ETV Bharat / bharat

ಕರ್ನಾಟಕ, ಒಡಿಶಾ, ಆಂಧ್ರದಲ್ಲಿ ಶಾಖದ ಅಲೆ, ಈಶಾನ್ಯದಲ್ಲಿ ಮಳೆ: ಐಎಂಡಿ ಮುನ್ಸೂಚನೆ - IMD Wednesday morning bulletin

author img

By ETV Bharat Karnataka Team

Published : Apr 3, 2024, 11:48 AM IST

ಬುಧವಾರ ಬೆಳಗ್ಗೆ ಹವಾಮಾನದ ಮುನ್ಸೂಚನೆ ಮುಖ್ಯಾಂಶಗಳನ್ನು ಬಿಡುಗಡೆ ಮಾಡಿರುವ ಐಎಂಡಿ, ಉತ್ತರ ಕರ್ನಾಟಕದ ಒಳನಾಡು ಪ್ರದೇಶದಲ್ಲಿ ಮುಂದಿನ ಶಾಖದ ಅಲೆಗಳು ಬೀಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

imd-wednesday-morning-bulletin-for-heatwave-predicted-in-karnataka-and-other-parts-of-india

ನವದೆಹಲಿ: ದೇಶದಲ್ಲಿ ಈಗಾಗಲೇ ಬೇಸಿಗೆಯ ಬಿಸಿಲು ಆವರಿಸಿದ್ದು, ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತದ ಹಲವು ಭಾಗಗಳಲ್ಲಿ ಮುಂದಿನ ಎರಡು ದಿನದಲ್ಲಿ ಗರಿಷ್ಠ 2 ರಿಂದ 3 ಡಿಗ್ರಿ ಸೆಲ್ಸಿಯಸ್​ ತಾಪಮಾನ ಹೆಚ್ಚಳವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಐಎಂಡಿಯ ಬುಧವಾರದ ಬೆಳಗಿನ ಮುಖ್ಯಾಂಶದ ವರದಿ ಅನುಸಾರ, 2024ರ ಏಪ್ರಿಲ್​ 5ರಂದು ಪಶ್ಚಿಮದ ಹಿಮಾಲಯ ಪ್ರದೇಶದಲ್ಲಿ ಹೊಸ ಅಡಚಣೆಯೊಂದು ಎದುರಾಗಲಿದೆ. ಇದರಿಂದ ಮುಂದಿನ ಐದು ದಿನ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಮಧ್ಯಮ ಪ್ರಮಾಣದ ಮಳೆ ಅಥವಾ ಹಿಮಪಾತವಾಗಲಿದೆ ಎಂದು ಮುನ್ಸೂಚನೆ ಇದೆ. ಇನ್ನು ವಾಯುವ್ಯ ಭಾರತದ ಬಯಲು ಪ್ರದೇಶದಲ್ಲೂ ಕೂಡ ಏಪ್ರಿಲ್​ 3 ರಿಂದ 5ರವರೆಗೆ ಸಾಧಾರಣಾ ತುಂತುರು ಮಳೆ ಆಗುವ ಸಾಧ್ಯತೆ ಇದೆ.

ಮುಂದಿನ ಏಳು ದಿನದಲ್ಲಿ ಜಾರ್ಖಂಡ್​, ಒಡಿಶಾ, ಗೋವಾ, ಮರಾಠವಾಡ, ಮಧ್ಯಪ್ರದೇಶದ ಕೆಲವು ಭಾಗ, ಛತ್ತೀಸ್​ಗಢ, ಕರ್ನಾಟಕ, ಕೇರಳ, ತೆಲಂಗಾಣದಲ್ಲಿ ಕೂಡ ಏಪ್ರಿ 6-9ರವರೆಗೆ ಮಳೆ ಆಗುವ ನಿರೀಕ್ಷೆ ಇದೆ. ಈಶಾನ್ಯ ಪ್ರದೇಶದಲ್ಲಿ ಕೂಡ ಏಪ್ರಿಲ್​ 3 -5ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್​ 6- 9ರವರೆಗೆ ಅಸ್ಸಾಂ, ನಾಗಾಲ್ಯಾಂಡ್​, ಮೇಘಾಲಯ, ಸಿಕ್ಕಿಂ ಮತ್ತು ತ್ರಿಪುರಾದಲ್ಲಿ ಕೂಡ ಮುಂದಿನ ಏಳು ದಿನ ಚದುರಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಹೀಗಿರಲಿದೆ ಹವಾಮಾನ: ಮಧ್ಯಪ್ರದೇಶ, ಮರಾಠವಾಡ, ಸೌರಾಷ್ಟ್ರ, ಕೊಂಕಣ್​​ ಮತ್ತು ಗೋವಾ, ತೆಲಂಗಾಣ ಮತ್ತು ಕರ್ನಾಟಕದ ಕೆಲವು ಭಾಗದಲ್ಲಿ ಮುಂದಿನ ಎರಡು ದಿನ ಒಣ ಹವೆ ಮುಂದುವರೆಯಲಿದ್ದು, ಏಪ್ರಿಲ್​ 6 - 9ರವರೆಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ.

ಇದೇ ವೇಳೆ, ಗಂಗಾನದಿ ಬಯಲು ಪ್ರದೇಶ ಪಶ್ಚಿಮ ಬಂಗಾಳ, ಒಡಿಶಾ, ಮತ್ತು ಕರ್ನಾಟದ ಉತ್ತರ ಒಳನಾಡು, ಜಾರ್ಖಂಡ್​, ಆಂಧ್ರಪ್ರದೇಶದಲ್ಲಿ ಕೆಲವು ಭಾಗದಲ್ಲಿ ಮುಂದಿನ ಏಳು ದಿನ ಶಾಖದ ಅಲೆಗಳು ಬೀಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಶಾಖದ ಅಲೆ ಹವಾಮಾನವೂ ಏಪ್ರಿಲ್​ 3-4 ರವರೆಗೆ ಉತ್ತರ ಒಳನಾಡು ಕರ್ನಾಟಕ, ಒಡಿಶಾ, ಗಂಗಾನದಿ ಬಯಲು ಪ್ರದೇಶದ ಪಶ್ಚಿಮ ಬಂಗಾಳದಲ್ಲಿ ಕಾಣುವ ಸಾಧ್ಯತೆ ಇದೆ. ಜಾರ್ಖಂಡ್​, ರಾಯಲಸೀಮೆ, ಆಂಧ್ರ ಪ್ರದೇಶದ ಕರಾವಳಿಯಲ್ಲಿ ಏಪ್ರಿಲ್​ 4-6ರವರೆಗೆ ಶಾಖದ ಅಲೆ ಇರಲಿದೆ ಎಂದು ಐಎಂಡಿ ಬೆಳಗಿನ ಮುಖ್ಯಾಂಶದಲ್ಲಿ ತಿಳಿಸಿದೆ.

ಏಪ್ರಿಲ್​ 3ರಿಂದ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು ಶೇಕಡಾ 95ರಷ್ಟು ಮೀರುವ ಸಾಧ್ಯತೆಯಿದೆ. ಇದೇ ರೀತಿಯ ಪರಿಸ್ಥಿತಿಗಳು ಮುಂದಿನ 5 ದಿನಗಳಲ್ಲಿ ಮೇಲಿನ ಪ್ರದೇಶಗಳಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಈ ಹವಾಮಾನವೂ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರದ ಉಳಿದ ಭಾಗಗಳಲ್ಲಿ ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸಬಹುದು.

ಈ ವರ್ಷ ದೇಶವೂ ವಿಪರೀತ ಹವಮಾನ ಪರಿಸ್ಥಿತಿಯನ್ನು ಎದುರಿಸಲಿದೆ. ಏಪ್ರಿಲ್​ ಅಂತ್ಯದಿಂದ ಸಾಮಾನ್ಯ ಚುನಾವಣೆ ಮುಗಿಯುವವರೆಗೆ ಬಿಸಿಲಿನ ಪರಿಸ್ಥಿತಿ ಹೆಚ್ಚಿರಲಿದೆ ಎಂದು ಸೋಮವಾರ ಐಎಂಡಿ ತಿಳಿಸಿದೆ. ಈ ಬಾರಿ ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನದ ಕುರಿತು 2024 ರ ಲೋಕಸಭಾ ಚುನಾವಣೆ ಘೋಷಣೆಗೆ ಮುಂಚಿತವಾಗಿ ಹವಾಮಾನ ಸಂಸ್ಥೆಯು ಬಿಸಿಗಾಳಿ ಶಾಖದ ಅಲೆಯ ಕುರಿತು ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ದೇಶದಲ್ಲಿ ಬಿರು ಬೇಸಿಗೆ; ಶಾಖದ ಅಲೆಯಿಂದ ಸುರಕ್ಷಿತವಾಗಿರಲು ಈ ಸಲಹೆಗಳನ್ನು ಪಾಲಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.