ETV Bharat / bharat

ಕೌಟುಂಬಿಕ ಕಲಹ: ಸಹೋದರನಿಗೆ ಗುಂಡು ಹಾರಿಸಿ ಕೊಲೆ ಮಾಡಿದ ಅಣ್ಣ - ಕೌಟುಂಬಿಕ ಕಲಹ

Raipur Murder Case: ಕೌಟುಂಬಿಕ ಕಲಹದ ಹಿನ್ನೆಲೆ ಅಣ್ಣ ತನ್ನ ಸ್ವಂತ ಸಹೋದರನಿಗೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ರಾಯ್‌ಪುರದಲ್ಲಿ ನಡೆದಿದೆ.

ವಶಪಡಿಸಿಕೊಂಡ ಪಿಸ್ತೂಲ್​
ವಶಪಡಿಸಿಕೊಂಡ ಪಿಸ್ತೂಲ್​
author img

By ETV Bharat Karnataka Team

Published : Feb 26, 2024, 12:53 PM IST

ಛತ್ತೀಸ್‌ಗಢ (ರಾಯಪುರ): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಣ್ಣನೊಬ್ಬ ತನ್ನ ಸ್ವಂತ ಸಹೋದರನಿಗೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ರಾಯಪುರದ ಸಫೈರ್ ಗ್ರೀನ್ ಫೇಸ್ ಸಮೀಪ ಭಾನುವಾರ ರಾತ್ರಿ ನಡೆದಿದೆ. ಪಿಯೂಷ್ ಝಾ ಗುಂಡು ಹಾರಿಸಿದ ಅಣ್ಣ. ಪರಾಗ್ ಝಾ ಗುಂಡೇಟು ತಿಂದು ಮೃತಪಟ್ಟ ಸಹೋದರ.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯ ಎಸಗಿದ ಬಳಿಕ ಪಿಯೂಷ್ ಝಾ ವಿಡಿಯೋ ಕಾಲ್ ಮೂಲಕ ತಾಯಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಘಟನೆ ಬಳಿಕ ಭಯದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಹುಡುಕಿ ಕರೆ ತಂದಿದ್ದಾರೆ.

ಘಟನೆಗೆ ಕಾರಣ: ಇಬ್ಬರು ಡ್ರೋನ್ ರಿಪೇರಿ ಮಾಡುತ್ತಿದ್ದರು. ಆದರೆ, ಪಿಯೂಷ್ ಝಾ ಮದ್ಯ ವ್ಯಸನಿಯಾಗಿದ್ದನಂತೆ. ಆಗಾಗ ಕುಡಿದು ಮನೆಗೆ ಬರುತ್ತಿದ್ದ. ಇಬ್ಬರ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ಆದರೆ, ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ. ಭಾನುವಾರ ರಾತ್ರಿ 11:30ಕ್ಕೆ ಗುಂಡು ಹಾರಿಸಿ ಕೊಲೆ ಮಾಡಿರುವುದಾಗಿ ವಿಡಿಯೋ ಕಾಲ್ ಮಾಡಿ ಹೇಳಿದಾಗಲೇ ತಮಗೆ ಗೊತ್ತಾಯಿತು ಎಂದು ಅವರ ತಾಯಿ ತಮಗೆ ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ಗನ್ ಸಹಿತ ಥಾರ್ ಜೀಪ್​​ನಲ್ಲಿ ಆರೋಪಿ ಪಿಯೂಷ್ ಸ್ಥಳದಿಂದ ಪರಾರಿಯಾಗಿದ್ದ. ಆತನ ಕಾರು ಸಂಖ್ಯೆ ಮತ್ತು ಮೊಬೈಲ್ ಫೋನ್ ಮೂಲಕ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. ಹುಡುಗಿಯ ವಿಚಾರದಲ್ಲಿ ಆರೋಪಿ ಪಿಯೂಷ್ ಖಿನ್ನತೆಗೆ ಒಳಗಾಗಿದ್ದ ಎಂಬ ಮಾಹಿತಿ ಕೂಡ ಇದೆ. ತಾಯಿಯಿಂದ ಕೊಲೆಯ ಮಾಹಿತಿ ಪಡೆಯಲಾಗಿದೆ. ಎಫ್‌ಎಸ್‌ಎಲ್‌ ತಂಡ ಸ್ಥಳಕ್ಕಾಗಮಿಸಿ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆರೋಪಿ ಬಳಿಯಿದ್ದ ಪಿಸ್ತೂಲ್​ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯಕ್ಕೆ ಕೊಲೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ. ಈ ಸಂಬಂಧ ವಿಧಾನಸಭಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸಿದ್ದಾರೆ ಎಂದು ಗ್ರಾಮಾಂತರ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ನೀರಜ್ ಚಂದ್ರಾಕರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಡ್ರಮ್​ನಲ್ಲಿ ವೃದ್ಧೆ ಶವ ಪತ್ತೆ; ಕೈ - ಕಾಲು ಕತ್ತರಿಸಿ ಬರ್ಬರ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.