ETV Bharat / bharat

'ಪ್ರಧಾನಿ ಹುದ್ದೆಯ ಆಫರ್​ ಬಂದಿತ್ತು, ನಿರಾಕರಿಸಿದೆ': ಸಚಿವ ಗಡ್ಕರಿ ಅಚ್ಚರಿಯ ಹೇಳಿಕೆ - Nitin Gadkari surprise statement

author img

By ETV Bharat Karnataka Team

Published : Sep 15, 2024, 4:22 PM IST

2024 ರ ಲೋಕಸಭಾ ಚುನಾವಣೆಗೆ ಮೊದಲು ನನಗೆ ಪ್ರಧಾನಿ ಹುದ್ದೆಯ ಆಫರ್​ ನೀಡಲಾಗಿತ್ತು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ (IANS)

ನಾಗ್ಪುರ (ಮಹಾರಾಷ್ಟ್ರ) : ನನಗೆ ಪ್ರಧಾನಿ ಹುದ್ದೆಯ ಆಫರ್ ನೀಡಲಾಗಿತ್ತು, ಆದರೆ ನಾನದನ್ನು ನಿರಾಕರಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶನಿವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

"2024 ರ ಲೋಕಸಭಾ ಚುನಾವಣೆಗೆ ಮೊದಲು ವಿರೋಧ ಪಕ್ಷದ ನಾಯಕರೊಬ್ಬರು ನನ್ನನ್ನು ಸಂಪರ್ಕಿಸಿ ನನ್ನನ್ನು ಪ್ರಧಾನಿಯನ್ನಾಗಿ ಮಾಡಲು ಬೆಂಬಲಿಸುವುದಾಗಿ ಹೇಳಿದರು. ಆದರೆ ನಾನು ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿಲ್ಲ ಎಂದು ಹೇಳಿ ಪ್ರಸ್ತಾಪವನ್ನು ನಿರಾಕರಿಸಿದ್ದೆ" ಕೇಂದ್ರ ಗಡ್ಕರಿ ಶನಿವಾರ ಹೇಳಿದ್ದಾರೆ.

"ಒಂದು ಆಶ್ಚರ್ಯಕರ ಘಟನೆ ನಡೆದಿತ್ತು. ಈ ವಿಷಯದಲ್ಲಿ ಯಾರದೇ ಹೆಸರನ್ನು ನಾನು ಹೇಳಲಾರೆ. ನನ್ನನ್ನು ಸಂಪರ್ಕಿಸಿದ ವ್ಯಕ್ತಿಯು, ನೀವು ಪ್ರಧಾನಿಯಾಗುವುದಾದರೆ ನಾವು ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು" ಎಂದು ಗಡ್ಕರಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದರು.

"ಆದರೆ, ನೀವು ನನ್ನನ್ನು ಏಕೆ ಬೆಂಬಲಿಸಲು ಬಯಸುತ್ತಿರುವಿರಿ ಮತ್ತು ನಾನು ನಿಮ್ಮ ಬೆಂಬಲವನ್ನು ಏಕೆ ತೆಗೆದುಕೊಳ್ಳಬೇಕು ಎಂದು ಕೇಳಿದೆ. ಪ್ರಧಾನಿಯಾಗುವುದು ನನ್ನ ಜೀವನದ ಗುರಿಯಲ್ಲ. ನಾನು ನನ್ನ ಸಿದ್ಧಾಂತಗಳು ಮತ್ತು ಸಂಘಟನೆಗೆ ನಿಷ್ಠನಾಗಿದ್ದೇನೆ. ಹೀಗಾಗಿ ಯಾವುದೋ ಹುದ್ದೆಗಾಗಿ ನನ್ನ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಳ್ಳಲಾರೆ ಎಂದು ಹೇಳಿದ್ದೆ" ಎಂದು ಅವರು ಹೇಳಿದರು. ತಮ್ಮ ಭಾಷಣದಲ್ಲಿ, ಅವರು ಪತ್ರಿಕೋದ್ಯಮ ಮತ್ತು ರಾಜಕೀಯ ಎರಡರಲ್ಲೂ ನೈತಿಕತೆಯ ಮಹತ್ವವನ್ನು ಒತ್ತಿಹೇಳಿದರು.

2024 ರ ಲೋಕಸಭಾ ಚುನಾವಣೆಯಲ್ಲಿ ಗಡ್ಕರಿ ನಾಗ್ಪುರದಿಂದ ತಮ್ಮ ಹತ್ತಿರದ ಕಾಂಗ್ರೆಸ್ ಪ್ರತಿಸ್ಪರ್ಧಿಯನ್ನು 1,37,603 ಮತಗಳ ಅಂತರದಿಂದ ಸೋಲಿಸುವ ಮೂಲಕ ಗೆದ್ದರು. ಆದಾಗ್ಯೂ, ಈ ಸಾರ್ವತ್ರಿಕ ಚುನಾವಣೆಯಲ್ಲಿ ಗಡ್ಕರಿ ಅವರ ಗೆಲುವಿನ ಅಂತರವು 78,397 ಕ್ಕೆ ಇಳಿದಿದೆ. 2019ರಲ್ಲಿ ಅವರು ಕಾಂಗ್ರೆಸ್ ನ ನಾನಾ ಪಟೋಲೆ ಅವರನ್ನು 2,16,000 ಮತಗಳ ಅಂತರದಿಂದ ಸೋಲಿಸಿದ್ದರು.

ಕೇಂದ್ರ ಸಚಿವರಾಗಿ ತಮ್ಮ ಮೊದಲ ಎರಡು ಅವಧಿಗಳಲ್ಲಿ ದೇಶದಲ್ಲಿ ರಸ್ತೆ ಸಂಪರ್ಕವನ್ನು ವಿಸ್ತರಿಸುವಲ್ಲಿ ಅದ್ಭುತ ಕೆಲಸ ಮಾಡಿದ ನಂತರ ಅವರು ಮೂರನೇ ನರೇಂದ್ರ ಮೋದಿ ಸರ್ಕಾರದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯ ಸಚಿವರಾಗಿ ಮತ್ತೆ ಮುಂದುವರೆದಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಪ್ರವೇಶಿಸಿದ ಗಡ್ಕರಿ ನಂತರ ಬಿಜೆಪಿಯ ಯುವ ವಿಭಾಗವಾದ ಜನತಾ ಯುವ ಮೋರ್ಚಾಕ್ಕೆ ಸೇರಿದರು. 2009 ರವರೆಗೆ ಮಹಾರಾಷ್ಟ್ರ ಬಿಜೆಪಿಯ ನೇತೃತ್ವ ವಹಿಸಿದ್ದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗುವ ಮೂಲಕ ಪಕ್ಷದ ಅತ್ಯಂತ ಕಿರಿಯ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ : ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ಮದ್ಯ ನಿಷೇಧ ತಕ್ಷಣ ಕೊನೆಗಾಣಿಸುವೆ: ಪ್ರಶಾಂತ್ ಕಿಶೋರ್ - BIHAR LIQUOR BAN

ETV Bharat Logo

Copyright © 2024 Ushodaya Enterprises Pvt. Ltd., All Rights Reserved.