ನವದೆಹಲಿ: ಇಂದು ಅಂತಾರಾಷ್ಟ್ರೀಯ ಮಹಿಳಾ ನ್ಯಾಯಾಧೀಶರ ದಿನ. ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರು ಅವಕಾಶವನ್ನು ಹೊಂದಿದ್ದರೂ ಇಂದಿಗೂ ಕೂಡ ಪುರುಷರ ಸಂಖ್ಯೆ ಇಲ್ಲಿ ಹೆಚ್ಚಿದೆ. ನ್ಯಾಯಾಡಳಿತದಲ್ಲಿ, ಸಾಂವಿಧಾನಿಕ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಲಿಂಗ ಸಮಾನತೆಗಾಗಿ ಇನ್ನೂ ಬಹಳಷ್ಟು ದೂರ ಕ್ರಮಿಸಬೇಕಿದೆ. ಸುಪ್ರೀಂ ಕೋರ್ಟ್ನಲ್ಲಿ ಅನುಮೋದಿತ 34 ನ್ಯಾಯಮೂರ್ತಿಗಳ ಸಂಖ್ಯೆಯಲ್ಲಿ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಮೂರು ಮಾತ್ರ. ಅಷ್ಟೇ ಏಕೆ ದೇಶದ 25 ಹೈಕೋರ್ಟ್ಗಳಲ್ಲಿ ಇಬ್ಬರು ಮಾತ್ರ ಮುಖ್ಯನ್ಯಾಯಮೂರ್ತಿಗಳಿದ್ದಾರೆ.
ಒಮ್ಮೆ ಅಮೆರಿಕದ ಸುಪ್ರೀ ಕೋರ್ಟ್ ನ್ಯಾಯಮೂರ್ತಿ ರುತ್ ಬೇಡರ್ ಗಿನ್ಸ್‌ಬರ್ಗ್ ಅವರಿಗೆ 9 ನ್ಯಾಯಮೂರ್ತಿಗಳಲ್ಲಿ ಎಷ್ಟು ಮಹಿಳೆಯರು ಇರಬೇಕು ಎಂದು ಕೇಳಿದಾಗ ಅವರು, 9 ಎಂದಿದ್ದರು. ಅಷ್ಟೇ ಅಲ್ಲದೇ 9 ಮಂದಿಯೂ ಪುರುಷ ನ್ಯಾಯಾಮೂರ್ತಿಗಳಿದ್ದರೂ ಯಾರು ಕೂಡ ಈ ಬಗ್ಗೆ ಪ್ರಶ್ನೆ ಎತ್ತಿರಲಿಲ್ಲ. ಮಹಿಳೆಯರು ಸರಿಸಮಾನವಾಗಿ ಇಂತಹ ಹುದ್ದೆಗಳಿಗೆ ಏರಬೇಕು ಎಂದು ಬಯಸಿದ್ದ ಗಿನ್ಸ್‌ಬರ್ಗ್ 2020ರಲ್ಲಿ ಸಾವನ್ನಪ್ಪಿದರು.
ಮಹಿಳಾ ನ್ಯಾಯಾಮೂರ್ತಿಗಳು ಮತ್ತು ವಕೀಲರು ಎದುರಿಸುತ್ತಿರುವ ಅಡೆತಡೆ: ಮಹಿಳಾ ನ್ಯಾಯಾಮೂರ್ತಿಗಳು ಮತ್ತು ವಕೀಲರು ಲಿಂಗ ತಾರತಮ್ಯ, ಕಿರುಕುಳ ಮತ್ತು ಸಾಂಸ್ಥಿಕ ಮತ್ತು ಮೂಲಸೌಕರ್ಯದಂತಹ ಅನೇಕ ರಚನಾತ್ಮಕ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ವಿಶ್ವಸಂಸ್ಥೆಯ ಪ್ರಕಾರ, ಮಹಿಳಾ ನ್ಯಾಯಾಧೀಶರು ವಿಭಿನ್ನ ದೃಷ್ಟಿಕೋನ ಮತ್ತು ಅನುಭವನ್ನು ತರುತ್ತಾರೆ. ನ್ಯಾಯಾಂಗ ವ್ಯವಸ್ಥೆಯನ್ನು ಬಲಗೊಳಿಸಿ, ಮಹಿಳಾ ನಾಯಕತ್ವದ ಮೂಲಕ ಭ್ರಷ್ಟಚಾರ ಹೊಡೆದೊಡಿಸಿ, ಅಭಿವೃದ್ಧಿಗೆ ಮಹಿಳಾ ನ್ಯಾಯಾಧೀಶರು ಸಹಾಯ ಮಾಡುತ್ತಾರೆ.

ಆತ್ಮಾವಲೋಕನದ ಅವಕಾಶ: ಅಂತಾರಾಷ್ಟ್ರೀಯ ಮಹಿಳಾ ನ್ಯಾಯಾಧೀಶರ ದಿನವೂ ಆತ್ಮಾವಲೋಕನಕ್ಕೆ ಅವಕಾಶವನ್ನು ನೀಡುತ್ತದೆ. ಸಾಂಸ್ಥಿಕ ಮತ್ತು ಸಾಮಾಜಿಕ ಕಟ್ಟುಪಾಡುಗಳು ದೇಶಾದ್ಯಂತ ಸಾಂವಿಧಾನಿಕ ನ್ಯಾಯಾಲಯದಲ್ಲಿನ ಲಿಂಗ ಸಮಾನತೆಗೆ ಅಡ್ಡಿಯಾಗಿದೆ. ಈ ನ್ಯಾಯಾಂಗ ವ್ಯವಸ್ಥೆಯಲ್ಲಿನ ಮೇಲ್ಮುಖ ಚಲನಶೀಲತೆಯು ಅಡೆತಡೆಯಲ್ಲಿನ ಮತ್ತೊಂದು ಅಂಶ ಇದಾಗಿದೆ. ಸಂವಿಧಾನಿಕ ನ್ಯಾಯಾಲಯದಲ್ಲಿನ ಮಹಿಳಾ ನ್ಯಾಯಾಮೂರ್ತಿಗಳ ಕೊರತೆಯು ಕೊಲಿಜಿಯಂ ವ್ಯವಸ್ಥೆಯ ವೈವಿಧ್ಯತೆ ಕಾಪಾಡಲು ಸಾಧ್ಯವಾಗುವುದಿಲ್ಲ.
ಜೊತೆಗೆ ಸುಪ್ರೀಂ ಕೋರ್ಟ್ಗೆ ಹೋಗುವ ಮಹಿಳಾ ಅಭ್ಯರ್ಥಿಗಳ ಅವಧಿ ಕೂಡ ಅಲ್ಪವಾಗಿರುತ್ತದೆ. 2021 ಆಗಸ್ಟ್ನಲ್ಲಿ ಸುಪ್ರೀಂಕೋರ್ಟ್ಗೆ ನೇಮಕವಾದ ನ್ಯಾಯಾಮೂರ್ತಿ ಬಿವಿ ನಾಗರತ್ನ ಅವರ ಅವಧಿ 2027ರ ಅಕ್ಟೋಬರ್ 29ರವರೆಗೆ ಮಾತ್ರ. ಅವರ ಸಮಕಾಲೀನ ಪುರುಷ ನ್ಯಾಯಾಮೂರ್ತಿಗಳ ಅವಧಿಯು ನ್ಯಾ. ನಾಗರತ್ನ ಅವರ ಅಧಿಕಾರಕ್ಕಿಂತ ಕೆಲವು ತಿಂಗಳು ಅಧಿಕವಿರಬಹುದು.
ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ನಲ್ಲಿರುವ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ:
ಸಂವಿಧಾನಿಕ ನ್ಯಾಯಾಲಯಗಳು ಸಂಸತ್ ಅಥವಾ ವಿಧಾನಸಭೆಯಂತಲ್ಲ. ಕಾರಣ ಶಾಸನಸಭೆಯಲ್ಲಿ ಲಿಂಗ ಅಸಮಾನತೆ ಹೋಗಲಾಡಿಸಲು ನಿರ್ಧಿಷ್ಟ ಮಾನದಂಡವಿದೆ. ಆದರೆ ಸುಪ್ರೀಂಕೋರ್ಟ್ನಲ್ಲಿ 34 ನ್ಯಾಯಮೂರ್ತಿಗಳಲ್ಲಿ ಪ್ರಸ್ತುತ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದು, ಮುಂಬರುವ ದಿನದಲ್ಲಿ ಈ ಸಂಖ್ಯೆ ಎರಡಾಗಲಿದೆ. ಇನ್ನು ಹೈಕೋರ್ಟ್ಗಳಲ್ಲಿ ಈ ಸ್ಥಿತಿ ಮತ್ತಷ್ಟು ಕಡಿಮೆ ಇದೆ. 1114 ಹೈಕೋರ್ಟ್ ನ್ಯಾಯಮೂರ್ತಿಗಳಲ್ಲಿ ಮಹಿಳೆಯರಿರುವುದು 111 ಅಂದರೆ ಕೇವಲ 10ರಷ್ಟು ಮಾತ್ರ.
ಮಹಿಳಾ ನಾಯಕತ್ವದ ಉತ್ತೇಜನ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಹಿಮಾ ಕೊಹ್ಲಿ, 2024ರ ಮಾರ್ಚ್ನ ಕಾರ್ಯಕ್ರಮದಲ್ಲಿ ಮಾತನಾಡುವಾಗ, ಮಹಿಳೆಯರನ್ನು ನಾಯಕತ್ವದ ಸ್ಥಾನಕ್ಕೆ ಉತ್ತೇಜಿಸುವುದರಿಂದ ನಿರ್ಧಾರ ತೆಗೆದುಕೊಳ್ಳುವಿಕೆ ಮೇಲೆ ನಿಜವಾದ ಮೌಲ್ಯವನ್ನು ಗುರುತಿಸಲು ಸಾಧ್ಯ ಎಂದಿದ್ದರು.
2024 ಜನವರಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾ. ಬಿವಿ ನಾಗರತ್ನ ಮಾತನಾಡಿ, ನ್ಯಾಯಾಂಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಡ್ಡಾಯವಲ್ಲ. ಬದಲಾಗಿ ಇದು ಪಾರದರ್ಶಕತೆ, ಒಳಗೊಳ್ಳುವಿಕೆ, ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ನ್ಯಾಯಾಂಗ ಪ್ರಕ್ರಿಯೆಯ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಪೀಠದಲ್ಲಿ ಹೆಚ್ಚು ಮಹಿಳೆಯರನ್ನು ಹೊಂದುವುದರಿಂದ ಭಾರತದಲ್ಲಿನ ನ್ಯಾಯ ನೀಡುವಿಕೆಯಲ್ಲಿ ಪರಿಣಾಮಕಾರಿ ಅವಕಾಶಕ್ಕೆ ಕೊಡುಗೆ ನೀಡಬಹುದು ಎಂದಿದ್ದರು.
2023ರ ನವೆಂಬರ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಭೀಮ್ರಾವ್ ಅಂಬೇಡ್ಕರ್ರ ಕಾನೂನು ಅಭ್ಯಾಸದ 100ನೇ ವರ್ಷಾಚಾರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಉನ್ನತ ನ್ಯಾಯಾಲಯದಲ್ಲಿ ಮಹಿಳೆಯರ ಕಡಿಮೆ ಪ್ರಾತಿನಿಧ್ಯತೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದರು. ಲಭ್ಯವಿರುವ ಸಂಖ್ಯೆಯಲ್ಲಿ ನ್ಯಾಯಾಧೀಶರನ್ನು ಆಯ್ಕೆ ಮಾಡಬೇಕಿದ್ದು, ಇದು ರಾತ್ರೋ ರಾತ್ರಿ ಮಾಡುವ ಕಾರ್ಯವಲ್ಲ ಎಂದಿದ್ದರು.
ಸುಪ್ರೀಂಕೋರ್ಟ್ ಸ್ಥಾನ ಅಲಂಕರಿಸಿದ ಮೊದಲ ಮಹಿಳೆ ಸಾಂಡ್ರಾ ಡೇ ಓ'ಕಾನರ್, ಬುದ್ಧಿವಂತ ಹಿರಿಯ ಪುರುಷ ಮತ್ತು ಬುದ್ಧಿವಂತ ಹಿರಿಯ ಮಹಿಳೆ ಒಂದೇ ತೀರ್ಮಾನಕ್ಕೆ ಬರುತ್ತಾರೆ ಎಂದು ಹೇಳುತ್ತಿದ್ದರು. ಅಷ್ಟೇ ಅಲ್ಲದೇ, ಅವರು ಮಹಿಳೆಯರು ಕಾನೂನಿನಲ್ಲಿ ಸೂಕ್ಷ್ಮ, ಸಹಾನುಭೂತಿ ಮತ್ತು ಸೌಮ್ಯ ದೃಷ್ಟಿಕೋನವನ್ನು ಹೊಂದಿರುತ್ತಾರೆ ಎಂಬ ಸಿದ್ಧಾಂತವನ್ನು ವಿರೋಧಿಸುತ್ತಿದ್ದರು. ಇವರು ಕಳೆದ ವರ್ಷ ಅಂದರೆ 2023ರಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಮಹಿಳಾ ನ್ಯಾಯಾಧೀಶರು ವಿಭಿನ್ನವಾಗಿ ನಿರ್ಧಾರಿಸುತ್ತಾರೆ. ಪುರುಷರಿಗಿಂತ ವಿಭಿನ್ನವಾಗಿರುತ್ತದೆ ಎಂಬುದು ರೂಢಿಗತ ಕಲ್ಪನೆಗಳಿಂದ ಹುಟ್ಟಿಕೊಂಡಿದೆ. ವಿಶಾಲ ದೃಷ್ಟಿಕೋನದಲ್ಲಿ ಇದನ್ನು ಗಮನಿಸಿದಾಗ, ನೈತಿಕ ತಾರ್ಕಿಕತೆಯ ಪುರುಷರು ಮತ್ತು ಮಹಿಳೆಯರ ನಡುವೆ ವ್ಯತ್ಯಾಸವಿದೆ. ಆದರೂ ಪ್ರಾಯೋಗಿಕ ಅಧ್ಯಯನಗಳು ಇವನ್ನು ನಿರ್ಣಯಿಸುವಲ್ಲಿ ವ್ಯತ್ಯಾಸವನ್ನು ಹೊಂದಿಲ್ಲ.
ನ್ಯಾಯಲಯದಲ್ಲಿನ ಮಹಿಳಾ ನ್ಯಾಯಮೂರ್ತಿಗಳ ಪ್ರಾತಿನಿಧ್ಯ: ಅತಿ ದೊಡ್ಡ ಹೈಕೋರ್ಟ್ ಆದ ಅಲಹಾಬಾದ್ ಉಚ್ಛ ನ್ಯಾಯಾಲಯದಲ್ಲಿ ಅನುಮೋದಿತ ನ್ಯಾಯಮೂರ್ತಿಗಳ ಬಲ 160 ಆದರೂ, ಇರುವ ಸಂಖ್ಯೆ ಮಾರ್ಚ್ 1, 2024 ದತ್ತಾಂಶದಂತೆ ಕೇವಲ 6 ಆಗಿದೆ. ಎರಡನೇ ಅತಿ ದೊಡ್ಡ ಉಚ್ಛ ನ್ಯಾಯಾಲಯವಾದ ಬಾಂಬೆ ಹೈ ಕೋರ್ಟ್ನಲ್ಲೂ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲಿರುವ ಅನುಮೋದಿತ ಬಲ 94 ಆದರೆ ಇರುವ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ 10 ಆಗಿದೆ. ದೆಹಲಿ ಹೈಕೋರ್ಟ್ನಲ್ಲಿ ಇರುವ ಅನುಮೋದಿತ ಬಲ 60 ಆದರೆ, ಇರುವ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ 9 ಆಗಿದೆ. ಇನ್ನು ದಕ್ಷಿಣ ಭಾರತದಲ್ಲಿನ ಅತಿದೊಡ್ಡ ಉಚ್ಛ ನ್ಯಾಯಾಲಯವಾಗಿರು ಮದ್ರಾಸ್ ಹೈಕೋರ್ಟ್ನಲ್ಲಿ 75ರಲ್ಲಿ ಇರುವ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ 12 ಆಗಿದೆ. ದೇಶದಲ್ಲಿರುವ 25 ಹೈಕೋರ್ಟ್ಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳ ಪ್ರಾತಿನಿಥ್ಯ ಕೇವಲ 10ರಷ್ಟಿದೆ.
ಇದನ್ನೂ ಓದಿ: ಇವರು ಭಾರತದ ಗಡಿ ಭದ್ರತಾ ಪಡೆಯ ಮೊದಲ ಮಹಿಳಾ ಸ್ನೈಪರ್!
ಜಮ್ಮು ಮತ್ತು ಕಾಶ್ಮೀರ ಹೈ ಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಜಸ್ಟೀಸ್ ಗೀತಾ ಮಿತ್ತಲ್, 'ಹೈಕೋರ್ಟ್ ನ್ಯಾಯಾಲಯದಲ್ಲಿನ ಮಹಿಳಾ ಸಮಾನತೆಯ ಪ್ರಾತಿನಿಧ್ಯ: ಭಾರತದಲ್ಲಿ ನ್ಯಾಯಾಂಗ ವೈವಿಧ್ಯತೆಯ ಪ್ರಕರಣ' ಎಂಬ ಸಂಶೋಧನಾ ಲೇಖನದಲ್ಲಿ ತಿಳಿಸುವಂತೆ, ಮಹಿಳೆಯರ ನ್ಯಾಯಾಂಗ ನೇಮಕಾತಿಯಲ್ಲಿ ರಚನಾತ್ಮಕ ಸಮಸ್ಯೆಗಳು ಒಳಗೊಂಡಿದ್ದು, ಆಯ್ಕೆಯ ಅರ್ಹತೆ, ಸ್ವಜನಪಕ್ಷಪಾತ ಮತ್ತು ಜಾತಿ ಆಧಾರಿತ ತಾರತಮ್ಯ, ಮೌಲ್ಯಮಾಪನ ಮಾಡುವಾಗ ವಸ್ತುನಿಷ್ಠತೆಯ ಕೊರತೆ ಅಂಶಗಳಿಂದ ಕೂಡಿದೆ. ನೇಮಕಾತಿಯ ಕೊಲಿಜಿಯಂ ವ್ಯವಸ್ಥೆಯು ವೈವಿಧ್ಯತೆಯಿಂದ ಮುನ್ನಡೆಸುವ ಕೊರತೆ ಹೊಂದಿದ್ದು, ದೊಡ್ಡ ಪ್ರಮಾಣದಲ್ಲಿ ಸುಧಾರಣೆ ಅವಶ್ಯಕ ಎಂದಿದ್ದಾರೆ.
ಎನ್ವೈಯುನ ಸ್ಟೀಫನ್ ಚೋಯ್, ಡ್ಯೂಕ್‌ನ ಮಿಟು ಗುಲಾಟಿ ಮತ್ತು ಚಿಕಾಗೋದ ಎರಿಕ್ ಪೋಸ್ನರ್, ಮಿರಿಯಾ ಹಾಲ್ಮನ್ ಒಳಗೊಮಡಿರುವ ಕಾನೂನು ಪ್ರಾಧ್ಯಾಪಕರ ಗುಂಪು, ಒಂದು ಲಿಂಗದ ನ್ಯಾಯಮೂರ್ತಿಗಳು ಮತ್ತೊಬ್ಬರಿಗಿಂತ ಉತ್ತಮವೇ ಎಂಬ ವಿವಾದಾತ್ಮಕ ಪ್ರಶ್ನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಮಹಿಳಾ ನ್ಯಾಯಮೂರ್ತಿಗಳ ಗುಂಪು ಪ್ರತಿಭೆಯ ಆಳವಿಲ್ಲದ ಕೊಳದಿಂದ ಆಯ್ಕೆಯಾಗುತ್ತಾರೆ ಎಂದ ಮಾತ್ರಕ್ಕೆ ಅವರು ಪುರುಷರಿಗಿಂತ ಕೆಟ್ಟ ನ್ಯಾಯಾಧೀಶರು ಎಂಬುದನ್ನು ಸೂಚಿಸುವುದಿಲ್ಲ ಎಂದಿದ್ದಾರೆ. ಪುರಾವೆಗಳು ಸಲಹೆ ನೀಡುವಂತೆ ಅವರು ಪುರುಷ ನ್ಯಾಯಾಧೀಶರಿಗಿಂತ ಉತ್ತಮರು ಎಂದು ಸೂಚಿಸುತ್ತದೆ. ಈ ಹಿನ್ನೆಲೆ ನ್ಯಾಯಾಲಯದ ಏಕರೂಪತೆಯನ್ನು ಅಡ್ಡಿಪಡಿಸಿ, ನ್ಯಾಯಾಂಗ ನೇಮಕಾತಿಗಳು ಸರಿಯಾದ ದಿಕ್ಕಿನಲ್ಲಿ ಹೆಜ್ಜೆಗಳನ್ನು ಇಡಬೇಕಿದೆ. ಹೈಕೋರ್ಟ್ ಪೀಠದಲ್ಲಿ ಹೆಚ್ಚಿನ ಮಹಿಳೆಯರು ಹೆಚ್ಚಿನ ನ್ಯಾಯಮೂರ್ತಿ ಸ್ಥಾನ ಅಲಂಕರಿಸಿದಾಗ, ಸುಪ್ರೀಂಕೋರ್ಟ್ ಪೀಠದಲ್ಲಿನ ಪ್ರಾತಿನಿಧ್ಯದ ಬದಲಾವಣೆ ಕಾಣಬಹುದು ಎಂದಿದ್ದಾರೆ.
ಇದನ್ನೂ ಓದಿ: ಚುನಾವಣಾ ಬಾಂಡ್: ಸಮಯಾವಕಾಶ ಕೋರಿದ್ದ ಎಸ್‌ಬಿಐ ಅರ್ಜಿ ವಜಾ, ನಾಳೆಯೊಳಗೆ ಮಾಹಿತಿ ನೀಡುವಂತೆ ಸುಪ್ರೀಂ ಆದೇಶ