ETV Bharat / bharat

ಹುತಾತ್ಮ ಅಗ್ನಿವೀರ್ ಕುಟುಂಬಕ್ಕೆ 98 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ: ರಾಹುಲ್ ಗಾಂಧಿ ಆರೋಪಕ್ಕೆ ಸೇನೆಯ ಉತ್ತರ - ARMY REPLY ON RAHUL ALLEGATION

ಕರ್ತವ್ಯದ ವೇಳೆ ಹುತಾತ್ಮರಾದ ಅಗ್ನಿವೀರ್​ ಅಜಯ್​ ಕುಮಾರ್ ಅವರ ಕುಟುಂಬಕ್ಕೆ​ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ರಾಹುಲ್​ ಗಾಂಧಿ ಆರೋಪದ ಬೆನ್ನಲ್ಲೇ ಭಾರತೀಯ ಸೇನೆ ಅಜೆಯ ಕುಟುಂಬಕ್ಕೆ ಬಿಡುಗಡೆ ಮಾಡಿರುವ ಪರಿಹಾರದ ಬಗ್ಗೆ ಹೇಳಿಕೆ ನೀಡಿದೆ.

ರಾಹುಲ್ ಗಾಂಧಿ
ರಾಹುಲ್ ಗಾಂಧಿ (X@RahulGandhi)
author img

By ETV Bharat Karnataka Team

Published : Jul 4, 2024, 11:19 AM IST

ನವದೆಹಲಿ: ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಅಗ್ನಿವೀರ್ ಅಜಯ್ ಕುಮಾರ್ ಅವರ ಕುಟುಂಬಕ್ಕೆ 98 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಭಾರತೀಯ ಸೇನೆ ಬುಧವಾರ ತಿಳಿಸಿದೆ. ಅಜಯ್ ಕುಮಾರ್ ಅವರ ಕುಟುಂಬಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಸೇನೆಯು ಇಲ್ಲಿಯವರೆಗೆ ಅಜಯ್​ ಅವರ ಕುಟುಂಬಕ್ಕೆ ಕೊಟ್ಟಿರುವ ಪರಿಹಾರದ ಬಗ್ಗೆ ಹೇಳಿಕೆ ನೀಡಿದೆ.

ಸೇನೆಯು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, "ಕರ್ತವ್ಯದಲ್ಲಿದ್ದ ವೇಳೆ ಪ್ರಾಣ ಕಳೆದುಕೊಂಡ ಅಗ್ನಿವೀರ್ ಅಜಯ್ ಕುಮಾರ್ ಅವರ ಕುಟುಂಬ ಸದಸ್ಯರಿಗೆ ಪರಿಹಾರವನ್ನು ನೀಡಲಾಗಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಪೋಸ್ಟ್‌ಗಳು ಹರಿದಾಡಿವೆ. ಆದರೆ ಅವರ ಕುಟುಂಬಕ್ಕೆ ಪಾವತಿಸಬೇಕಾದ ಒಟ್ಟು ಮೊತ್ತದಲ್ಲಿ ಈಗಾಗಲೇ 98.39 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಉಳಿದ ರೂ. 67 ಲಕ್ಷವನ್ನು ಅಗ್ನಿವೀರ್ ಯೋಜನೆಯ ನಿಬಂಧನೆಗಳ ಪ್ರಕಾರ ಪಾವತಿಸಲಾಗುವುದು. ಅಜಯ್​ ಕುಟುಂಬಕ್ಕೆ ಪಾವತಿಸಬೇಕಾದ ಒಟ್ಟು ಮೊತ್ತವು ಸರಿಸುಮಾರು ರೂ. 1.65 ಕೋಟಿ ಆಗಿರುತ್ತದೆ ಎಂದು ತಿಳಿಸಿದೆ.

ಇದಕ್ಕೂ ಮುನ್ನ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹುತಾತ್ಮ ಅಗ್ನಿವೀರ್ ಅಜಯ್ ಕುಮಾರ್ ಕುಟುಂಬಕ್ಕೆ ನೀಡಿದ ಪರಿಹಾರದ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಸೇನೆಯ ಹೇಳಿಕೆ ಹೊರಬಿದ್ದಿದೆ. ರಾಹುಲ್​ ಪೋಸ್ಟ್​ ಮಾಡಿದ ವಿಡಿಯೋದಲ್ಲಿ ಅಜಯ್ ಕುಮಾರ್ ಅವರ ತಂದೆ ಕೇಂದ್ರ ಸರ್ಕಾರದಿಂದ ಯಾವುದೇ ಪರಿಹಾರವನ್ನು ಪಡೆದಿಲ್ಲ ಎಂದು ಹೇಳಿದ್ದಾರೆ.

ಇದೇ ವಿಷಯವಾಗಿ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣ ವಂದನಾ ನಿರ್ಣಯದ ಚರ್ಚೆ ವೇಳೆ ರಾಹುಲ್​ ಗಾಂಧಿ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ರಾಜನಾಥ್​ ಸಿಂಗ್ ವಿರೋಧ ಪಕ್ಷದ ನಾಯಕ ಸಂಸತ್ತನ್ನು ದಾರಿತಪ್ಪಿಸಬಾರದು ಎಂದು ಹೇಳಿದ್ದರು. ಕರ್ತವ್ಯದ ವೇಳೆ ಹುತಾತ್ಮರಾದ ಅಗ್ನಿವೀರರಿಗೆ 1 ಕೋಟಿ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನಕ್ಕೆ ಚಂಪೈ ಸೊರೇನ್ ರಾಜೀನಾಮೆ: ಮತ್ತೆ ಸಿಎಂ ಆಗಲಿರುವ ಹೇಮಂತ್ ಸೊರೇನ್ - Chief Minister of Jharkhand

ETV Bharat Logo

Copyright © 2024 Ushodaya Enterprises Pvt. Ltd., All Rights Reserved.