ETV Bharat / bharat

ಹಿಮ ಶಿಖರದಿಂದ ಹಿಡಿದು ಮರಭೂಮಿವರೆಗೂ ಯೋಧರ ಯೋಗಾಭ್ಯಾಸ! - International Yoga Day - INTERNATIONAL YOGA DAY

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಂದು ದೇಶದಾದ್ಯಂತ ಭಾರತೀಯ ಸೇನೆಯ ಅಧಿಕಾರಿಗಳು ಯೋಗ ಪ್ರದರ್ಶಿಸಿದರು. ಭಾರತ - ಪಾಕಿಸ್ತಾನದ ರಾಜಸ್ಥಾನ ಗಡಿಯಲ್ಲೂ ಕೂಡ ಸಾವಿರಾರು ಬಿಎಸ್‌ಎಫ್ ಯೋಧರು ಯೋಗಾಭ್ಯಾಸ ಮಾಡಿದರು.

SOLDIERS DID YOGA AT THE END OF THE COUNTRY ON THE INDO PAK BORDER
ಯೋಧರ ಯೋಗಾಭ್ಯಾಸ (ETV Bharat)
author img

By ETV Bharat Karnataka Team

Published : Jun 21, 2024, 2:31 PM IST

ನವದೆಹಲಿ: ಭಾರತೀಯ ಯೋಧರು ಲಡಾಖ್‌ನ ಹಿಮ ಶಿಖರದಿಂದ ಹಿಡಿದು ಭಾರತ ಮತ್ತು ಪಾಕಿಸ್ತಾನದ ಗಡಿ ಪ್ರದೇಶವಾದ ಮರಭೂಮಿಯಲ್ಲೂ ಯೋಗಾಸನ ಮಾಡುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಕೆಲವು ಯೋಧರು ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಎತ್ತರದ ಪೀರ್ ಪಂಜಾಲ್ ಶ್ರೇಣಿಗಳಲ್ಲಿ ಯೋಗ ಪ್ರದರ್ಶಿಸಿದರೆ, ಇನ್ನು ಕೆಲವರು ಲಡಾಖ್‌ನ ಎತ್ತರದಲ್ಲಿರುವ ಹಿಮ ಶಿಖರದಲ್ಲಿ ಯೋಗಾಭ್ಯಾಸ ಮಾಡಿದರು.

ಜೈಸಲ್ಮೇರ್ ಸೆಕ್ಟರ್ ಆಫ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಮತ್ತು 154 ವಿ ಕಾರ್ಪ್ಸ್ ಆಫ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಜೈಸಲ್ಮೇರ್‌ನ ಪ್ರಸಿದ್ಧ ಸ್ಯಾಮ್ ಸ್ಯಾಂಡ್ ಡ್ಯೂನ್ಸ್‌ನಲ್ಲಿ ಇಂದು ಯೋಗ ಕಾರ್ಯಕ್ರಮ ಏರ್ಪಡಿಸುತ್ತು. ರಾಜಸ್ಥಾನದ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಬಿಎಸ್‌ಎಫ್‌ನ ಎಲ್ಲಾ ಬಿಎಸ್‌ಎಫ್ ಯೋದರು ಮತ್ತು ಅಧಿಕಾರಿಗಳು ಮರಭೂಮಿಯಲ್ಲಿ ಯೋಗ ಪ್ರದರ್ಶನ ಮಾಡಿದರು. ಈ ಭವ್ಯ ಸಮಾರಂಭದಲ್ಲಿ ಹಿರಿಯ ಬಿಎಸ್‌ಎಫ್ ಅಧಿಕಾರಿಗಳಿಂದ ಹಿಡಿದು ಎಲ್ಲ ಸೈನಿಕರೂ ಒಟ್ಟಾಗಿ ಯೋಗದ ವಿವಿಧ ಆಸನಗಳನ್ನು ಅಭ್ಯಾಸ ಮಾಡಿದರು. ಭಾಗವಹಿಸಿದವರೆಲ್ಲರೂ ಒಗ್ಗಟ್ಟಾಗಿ ಮಾಡಿದ ಯೋಗ ಪ್ರದರ್ಶನಗಳು ಏಕತೆ ಮತ್ತು ಶಿಸ್ತಿನ ಪ್ರತೀಕವಾಗಿತ್ತು.

ವಿಶಾಲವಾದ ಮರಳು ದಿಬ್ಬಗಳು, ನೈಸರ್ಗಿಕ ಸೌಂದರ್ಯ ಮತ್ತು ಪ್ರಶಾಂತ ಪರಿಸರವು ಯೋಗವನ್ನು ಇನ್ನಷ್ಟು ವಿಶೇಷಗೊಳಿಸಿತ್ತು. ತಂಪಾದ ಗಾಳಿ ಮತ್ತು ಮರಳಿನ ನಡುವೆ ನಡೆದ ಯೋಗಾಭ್ಯಾಸವು ಭಾಗವಹಿಸಿದ ಎಲ್ಲರಿಗೂ ಒಂದು ವಿಶೇಷ ರೀತಿಯ ಅನುಭವ ನೀಡಿತು. ಸೈನಿಕರು, ಅಧಿಕಾರಿಗಳು ಮತ್ತು ಸಾರ್ವಜನಿಕರಲ್ಲಿ ಯೋಗದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಗಡಿ ಭದ್ರತಾ ಪಡೆಯ ಅಧಿಕಾರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನದಂದು ಈ ಭವ್ಯ ಕಾರ್ಯಕ್ರಮದ ಮೂಲಕ ನಮ್ಮ ಸೈನಿಕರು, ಅಧಿಕಾರಿಗಳು ಮತ್ತು ಗಡಿ ಪ್ರದೇಶದಲ್ಲಿ ವಾಸಿಸುವ ಸಾಮಾನ್ಯ ಜನರಲ್ಲಿ ಯೋಗದ ಮಹತ್ವವನ್ನು ಪ್ರಚಾರ ಮಾಡಲು ನಾವು ಪ್ರಯತ್ನಿಸಿದ್ದೇವೆ ಎಂದು ಬಿಎಸ್‌ಎಫ್‌ನ ಜೈಸಲ್ಮೇರ್ ಸೆಕ್ಟರ್ ದಕ್ಷಿಣ ಡಿಐಜಿ ವಿಕ್ರಮ್ ಕುನ್ವಾರ್ ಹೇಳಿದ್ದಾರೆ.

ಯೋಗವು ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕ ಶಾಂತಿ ಮತ್ತು ಸಮತೋಲನವನ್ನು ನೀಡುತ್ತದೆ. ಯೋಗವನ್ನು ತಮ್ಮ ದೈನಂದಿನ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಲು ನಾವು ನಮ್ಮ ಸೈನಿಕರನ್ನು ಪ್ರೋತ್ಸಾಹಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಶ್ರೀನಗರದ ದಾಲ್ ಸರೋವರದ ದಡದಲ್ಲಿ ಪ್ರಧಾನಿ ಮೋದಿ ಯೋಗ ಸಂಭ್ರಮ - International Day of Yoga 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.