ETV Bharat / bharat

ಪಾಕಿಸ್ತಾನಕ್ಕೆ ತೆರಳುತ್ತಿದ್ದ ಚೀನಾ 'ಅಣ್ವಸ್ತ್ರ ಸರಕು' ಮುಂಬೈ ಬಂದರಿನಲ್ಲಿ ಜಪ್ತಿ - ಅಣ್ವಸ್ತ್ರ ತಯಾರಿಕೆ

ಪಾಕಿಸ್ತಾನದ ಸೇನಾಪಡೆಗೆ ಬೇಕಾಗುವ ಶಸ್ತ್ರಾಸ್ತ್ರಗಳ ತಯಾರಿಕೆಗೆ ಚೀನಾ ನೆರವಾಗುತ್ತಿದೆ ಎಂಬುದು ಮತ್ತೆ ವಿಧಿತವಾಗಿದೆ. ಶಸ್ತ್ರಾಸ್ತ್ರ ತಯಾರಿಕೆಗೆ ಬೇಕಾಗುವ ಸರಕು ಸಾಗಿಸುತ್ತಿದ್ದ ಚೀನಾದ ಹಡಗನ್ನು ಭಾರತ ತಡೆದು ಜಪ್ತಿ ಮಾಡಿದೆ.

ಚೀನಾ ಹಡಗು ಜಪ್ತಿ
ಚೀನಾ ಹಡಗು ಜಪ್ತಿ
author img

By PTI

Published : Mar 3, 2024, 10:18 AM IST

ಮುಂಬೈ: ಪಾಕಿಸ್ತಾನದ ಅಣ್ವಸ್ತ್ರ ಮತ್ತು ಶಸ್ತ್ರಾಸ್ತ್ರ ತಯಾರಿಕೆಗೆ ಚೀನಾ ನೆರವಾಗುತ್ತಿದೆ ಎಂಬುದು ಮತ್ತೆ ಬಹಿರಂಗವಾಗಿದೆ. ಅಣ್ವಸ್ತ್ರ ತಯಾರಿಕೆಗೆ ಬಳಸಲಾಗುವ ವಸ್ತುಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಚೀನಾದ ಹಡಗನ್ನು ಭಾರತ, ಮುಂಬೈ ಬಂದರಿನಲ್ಲಿ ಜಪ್ತಿ ಮಾಡಿದೆ.

ಗುಪ್ತಚರ ದಳದ ಮೂಲಕ ನಿಖರ ಮಾಹಿತಿ ಪಡೆದ ಕಸ್ಟಮ್ಸ್​ ಅಧಿಕಾರಿಗಳು ಜನವರಿ 23ರಂದು ಇಲ್ಲಿನ ನವ ಶೆವಾ ಬಂದರಿನ ಮೂಲಕ ಕರಾಚಿಗೆ ತೆರಳುತ್ತಿದ್ದ ಚೀನಾ ಹಡಗನ್ನು ತಡೆದು ತಪಾಸಣೆ ನಡೆಸಿದ್ದಾರೆ. ಅದರಲ್ಲಿ ಅಣ್ವಸ್ತ್ರ ತಯಾರಿಕೆಗೆ ಬಳಸಲಾಗುವ ವಸ್ತುಗಳನ್ನು ತುಂಬಲಾಗಿತ್ತು. ನಾವಿಕರಿಂದ ಈ ಬಗ್ಗೆ ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ.

ಜಪ್ತಿಯಾದ ಹಡಗಿನಲ್ಲಿರುವ ಸರಕನ್ನು ಶಾಂಘೈ ಜೆಎಕ್ಸ್​ಇ ಗ್ಲೋಬಲ್ ಲಾಜಿಸ್ಟಿಕ್ಸ್ ಕಂಪನಿ ಲಿಮಿಟೆಡ್‌ನಿಂದ ಸಿಯಾಲ್‌ಕೋಟ್‌ನ ಪಾಕಿಸ್ತಾನ ವಿಂಗ್ಸ್​ ಪ್ರೈವೇಟ್​ ಲಿಮಿಟೆಡ್​ ಕಂಪನಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ಮೊದಲು ದಾಖಲೆಗಳನ್ನು ನೀಡಲಾಗಿತ್ತು.

ತಪಾಸಣೆಯ ಬಳಿಕ, ಅಣ್ವಸ್ತ್ರಕ್ಕೆ ಬಳಸುವ 22,180 ಕಿಲೋಗ್ರಾಂಗಳಷ್ಟು ತೂಕದ ವಸ್ತುಗಳನ್ನು ತೈಯುವಾನ್ ಮೈನಿಂಗ್ ಕಂಪನಿಯು, ಪಾಕಿಸ್ತಾನದ ಕಾಸ್ಮೊಸ್ ಇಂಜಿನಿಯರಿಂಗ್‌ಗೆ ರವಾನಿಸುತ್ತಿದೆ ಎಂದು ತಿಳಿದುಬಂದಿದೆ. ಈ ಕಾಸ್ಮೊಸ್​ ಕಂಪನಿಯು ಪಾಕಿಸ್ತಾನದ ಸೇನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತದೆ. ಅಂದರೆ, ಇದು ಶಸ್ತ್ರಾಸ್ತ್ರ ತಯಾರಿಕೆಗೆ ರವಾನೆಯಾಗುತ್ತಿದ್ದ ಸರಕು ಎಂದು ದೃಢಪಟ್ಟಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಡಿಆರ್​ಡಿಒ ಪರಿಶೀಲನೆ: ಜಪ್ತಿಯಾದ ಹಡಗಿನಲ್ಲಿ ಇರುವ ವಸ್ತುವನ್ನು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ತಂಡವು ಪರಿಶೀಲಿಸಿ, ಇದನ್ನು ಪರಮಾಣು ಕಾರ್ಯಕ್ರಮಕ್ಕಾಗಿ ಬಳಸಲಾಗುತ್ತದೆ ಎಂದು ದೃಢಪಡಿಸಿದ್ದಾರೆ. ತಜ್ಞರ ಪ್ರಕಾರ, ಪಾಕಿಸ್ತಾನದ ಕ್ಷಿಪಣಿ ತಯಾರಿಕೆಯ ಕಾರ್ಯಕ್ರಮದಲ್ಲಿನ ಭಾಗಗಳನ್ನು ತಯಾರಿಸಲು ಈ ಸರಕು ಬಳಸಲಾಗುತ್ತದೆ ಎಂದು ಹೇಳಿದ್ದಾರೆ.

ಚೀನಾದಿಂದ ಪಾಕಿಸ್ತಾನಕ್ಕೆ ರವಾನೆಯಾಗುತ್ತಿದ್ದ ಇಂತಹ ಮಿಲಿಟರಿ ಸಂಬಂಧಿತ ವಸ್ತುಗಳನ್ನು ಭಾರತದ ಬಂದರು ಅಧಿಕಾರಿಗಳು ವಶಪಡಿಸಿಕೊಂಡಿರುವುದು ಇದು ಮೊದಲಲ್ಲ. 2022ರಲ್ಲಿ ಇಟಲಿ ನಿರ್ಮಿತ ಥರ್ಮೋಎಲೆಕ್ಟ್ರಿಕ್ ಉಪಕರಣಗಳ ಸಾಗಣೆಯನ್ನು ಇದೇ ನವಾ ಶೆವಾ ಬಂದರಿನಲ್ಲಿ ತಡೆದು ವಶಕ್ಕೆ ಪಡೆಯಲಾಗಿತ್ತು. 2020ರಲ್ಲಿ ಕ್ಷಿಪಣಿ ಉತ್ಪಾದನೆಗೆ ಬೇಕಾದ ಇಂಡಸ್ಟ್ರಿಯಲ್​ ಡ್ರೈಯರ್​ ಅನ್ನು ಚೀನಾವು ತನ್ನ ಹಡಗಿನಲ್ಲಿ ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿತ್ತು. ಅದನ್ನು ಜಪ್ತಿ ಮಾಡಲಾಗಿತ್ತು.

ಭಾರತದ ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಚೀನಾ ಪರಮಾಣು ವಿದ್ಯುತ್​ ಸ್ಥಾವರಗಳನ್ನು ಸ್ಥಾಪಿಸಲು ನೆರವು ನೀಡುತ್ತಿದೆ. ಚಶ್ಮಾದಲ್ಲಿ 300 ಮೆಗಾವ್ಯಾಟ್​ನ ನಾಲ್ಕು ಪರಮಾಣು ವಿದ್ಯುತ್ ಸ್ಥಾವರ, ಕರಾಚಿಯಲ್ಲಿ 1 ಸಾವಿರ ಮೆಗಾ ವ್ಯಾಟ್​ನ ಎರಡು ಸ್ಥಾವರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ಪರಮಾಣು ಪೂರೈಕೆದಾರರ ಗುಂಪು (ಎನ್​ಎಸ್​ಜಿ) ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂಬ ಆರೋಪವಿದೆ.

ಇದನ್ನೂ ಓದಿ: ಅಂಡರ್‌ವಾಟರ್ ಪರಮಾಣು ಡ್ರೋನ್ ಪರೀಕ್ಷೆ: ಅಮೆರಿಕ, ಜಪಾನ್‌ಗೆ ಉತ್ತರ ಕೊರಿಯಾ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.