ETV Bharat / bharat

ಭಾರತ - ಚೀನಾ ಯೋಧರ ವಾಪಸಾತಿ ಪ್ರಕ್ರಿಯೆ ಪೂರ್ಣ: ಪೂರ್ವ ಲಡಾಖ್​ನಲ್ಲಿ ಭಾರತದಿಂದ ಗಸ್ತು

ಭಾರತೀಯ ಹಾಗೂ ಚೀನಾ ದೇಶಗಳ ಯೋಧರ ವಾಪಸಾತಿ ಪ್ರಕ್ರಿಯೆ ಪೂರ್ಣಗೊಂಡಿರುವ ಬೆನ್ನಲ್ಲೇ ಭಾರತೀಯ ಸೇನೆ ಶುಕ್ರವಾರ ಡೆಮ್‌ಚೋಕ್‌ನಲ್ಲಿ ಗಸ್ತು ತಿರುಗುವ ಪ್ರಾರಂಭಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : 3 hours ago

ನವದೆಹಲಿ: ಸಂಘರ್ಷಕ್ಕೆ ಕಾರಣವಾಗಿದ್ದ ಪೂರ್ವ ಲಡಾಖ್‌ನ ಎರಡು ಪ್ರದೇಶದಲ್ಲಿ ಚೀನಾ- ಭಾರತ ತಮ್ಮ ಸೇನೆಗಳನ್ನು ಹಿಂತೆಗೆದುಕೊಂಡ ಬೆನ್ನಲ್ಲೇ ಭಾರತೀಯ ಸೇನೆಯು ಶುಕ್ರವಾರ ಡೆಮ್‌ಚೋಕ್‌ನಲ್ಲಿ ಗಸ್ತು ತಿರುಗಲು ಪ್ರಾರಂಭಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದ ಡೆಮ್‌ಚೋಕ್‌ ಮತ್ತು ಡೆಪ್ಸಾಂಗ್‌ ಪ್ರದೇಶಗಳಲ್ಲಿ ನಿಯೋಜಿಸಿದ್ದ ಎರಡೂ ದೇಶಗಳ ಸೇನೆಯನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದೆ. ಡೆಮ್‌ಚೋಕ್‌ನಲ್ಲಿ ಈಗಾಗಲೇ ಗಸ್ತು ತಿರುಗಲು ಪ್ರಾರಂಭಿಸಿದ್ದು, ಡೆಪ್ಸಾಂಗ್​ನಲ್ಲಿ ಶೀಘ್ರದಲ್ಲೇ ಗಸ್ತು ತಿರುಗಲು ನಿರ್ಧರಿಸಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.

ಗಸ್ತು ತಿರುಗುವ ಬಗ್ಗೆ ಗ್ರೌಂಡ್ ಕಮಾಂಡರ್‌ಗಳ ಮಟ್ಟದಲ್ಲಿ ಮಾತುಕತೆ ಮುಂದುವರಿಯುತ್ತದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ. ಎರಡೂ ದೇಶಗಳ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳು ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ವಾಸ್ತವ ಗಡಿ ನಿಯಂತ್ರಣ ರೇಖೆಯ ಹಲವು ಕಡೆಗಳಲ್ಲಿ ಭಾರತ ಮತ್ತು ಚೀನಾದ ಯೋಧರು ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿ ವಿನಿಮಯ ಮಾಡಿಕೊಂಡರು. ಈ ಬೆಳವಣಿಗೆ ಉಭಯ ದೇಶಗಳು ಸಂಬಂಧಕ್ಕೆ ಹೊಸ ತಿರುವು ನೀಡಿದೆ.

"ಕಳೆದ ಹಲವು ವಾರಗಳ ಮಾತುಕತೆಗಳ ನಂತರ ಭಾರತ ಮತ್ತು ಚೀನಾ ನಡುವೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಮತ್ತು ಇದು 2020 ರಲ್ಲಿ ಉದ್ಭವಿಸಿದ ಸಮಸ್ಯೆಗಳಿಗೆ ಪರಿಹಾರವಾಗಿದೆ" ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅ.21 ರಂದು ದೆಹಲಿಯಲ್ಲಿ ಹೇಳಿದ್ದರು.

ಇದನ್ನೂ ಓದಿ: LACಯಲ್ಲಿ ಸೇನೆ ಹಿಂತೆಗೆತ ಬಹುತೇಕ ಪೂರ್ಣ: ಸಿಹಿ ಹಂಚಿಕೊಂಡ ಭಾರತ, ಚೀನಾ ಯೋಧರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.