ETV Bharat / bharat

ಬಿಜೆಪಿ 400ರ ಗುರಿ ದಾಟಿದರೆ I.N.D.I.A ಮುನ್ನಡೆಸಿದ ಪಕ್ಷವೇ ಅದಕ್ಕೆ ಹೊಣೆಗಾರ: ಗುಲಾಂ ನಬಿ ಆಜಾದ್

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನ ಗಳಿಸಲು ಸಫಲವಾದರೆ ಅದಕ್ಕೆ ಐಎನ್​ಡಿಐಎ ಮೈತ್ರಿಕೂಟ ಮುನ್ನಡೆಸಲು ವಿಫಲವಾದ ಪಕ್ಷವೇ ಹೊಣೆಯಾಗಲಿದೆ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.

If BJP crosses 400-mark in LS polls, those who failed to lead INDIA bloc will be responsible: Azad

author img

By PTI

Published : Feb 11, 2024, 3:50 PM IST

ಜಮ್ಮು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದರೆ, ಅದಕ್ಕೆ ಪ್ರತಿಪಕ್ಷಗಳ ಐಎನ್​ಡಿಐಎ (I.N.D.I.A) ಮೈತ್ರಿಕೂಟವನ್ನು ಮುನ್ನಡೆಸಲು ವಿಫಲವಾದ ಪಕ್ಷವೇ ಹೊಣೆಯಾಗಲಿದೆ ಎಂದು ಡಿಪಿಎಪಿ ಅಧ್ಯಕ್ಷ ಗುಲಾಂ ನಬಿ ಆಜಾದ್ ಶನಿವಾರ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ವಿರುದ್ಧ ಅವರು ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಪ್ರಧಾನ ಮಂತ್ರಿಗಳಾದ ಪಿ.ವಿ.ನರಸಿಂಹ ರಾವ್ ಮತ್ತು ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡಿದ್ದಕ್ಕಾಗಿ ಮಾಜಿ ಕಾಂಗ್ರೆಸ್ ನಾಯಕ ಆಜಾದ್ ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿದರು. ಪಿ.ವಿ.ನರಸಿಂಹ ರಾವ್ ಮತ್ತು ಚೌಧರಿ ಚರಣ್ ಸಿಂಗ್ ಅವರು ದೇಶಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಈ ಗೌರವಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದರು.

ಜಮ್ಮುವಿನ ಹೊರವಲಯದಲ್ಲಿರುವ ಅಂತರರಾಷ್ಟ್ರೀಯ ಗಡಿಯ ಬಳಿಯ ಪ್ರಾಗ್ವಾಲ್ ಪ್ರದೇಶದ ಗರ್ಖಾಲ್​ನಲ್ಲಿ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಜಾದ್, "ಬಿಜೆಪಿ 400ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲಿದೆಯಾ ಎಂಬುದನ್ನು ಹೇಳಬಲ್ಲ ಜ್ಯೋತಿಷಿ ನಾನಲ್ಲ. ಆದರೆ ಹಾಗಾದಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಲು ವಿಫಲರಾದವರೇ ಅದಕ್ಕೆ ಜವಾಬ್ದಾರರಾಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ." ಎಂದರು.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ದಾಟುವ ಸಾಧ್ಯತೆಯ ಬಗ್ಗೆ ಮತ್ತು ಐಎನ್​​ಡಿಐಎ ಮೈತ್ರಿಕೂಟದ ಸ್ಥಿತಿಗತಿಯ ಬಗ್ಗೆ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಕಳವಳ ವ್ಯಕ್ತಪಡಿಸಿದ ಬಗ್ಗೆ ಅವರು ಪ್ರತಿಕ್ರಿಯಿಸಿದರು. "ಒಮರ್ ಅಬ್ದುಲ್ಲಾ ಅವರು ಎ.ಬಿ. ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರು ತಮ್ಮ ಹಳೆಯ ನಿಷ್ಠೆಯನ್ನು ನೆನಪಿಸಿಕೊಂಡಿರಬಹುದು" ಎಂದು ಆಜಾದ್ ಹೇಳಿದರು.

ತಾವು ಬಿಜೆಪಿ ಅಥವಾ ಕಾಂಗ್ರೆಸ್ ಯಾವುದೇ ಪಕ್ಷಕ್ಕೂ ಹತ್ತಿರವಾಗಿಲ್ಲ ಎಂದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಆಜಾದ್, ಕಾಂಗ್ರೆಸ್ ತನಗೆ ಬೇಕಾದುದನ್ನು ಹೇಳಲಿ, ಬಿಜೆಪಿ ತಪ್ಪು ಮಾಡಿದರೆ ಅದನ್ನು ನಾನು ಮೊದಲಿಗೆ ಟೀಕಿಸುತ್ತೇನೆ ಮತ್ತು ಅದೇ ರೀತಿ ಕಾಂಗ್ರೆಸ್ ಉತ್ತಮ ಕೆಲಸ ಮಾಡಿದರೆ ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ಆಜಾದ್ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ನಂತರ 2022 ರ ಸೆಪ್ಟೆಂಬರ್​ನಲ್ಲಿ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಸ್ಥಾಪಿಸಿದ್ದಾರೆ.

"ಪಿ.ವಿ. ನರಸಿಂಹರಾವ್ ಅವರ ಸಂಪುಟದಲ್ಲಿ ನಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ, ರಾವ್ ಅವರು ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದರು. ಸಿಂಗ್ ಅವರ ಉದಾರೀಕರಣ ನೀತಿಗಳು ಹೊರಗಿನ ಪ್ರಪಂಚದ ವೇಗಕ್ಕೆ ಅನುಗುಣವಾಗಿ ಭಾರತದ ಆರ್ಥಿಕತೆಯಲ್ಲಿ ಕ್ರಾಂತಿಯನ್ನುಂಟು ಮಾಡಿದವು. ವಾಯುಯಾನ ಉದ್ಯಮದಲ್ಲಿನ ಏಕಸ್ವಾಮ್ಯವನ್ನು ಕೊನೆಗೊಳಿಸಲು ನಾನು ಉದಾರೀಕರಣ ನೀತಿಯನ್ನು ಪ್ರತಿಪಾದಿಸಿದ್ದೆ. ರಾವ್ ಸರ್ಕಾರ ಪರಿಚಯಿಸಿದ ಉದಾರೀಕರಣ ನೀತಿಯನ್ನು ಮೋದಿ ಸರ್ಕಾರವೂ ಮುಂದುವರಿಸಿಕೊಂಡು ಹೋಗುತ್ತಿದೆ." ಎಂದು ಆಜಾದ್ ತಿಳಿಸಿದರು.

ಇದನ್ನೂ ಓದಿ : ನಿವೃತ್ತ ಉದ್ಯೋಗಿಗಳಿಗೂ ಆರೋಗ್ಯ ವಿಮೆ ವಿಸ್ತರಣೆ: ಇಎಸ್​ಐಸಿ ಮಹತ್ವದ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.