ETV Bharat / bharat

'ಚಕ್ರವ್ಯೂಹ'ದಲ್ಲಿ ಅಭಿಮನ್ಯುವಿನಂತೆ ಯುವಕರು, ಮಹಿಳೆಯರನ್ನು ಸಿಲುಕಿಸಿ ಭಯದ ವಾತಾವರಣ ಸೃಷ್ಟಿ: ರಾಹುಲ್​ - Rahul Gandhi - RAHUL GANDHI

ಸಾವಿರಾರು ವರ್ಷಗಳ ಹಿಂದೆ ಕುರುಕ್ಷೇತ್ರದ 'ಚಕ್ರವ್ಯೂಹ'ದಲ್ಲಿ ಆರು ಜನರು ಸೇರಿ ಅಭಿಮನ್ಯುವನ್ನು ಸಿಲುಕಿಸಿ ಸಾಯಿಸಿದರು. ಇಂದು ಮತ್ತೊಂದು 'ಚಕ್ರವ್ಯೂಹ' ಸೃಷ್ಟಿಸಿ ದೇಶದ ಯುವಕರು, ಮಹಿಳೆಯರು, ರೈತರು, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ತೊಂದರೆಗೆ ಸಿಲುಕಿಸಲಾಗುತ್ತಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟೀಕಿಸಿದ್ದಾರೆ.

ಲೋಕಸಭೆಯಲ್ಲಿ ಸೋಮವಾರ  ರಾಹುಲ್​ ಗಾಂಧಿ ಮಾತನಾಡಿದರು.
ಲೋಕಸಭೆಯಲ್ಲಿ ರಾಹುಲ್​ ಗಾಂಧಿ ಮಾತು (IANS)
author img

By PTI

Published : Jul 30, 2024, 11:49 AM IST

Updated : Jul 30, 2024, 12:58 PM IST

ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷದ ನಾಯಕ ರಾಹುಲ್​ ಗಾಂಧಿ ತಮ್ಮ ತೀಕ್ಷ್ಣ ವಾಗ್ದಾಳಿ ಮುಂದುವರೆಸಿದ್ದಾರೆ. ಇದೀಗ 'ಚಕ್ರವ್ಯೂಹ' ರೂಪಕವನ್ನು ಅಸ್ತ್ರವಾಗಿ ಬಳಸಿಕೊಂಡು ಟೀಕಾಪ್ರಹಾರ ನಡೆಸಿದ್ದಾರೆ.

''ಪ್ರಧಾನಿ ನರೇಂದ್ರ ಮೋದಿ ಸೇರಿ ಆರು ಜನರ ತಂಡ ಇಡೀ ದೇಶವನ್ನು 'ಚಕ್ರವ್ಯೂಹ'ದಲ್ಲಿ ಸಿಲುಕಿಸುವುದರೊಂದಿಗೆ ಎಲ್ಲೆಡೆ ಭಯದ ವಾತಾವರಣ ನಿರ್ಮಿಸುತ್ತಿದೆ. ಈ 'ಚಕ್ರವ್ಯೂಹ'ವನ್ನು ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟ ಭೇದಿಸಲಿದೆ'' ಎಂದು ಹೇಳಿದ್ದಾರೆ.

2024-25ನೇ ಸಾಲಿನ ಬಜೆಟ್‌ ಕುರಿತು ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ ರಾಹುಲ್​ ಗಾಂಧಿ, ''ಕೇಂದ್ರ ಬಜೆಟ್‌ನ ಏಕೈಕ ಗುರಿ ಎಂದರೆ, ದೊಡ್ಡ ಉದ್ಯಮಿಗಳು, ರಾಜಕೀಯ ಏಕಸ್ವಾಮ್ಯವನ್ನು ಬಲಪಡಿಸುವುದು ಹಾಗೂ ಪ್ರಜಾಸತ್ತಾತ್ಮಕ ರಚನೆಯನ್ನು ನಾಶಪಡಿಸುವುದಾಗಿದೆ. ಅಲ್ಲದೇ, ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಲಾಗಿದೆ. ಆ ಭಯ ನಮ್ಮ ದೇಶದ ಪ್ರತಿಯೊಂದು ಅಂಶವನ್ನೂ ವ್ಯಾಪಿಸಿದೆ. ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಪ್ರಧಾನಿಯಾಗುವ ಕನಸು ಕಾಣಲು ಅವಕಾಶವಿದೆ. ರಕ್ಷಣಾ ಸಚಿವರು ಪ್ರಧಾನಿಯಾಗಲು ಬಯಸಿದರೆ, ಅಲ್ಲಿ ದೊಡ್ಡ ಸಮಸ್ಯೆ ಎದುರಾಗುತ್ತದೆ. ಇದೇ ಭಯವನ್ನೂ ದೇಶಾದ್ಯಂತ ಹರಡಲಾಗಿದೆ. ಬಿಜೆಪಿಯ ನನ್ನ ಸ್ನೇಹಿತರು, ಸಚಿವರಿಂದ ಹಿಡಿದು ರೈತರು, ಕಾರ್ಮಿಕರು ಯಾಕೆ ಭಯಭೀತರಾಗಿದ್ದಾರೆ'' ಎಂದು ಪ್ರಶ್ನಿಸಿದರು.

''ಸಾವಿರಾರು ವರ್ಷಗಳ ಹಿಂದೆ ಹರಿಯಾಣದ ಕುರುಕ್ಷೇತ್ರದಲ್ಲಿ 'ಚಕ್ರವ್ಯೂಹ'ದಲ್ಲಿ ಆರು ಜನರು ಸೇರಿ ಅಭಿಮನ್ಯು ಸಿಲುಕಿಸಿ ಸಾಯಿಸಿದರು. ಈ 'ಚಕ್ರವ್ಯೂಹ'ದಲ್ಲಿ ಹಿಂಸೆ ಮತ್ತು ಭಯವಿದೆ. 'ಚಕ್ರವ್ಯೂಹ'ವನ್ನು 'ಪದ್ಮವ್ಯೂಹ' ಎಂದೂ ಕರೆಯಲಾಗುತ್ತದೆ. 21ನೇ ಶತಮಾನದಲ್ಲಿ ಮತ್ತೊಂದು ಈ 'ಚಕ್ರವ್ಯೂಹ' ಸಿದ್ಧಗೊಂಡಿದೆ. ಅದು ಕಮಲದ ರೂಪದಲ್ಲಿದ್ದು ಪ್ರಧಾನಿ (ನರೇಂದ್ರ ಮೋದಿ) ತಮ್ಮ ಎದೆಯ ಮೇಲೆ ಅದರ ಚಿಹ್ನೆ ಧರಿಸುತ್ತಾರೆ. ಅಂದು ಅಭಿಮನ್ಯುನೊಂದಿಗೆ ಏನಾಗಿತ್ತೋ, ಅದು ಇಂದು ಭಾರತ ಮತ್ತು ಅದರಲ್ಲಿನ ಯುವಕರು, ಮಹಿಳೆಯರು, ರೈತರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಆಗುತ್ತಿದೆ'' ಎಂದು ಆರೋಪಿಸಿದರು.

ಕೋಲಾಹಲ ಸೃಷ್ಟಿಸಿದ ಆರು ಹೆಸರು ಉಲ್ಲೇಖ: ಮುಂದುವರೆದು ಮಾತನಾಡಿ, ''ಇಂದು ಕೂಡ ಈ 'ಚಕ್ರವ್ಯೂಹ'ದ ಕೇಂದ್ರ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಆರು ಜನರಿದ್ದಾರೆ'' ಎಂದರು. ಇದೇ ವೇಳೆ, ಉಳಿದ ನಾಲ್ವರ ಹೆಸರನ್ನು (ಅದಾನಿ, ಅಂಬಾನಿ, ಅಜಿತ್ ದೋವಲ್ ಮತ್ತು ಮೋಹನ್ ಭಾಗವತ್) ಉಲ್ಲೇಖಿಸಿದರು. ಆದರೆ, ಆಗ ಸ್ಪೀಕರ್ ಓಂ ಬಿರ್ಲಾ ಮಧ್ಯಪ್ರವೇಶಿಸಿ, ''ಇತರರು ಸದನದ ಸದಸ್ಯರಲ್ಲ. ಆದ್ದರಿಂದ ಅವರ ಹೆಸರು ಉಲ್ಲೇಖಿಸಕೂಡದು'' ಎಂದು ಸೂಚಿಸಿದರು. ಈ ವೇಳೆ, ಪ್ರತಿಪಕ್ಷಗಳು ಹಾಗೂ ಆಡಳಿತ ಪಕ್ಷಗಳ ಸದಸ್ಯರ ನಡುವೆ ಕೋಲಾಹಲವೂ ಉಂಟಾಯಿತು.

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತನಾಡಿ, ''ಸಂಸದೀಯ ಕಾರ್ಯವಿಧಾನವನ್ನು ಪ್ರತಿಪಕ್ಷದ ನಾಯಕ ರಾಹುಲ್​ ಗಾಂಧಿ ಅನುಸರಿಸುತ್ತಿಲ್ಲ'' ಎಂದು ಆಕ್ಷೇಪಿಸಿದರು. ಅಲ್ಲದೇ, ''ತಮಗೆ ಮಧ್ಯಪ್ರವೇಶಿಸಲು ಅವಕಾಶ ನೀಡುವ ಸೌಜನ್ಯವನ್ನೂ ತೋರಿಸುತ್ತಿಲ್ಲ'' ಎಂದು ರಿಜಿಜು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್​ ಗಾಂಧಿ, ''ಪ್ರಧಾನಿ ಮತ್ತು ನಿಮ್ಮ ಸಚಿವರು ಮಾತನಾಡುವಾಗ ಪ್ರತಿಪಕ್ಷಗಳ ಸದಸ್ಯರ ಮಧ್ಯಪ್ರವೇಶಕ್ಕೂ ಅವಕಾಶ ನೀಡುವ ಸೌಜನ್ಯ ತೋರಿದರೆ, ಅದನ್ನು ನಾವು ಅನುಸರಿಸುತ್ತೇವೆ'' ಎಂದು ತಿರುಗೇಟು ನೀಡಿದರು.

'ಚಕ್ರವ್ಯೂಹ'ದೊಂದಿಗೆ ಸೇರಿರುವ 3 ಶಕ್ತಿಗಳು: ''ಭಾರತವನ್ನು ವಶಪಡಿಸಿಕೊಂಡ 'ಚಕ್ರವ್ಯೂಹ'ದ ಹಿಂದೆ ಮೂರು ಶಕ್ತಿಗಳು ಇದೆ. ಮೊದಲನೆಯದು ಏಕಸ್ವಾಮ್ಯ ಬಂಡವಾಳದ ಕಲ್ಪನೆ, ಇಡೀ ಭಾರತೀಯ ಸಂಪತ್ತನ್ನು ಕೇವಲ ಇಬ್ಬರು ವ್ಯಕ್ತಿಗಳಿಗೆ ಹೊಂದಲು ಅವಕಾಶ ನೀಡಬೇಕು. ಎರಡನೆಯದು, ಈ ದೇಶದ ಸಂಸ್ಥೆಗಳು, ಏಜೆನ್ಸಿಗಳು, ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆ ಮತ್ತು ಮೂರನೆಯದು ಯಾರಿಗೂ ಪ್ರವೇಶವಿಲ್ಲದ ರಾಜಕೀಯ. ಈ ಮೂರು ಒಟ್ಟಾಗಿ 'ಚಕ್ರವ್ಯೂಹ'ದ ಹೃದಯಭಾಗದಲ್ಲಿದ್ದು, ಈ ದೇಶವನ್ನು ನಾಶಗೊಳಿಸುತ್ತಿದೆ'' ಎಂದು ರಾಹುಲ್​ ವಾಗ್ದಾಳಿ ನಡೆಸಿದರು.

''ಈ 'ಚಕ್ರವ್ಯೂಹ'ದ ಶಕ್ತಿಯನ್ನು ಬಜೆಟ್ ದುರ್ಬಲಗೊಳಿಸುತ್ತದೆ ಮತ್ತು ದೇಶದ ರೈತರು, ಯುವಕರು, ಕಾರ್ಮಿಕರು ಮತ್ತು ದೇಶದ ಸಣ್ಣ ಉದ್ಯಮಗಳಿಗೆ ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನನಗೆ ಇತ್ತು. ಆದರೆ, ನಾನು ಕಂಡದ್ದು ಈ ಏಕಸ್ವಾಮ್ಯದ ವ್ಯಾಪಾರದ ಚೌಕಟ್ಟು, ಪ್ರಜಾಪ್ರಭುತ್ವ ರಚನೆಯನ್ನು ನಾಶಪಡಿಸುವ ರಾಜಕೀಯ ಏಕಸ್ವಾಮ್ಯದ ಚೌಕಟ್ಟು ಮತ್ತು ಏಜೆನ್ಸಿಗಳ ಚೌಕಟ್ಟನ್ನು ಬಲಪಡಿಸುವುದು ಈ ಬಜೆಟ್‌ನ ಏಕೈಕ ಗುರಿಯಾಗಿದೆ'' ಎಂದು ಟೀಕಿಸಿದರು.

''ಪ್ರಶ್ನೆಪತ್ರಿಕೆ ಸೋರಿಕೆಯು ಇಂದಿನ ಯುವಜನರ ದೊಡ್ಡ ಸಮಸ್ಯೆಯಾಗಿದೆ. ಆದರೆ, ಬಜೆಟ್‌ನಲ್ಲಿ ಚರ್ಚಿಸಲಾಗಿಲ್ಲ. ಮಧ್ಯಮ ವರ್ಗದ ಬೆನ್ನು, ಎದೆಗೆ ಚೂರಿ ಹಾಕಲಾಗಿದೆ. ಇದರಿಂದ ಮಧ್ಯಮ ವರ್ಗದವರು ನಿಮ್ಮನ್ನು (ಬಿಜೆಪಿ) ಬಿಟ್ಟು ಈ ಕಡೆ ಬರಲಿದ್ದಾರೆ. ಇದು 'ಇಂಡಿಯಾ' ಮೈತ್ರಿಕೂಟಕ್ಕೆ ಒಂದು ಗುಪ್ತ ಪ್ರಯೋಜನವಾಗಿದೆ. ಅಲ್ಲದೇ, ಇದೇ ಸದನದಲ್ಲಿ ಎಂಎಸ್‌ಪಿ ಮತ್ತು ಜಾತಿ ಗಣತಿಗೆ ಕಾನೂನು ರಕ್ಷಣೆ ನೀಡುವುದನ್ನು ಸದನವು ಅಂಗೀಕರಿಸಲಿದೆ ಎಂದು ನಾನು ಖಚಿತವಾಗಿ ಹೇಳುತ್ತೇನೆ'' ಎಂದು ಅವರು ಹೇಳಿದರು.

ಇದನ್ನೂ ಓದಿ: ವಯನಾಡ್​ ಭೂಕುಸಿತ: ಸಿಎಂ ಪಿಣರಾಯಿ ಜೊತೆ ಮೋದಿ, ರಾಹುಲ್ ಮಾತುಕತೆ; ಮೃತರ ಕುಟುಂಬಗಳಿಗೆ ₹2 ಲಕ್ಷ ಪರಿಹಾರ

Last Updated : Jul 30, 2024, 12:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.