ETV Bharat / bharat

ಜಮ್ಮು - ಕಾಶ್ಮೀರ ಹೆದ್ದಾರಿಯಲ್ಲಿ ಐಇಡಿ ಪತ್ತೆ; ತಪ್ಪಿದ ಭಾರೀ ಅನಾಹುತ - SRINAGAR BARAMULLA HIGHWAY

ಪೊಲೀಸ್​ ಮತ್ತು ಭದ್ರತಾ ಪಡೆಗಳು ಜಂಟಿ ಗಸ್ತು ವೇಳೆ ಅನುಮಾನಾಸ್ಪದ ಬ್ಯಾಗ್​ವೊಂದು ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿನ ಲಂಗೇಟ್​ ಹೆದ್ದಾರಿಯ ಪಕ್ಕದಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಅದರಲ್ಲಿ ಐಇಡಿ ಇರುವುದು ಪತ್ತೆಯಾಗಿದೆ.

ied-found-on-j-k-highway
ಭದ್ರತಾ ಪಡೆ (ANI)
author img

By PTI

Published : Dec 11, 2024, 1:37 PM IST

ಶ್ರೀನಗರ: ಕಾಶ್ಮೀರದ ಹಂದ್ವಾರ- ಬಾರಾಮುಲ್ಲಾ ಹೆದ್ದಾರಿಯಲ್ಲಿ ಶಂಕಿತ ಸುಧಾರಿತ ಸ್ಫೋಟಕ ಸ್ಫೋಟಕವನ್ನು (ಐಇಡಿ) ಪತ್ತೆ ಮಾಡಿದ್ದಾರೆ. ಬಳಿಕ ಅದನ್ನು ಭದ್ರತಾ ಪಡೆಯ ಸೈನಿಕರು ನಾಶಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್​ ಮತ್ತು ಭದ್ರತಾ ಪಡೆಗಳು ಜಂಟಿ ಗಸ್ತು ವೇಳೆ ಅನುಮಾನಾಸ್ಪದ ಬ್ಯಾಗ್​ವೊಂದು ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿನ ಲಂಗೇಟ್​ ಹೆದ್ದಾರಿಯ ಪಕ್ಕದಲ್ಲಿ ಬಿದ್ದಿರುವುದನ್ನು ಗಮನಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಬ್​ ನಿಷ್ಕ್ರಿಯ ದಳದ ಅಧಿಕಾರಿಗಳು ತಕ್ಷಣಕ್ಕೆ ಆಗಮಿಸಿ, ಅನುಮಾನಾಸ್ಪದ ಬ್ಯಾಗ್​ ಅನ್ನು ಪ್ರತ್ಯೇಕ ಸ್ಥಳಕ್ಕೆ ತೆಗೆದುಕೊಂಡು ಹೋದರು. ಈ ವೇಳೆ ಐಇಡಿ ಪತ್ತೆಯಾಗಿದ್ದು, ಅದನ್ನು ನಿಷ್ಕ್ರಿಯಗೊಳಿಸಲಾಯಿತು. ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇದನ್ನೂ ಓದಿ: ಮಹಿಳಾ ಸಹೋದ್ಯೋಗಿ​ ಮೇಲೆ ಗುಂಡಿಕ್ಕಿ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್​ಟೇಬಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.