ETV Bharat / bharat

ಹೈಸ್ಪೀಡ್ ರೈಲು ಯೋಜನೆ: ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಭಾರತ - ಸ್ಪೇನ್ - HIGH SPEED RAIL COLLABORATION

ಹೈಸ್ಪೀಡ್​ ರೈಲಿಗಳಿಗಾಗಿ ಫಾಸ್ಟ್​ ಟ್ರಾಕ್​​​​​​ ನಿರ್ಮಾಣ, ರೈಲ್ವೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಭಾರತ - ಸ್ಪೇನ್​ ಒಪ್ಪಂದ ಮಾಡಿಕೊಂಡಿವೆ.

India and Spain put high-speed rail collaboration on fast track
ಹೈಸ್ಪೀಡ್ ರೈಲು ಯೋಜನೆ: ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಭಾರತ - ಸ್ಪೇನ್ (IANS)
author img

By ETV Bharat Karnataka Team

Published : Oct 29, 2024, 9:24 AM IST

ನವದೆಹಲಿ/ಮ್ಯಾಡ್ರಿಡ್: ರೈಲ್ವೆ ಕ್ಷೇತ್ರದಲ್ಲಿ ಸಹಕಾರದ ಕುರಿತು ಭಾರತ ಮತ್ತು ಸ್ಪೇನ್ ಸೋಮವಾರ ಎಂಒಯುಗೆ ಸಹಿ ಹಾಕಿದವು. ಹೈಸ್ಪೀಡ್‌ ರೈಲು ಯೋಜನೆ, ನಿಯೋಜನೆ, ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಉಭಯ ರಾಷ್ಟ್ರಗಳ ಸಹಯೋಗವನ್ನು ಹೆಚ್ಚಿಸುವ ಸಂಬಂಧ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಸ್ಪ್ಯಾನಿಷ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ ಅವರ ಭಾರತ ಭೇಟಿಯ ಚೌಕಟ್ಟಿನೊಳಗೆ ಭಾರತೀಯ ರೈಲ್ವೆ ಸಚಿವಾಲಯ ಮತ್ತು ಸ್ಪೇನ್‌ನ ಸಾರಿಗೆ ಸಚಿವಾಲಯದ ನಡುವೆ ವಡೋದರಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ದೇಶದ ಸಾರಿಗೆ ಅಭಿವೃದ್ಧಿಗೆ ಸಚಿವ ಆಸ್ಕರ್ ಪುಯೆಂಟೆ ಅವರೊಂದಿಗೆ ಭಾರತ ಸರ್ಕಾರ ಸಹಿ ಹಾಕಿದೆ.

ಉಭಯ ರಾಷ್ಟ್ರಗಳ ಸಂಬಂಧ ಸುಧಾರಣೆ ಭಾಗವಾಗಿ ಈ ಒಪ್ಪಂದ: ಅಸ್ತಿತ್ವದಲ್ಲಿರುವ ರೈಲ್ವೆ ಮೂಲಸೌಕರ್ಯಗಳ ಆಪ್ಟಿಮೈಸೇಶನ್ ಮತ್ತು ಇಂಟರ್‌ಮೋಡಲಿಟಿ ಉತ್ತೇಜಿಸುವ ಡಾಕ್ಯುಮೆಂಟ್​ಗೆ ಸಹಿ ಹಾಕಲಾಯಿತು. ಇದು ಎರಡೂ ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಉತ್ತಮ ಸಂಬಂಧವನ್ನು ದೃಢೀಕರಿಸುತ್ತದೆ ಎಂದು ಮ್ಯಾಡ್ರಿಡ್ ನಂಬುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಉಭಯ ರಾಷ್ಟ್ರಗಳ ನಡುವೆ ಈಗ ಆಗಿರುವ ಒಪ್ಪಂದವು ಐದು ವರ್ಷಗಳ ಆರಂಭಿಕ ಮಾನ್ಯತೆಯನ್ನು ಹೊಂದಿರುತ್ತದೆ ಮತ್ತು ವಾರ್ಷಿಕವಾಗಿ ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತದೆ ಎಂದು ಉಭಯ ರಾಷ್ಟ್ರಗಳ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಒಪ್ಪಂದ ಏನೆಲ್ಲ ಕೆಲಸ ಮಾಡಲಿದೆ?: ಯೋಜನೆ, ವಿನ್ಯಾಸ, ಅಭಿವೃದ್ಧಿ, ನಿರ್ಮಾಣ, ಪ್ರಾರಂಭ ಮತ್ತು ಮೂಲಸೌಕರ್ಯಗಳ ಕಾರ್ಯಾಚರಣೆ, ನಿಲ್ದಾಣಗಳು, ರೈಲ್ವೆ ಸೌಲಭ್ಯಗಳು ಮತ್ತು ದೂರದ ನೆಟ್‌ವರ್ಕ್‌ಗಳಿಗೆ ಉಪಕರಣಗಳು ಮತ್ತು ಸೇವೆಗಳ ಏಕೀಕರಣಗೊಳಿಸಲು ಪರಸ್ಪರ ಕಾರ್ಯಸಾಧ್ಯತೆಯ ಮೂಲಕ ಅವುಗಳ ಮೇಲೆ ಪ್ರಸಾರ ಮಾಡಿ, ವಿಭಿನ್ನ ಟ್ರ್ಯಾಕ್ ಗೇಜ್‌ಗಳಲ್ಲಿ ಟ್ರಾಫಿಕ್ ಸಾಧ್ಯವಾಗುವಂತೆ ಮಾಡುತ್ತದೆ. ಅಸ್ತಿತ್ವದಲ್ಲಿರುವ ಸುಧಾರಣೆಗಳೊಂದಿಗೆ ಫಾಸ್ಟ್​ ಟ್ರ್ಯಾಕ್​ಗಳ ನಿರ್ಮಾಣದಲ್ಲಿ ಹೂಡಿಕೆಯ ಪ್ರಯೋಜನಗಳನ್ನು ಉತ್ತಮಗೊಳಿಸುತ್ತದೆ.

ರೈಲ್ವೆ ಸುರಕ್ಷತೆಗೆ ಹೆಚ್ಚಿನ ಒತ್ತು: ರೈಲು ಸಾರಿಗೆ ಮತ್ತು ರೈಲು ಸೇವೆಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ಹಾಗೂ ಸುರಕ್ಷತೆಯನ್ನು ಸುಧಾರಿಸಲು ವಿಶೇಷ ಗಮನವನ್ನು ನೀಡುವುದು ಈ ಒಪ್ಪಂದ ಪ್ರಮುಖ ಉದ್ದೇಶ ಹಾಗೂ ಗುರಿಯಾಗಿದೆ. ಇದು ಯುರೋಪಿಯನ್ ರೈಲ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ERTMS) ನ ಆನ್-ಬೋರ್ಡ್ ಮತ್ತು ಗ್ರೌಂಡ್-ಆಧಾರಿತ ಉಪಕರಣಗಳ ಆಯ್ಕೆ, ನಿಯೋಜನೆ ಮತ್ತು ಏಕೀಕರಣ ಪ್ರಕ್ರಿಯೆಯನ್ನು ಬೆಂಬಲಿಸುತ್ತದೆ ಮತ್ತು ರೈಲ್ವೆ ಮೂಲಸೌಕರ್ಯ ಮತ್ತು ಸೌಲಭ್ಯಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ವೃತ್ತಿಪರ ತರಬೇತಿಯನ್ನು ಬಲಪಡಿಸಲು ತರಬೇತಿ ಉಪಕ್ರಮಗಳನ್ನು ಉತ್ತೇಜಿಸುತ್ತದೆ. ಹಾಗೆಯೇ ರೈಲ್ವೆ ಕಾರ್ಯಾಚರಣೆ ಮತ್ತು ರೈಲ್ವೆ ಸಂಚಾರ ನಿರ್ವಹಣೆಯನ್ನು ವ್ಯವಸ್ಥಿತಗೊಳಿಸಲಿದೆ.

18 ವರ್ಷಗಳ ಬಳಿಕ ಮೊದಲ ಭೇಟಿ: 18 ವರ್ಷಗಳ ಬಳಿಕ ಭಾರತಕ್ಕೆ ಅಧಿಕೃತ ಪ್ರವಾಸ ಕೈಗೊಂಡ ಮೊದಲ ಸ್ಪೇನ್ ಅಧ್ಯಕ್ಷ ಎಂಬ ಕೀರ್ತಿಗೆ ಸ್ಯಾಂಚೆಜ್ ಪಾತ್ರರಾಗಿದ್ದಾರೆ. ವಡೋದರಾದಲ್ಲಿ ಉಭಯ ನಾಯಕರ ನಡುವೆ ಸಹಿ ಹಾಕಲಾದ ಜಂಟಿ ಘೋಷಣೆಯು, ಮುಂಬರುವ ವರ್ಷಗಳಲ್ಲಿ ರಾಜಕೀಯ, ಆರ್ಥಿಕ ಮತ್ತು ವಾಣಿಜ್ಯ, ಸಾಂಸ್ಕೃತಿಕ, ವೈಜ್ಞಾನಿಕ, ತಾಂತ್ರಿಕ, ನಾವೀನ್ಯತೆ, ಕಾನ್ಸುಲರ್ ವ್ಯವಹಾರಗಳು, ಪ್ರವಾಸೋದ್ಯಮ ಮತ್ತು ಜನರಿಂದ ಜನರ ಸಂಬಂಧ ಕ್ಷೇತ್ರಗಳಲ್ಲಿ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ.

2026 ರಲ್ಲಿ ಭಾರತ - ಸ್ಪೇನ್ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಕೃತಕ ಬುದ್ಧಿಮತ್ತೆಯ ಜಂಟಿ ಸಂಘಟನೆಯೊಂದಿಗೆ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ನೇ ವಾರ್ಷಿಕೋತ್ಸವ ಸ್ಮರಿಸಲು ಸಹ ಒಪ್ಪಿಗೆ ನೀಡಲಾಗಿದೆ.

ಇದನ್ನು ಓದಿ: ರಷ್ಯಾ - ಉಕ್ರೇನ್ ಯುದ್ಧ ತಡೆಯುವ ಶಕ್ತಿ ಭಾರತದ ಪ್ರಧಾನಿ ಮೋದಿಗೆ ಇದೆ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.