಚ್ಚಿಸುವ ಪ್ರಯತ್ನಗಳಿಗೆ ಉತ್ತೇಜನ ನೀಡುತ್ತದೆ.

ರಣಹದ್ದು ಸಮೀಕ್ಷೆಯ ಮಾಹಿತಿಯ ಪ್ರಕಾರ, ಎನ್‌ಬಿಆರ್‌ನ ಮುದುಮಲೈ - ಸತ್ಯಮಂಗಲಂ - ಬಂಡಿಪುರ-ವಯನಾಡ್ ವಲಯದಲ್ಲಿ ಸಮೀಕ್ಷೆಯ ಸಮಯದಲ್ಲಿ ಶೇ. 82 ಕ್ಕಿಂತ ಹೆಚ್ಚು ರಣಹದ್ದುಗಳು ಕಂಡು ಬಂದಿವೆ.

WWF-India (ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್-ಇಂಡಿಯಾ), ಬರ್ಡ್ ಕೌಂಟ್ ಇಂಡಿಯಾ ಮತ್ತು eBird ಸಹಯೋಗದೊಂದಿಗೆ, ವಲ್ಚರ್ ಕೌಂಟ್ 2024 ಅನ್ನು ನಡೆಸುವುದಾಗಿ ಘೋಷಿಸಿದೆ. ಇದು ಭಾರತದ ರಣಹದ್ದುಗಳ ಸಂಖ್ಯೆಯನ್ನು ಮೇಲ್ವಿಚಾರಣೆ ಮಾಡುವ ಮತ್ತು ಸಂರಕ್ಷಿಸುವ ಗುರಿಯನ್ನು ಹೊಂದಿದೆ. ಈ ವರ್ಷ ಸೆಪ್ಟೆಂಬರ್‌ 7 ರಿಂದ ಅಕ್ಟೋಬರ್ 6 ವರೆಗೆ ಗಣತಿಯನ್ನು ನಿಗದಿಪಡಿಸಲಾಗಿದೆ. ರಣಹದ್ದು ಸಂರಕ್ಷಣೆಗಾಗಿ ಸಾರ್ವಜನಿಕ ಜಾಗೃತಿ ಮತ್ತು ಬೆಂಬಲವನ್ನು ಹೆಚ್ಚಿಸಲು ಈ ಮಾಹಿತಿಯು ಅತ್ಯಗತ್ಯವಾಗಿರುತ್ತದೆ.

ಇದನ್ನೂ ಓದಿ: ಮಾನವರಂತೆ ರೋಬೋಟ್​ಗಳಿಂದಲೂ ಮೋಸ, ವಂಚನೆ: ಸಂಶೋಧನೆ - Robot Science

ETV Bharat Logo

Copyright © 2024 Ushodaya Enterprises Pvt. Ltd., All Rights Reserved.