ETV Bharat / bharat

ಪ್ರೇಮಿಗಾಗಿ ಲಂಡನ್​ನಲ್ಲಿನ ಗಂಡ - ಮಕ್ಕಳನ್ನು ತೊರೆದು ಬಂದ ಮಹಿಳೆ: ಗೋವಾದಲ್ಲಿ ಇಬ್ಬರೂ ಪೊಲೀಸ್​​ ವಶಕ್ಕೆ - HYDERABAD WOMAN LEAVES FAMILY

ಹೈದರಾಬಾದ್​ನ ಪ್ರಿಯತಮನಿಗಾಗಿ 17 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಲು ಮುಂದಾದ ಮಹಿಳೆ ವಿರುದ್ದ, ಆಕೆಯ ಗಂಡ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೂರು ದಾಖಲಿಸಿದ್ದಾರೆ.

hyderabad-woman-leaves-family-in-london-to-be-with-boyfriend
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Oct 9, 2024, 11:49 AM IST

ಹೈದರಾಬಾದ್​: ಪ್ರೀತಿ ಕುರುಡು ಎನ್ನುವ ಮಾತು ಅನೇಕರ ವಿಷಯದಲ್ಲಿ ನಿಜವಾಗುತ್ತದೆ. ಲಂಡನ್​ನಲ್ಲಿ ಸುಂದರ ಸಂಸಾರದೊಂದಿಗೆ ಜೀವನ ಮಾಡುತ್ತಿದ್ದ ಮಹಿಳೆಯೊಬ್ಬಳು ಇದೀಗ ಪ್ರಿಯತಮನಿಗಾಗಿ ಅವರನ್ನು ತೊರೆದು ಭಾರತಕ್ಕೆ ಬಂದಿರುವ ಘಟನೆ ವರದಿಯಾಗಿದೆ. ಹೈದರಾಬಾದ್​ನ ಪ್ರಿಯತಮನಿಗಾಗಿ 17 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಲು ಮುಂದಾದ ಮಹಿಳೆ ವಿರುದ್ದ ಗಂಡ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಮಹಿಳೆಯನ್ನು ಗೋವಾ ಪೊಲೀಸರು ಬಂಧಿಸಿ, ಲಂಡನ್​ಗೆ ವಾಪಸ್​​ ಕಳುಹಿಸಿದ್ದಾರೆ.

ಏನಿದು ಘಟನೆ?: ಮೂಲತಃ ಹೈದರಾಬಾದ್​ನ ಅಲ್ವಾಲ್​ ಮೂಲದ ಮಹಿಳೆ 17 ವರ್ಷದ ಹಿಂದೆ ಮದುವೆಯಾಗಿ ಲಂಡನ್​ನಲ್ಲಿ ಗಂಡ ಮತ್ತು ಮಕ್ಕಳೊಂದಿಗೆ ಸುಂದರವಾದ ಜೀವನ ನಡೆಸುತ್ತಿದ್ದರು. ಈ ಸುಂದರ ಜೀವನಕ್ಕೆ ಸಮಸ್ಯೆ ಎದುರಾಗಿದೆ. ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ಕಳೆದ ಫೆಬ್ರವರಿಯಲ್ಲಿ ಮಹಿಳೆ ಹೈದರಾಬಾದ್​​ಗೆ ಆಗಮಿಸಿದ್ದರು. ಈವೇಳೆ ಆಕೆ ಆನ್​ಲೈನ್​ ಮೂಲಕ ಟಾಕ್ಸಿ ಬಾಡಿಗೆ ಪಡೆದಿದ್ದರು. ಈ ಟಾಕ್ಸಿ ಚಾಲಕ ಶಿವ ಜೊತೆಗೆ ಸಲುಗೆ ಬೆಳೆದು ನಂಬರ್​ ವಿನಿಮಯ ಮಾಡಿಕೊಂಡಿದ್ದರು. ಈ ಪರಿಚಯ ನಿತ್ಯ ಮಾತನಾಡುವ ಹಂತಕ್ಕೆ ಹೋಯಿತು. ಮುಂದೆ ಈ ಮಾತುಕತೆ ಮಹಿಳೆಗೆ ಚಾಲಕನ ಮೇಲೆ ಮೋಹಕ್ಕೂ ಕಾರಣವಾಗಿದೆ.

ಈ ನಡುವೆ ಕಳೆದ ತಿಂಗಳು ಸೆಪ್ಟೆಂಬರ್​ 16ರಂದು ಮಹಿಳೆಯ ಅತ್ತೆ ಅಂದರೆ ಗಂಡನ ತಾಯಿ ಮೃತಪಟ್ಟಿದ್ದರು. ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ಗಂಡ ಹೈದರಾಬಾದ್​ಗೆ ತೆರಳಿದಾಗ ಈಕೆ ಇಬ್ಬರು ಮಕ್ಕಳನ್ನು ಅಲ್ಲಿಯೇ ಬಿಟ್ಟು, ರಹಸ್ಯವಾಗಿ ಹೈದರಾಬಾದ್​ಗೆ ಆಗಮಿಸಿ, ಸೆಪ್ಟೆಂಬರ್​ 30ರಂದು ಶಿವನ ಹುಟ್ಟು ಹಬ್ಬ ಆಚರಿಸಿದ್ದರಂತೆ.

ಅಪಹರಣದ ಕಥೆ ಕಟ್ಟಿದ ಪತ್ನಿ: ತಾಯಿ ಮರಳದೇ ಇದಿದ್ದನ್ನು ಗಮನಿಸಿದ ಮಕ್ಕಳು ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಗಂಡ ಕೂಡ ಆಕೆಗೆ ಕರೆ ಮಾಡಿದಾಗ ಆಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲವಂತೆ. ಇದರಿಂದ ಗಾಬರಿಗೊಂಡ ಗಂಡ ವಿಚಾರಿಸಿದಾಗ ಆಕೆ ಹೈದರಾಬಾದ್​​ಗೆ ತೆರಳಿರುವುದು ಗೊತ್ತಾಗಿದೆ. ಆಕೆಯನ್ನು ಸಂಪರ್ಕಿಸಲು ಅನೇಕ ಸಲ ವಿಫಲ ಯತ್ನ ನಡೆಸಿದ್ದಾರೆ. ಕಡೆಗೆ ಒಂದು ದಿನ ಮಹಿಳೆಯೇ ಗಂಡನಿಗೆ ಕರೆ ಮಾಡಿ, ನಾನು ಅಪಹರಣಕ್ಕೆ ಒಳಗಾಗಿದ್ದೆ. ಶಂಶಬಾದ್​ನ ಖಾಸಗಿ ಹಾಸ್ಟೆಲ್​ನಲ್ಲಿ ನನ್ನನ್ನು ಇರಿಸಲಾಗಿತ್ತು ಎಂದು ಕಥೆ ಕಟ್ಟಿದ್ದಾಳೆ.

ಈ ವೇಳೆ ಚಿಂತೆಗೆ ಒಳಗಾದ ಗಂಡ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಎಚ್ಚರಿಸಿದ್ದಾರೆ. ಮಹಿಳೆ ಕರೆ ಮಾಡಿದ ಫೋನ್​ ಟವರ್​ ಡೇಟಾ ಮೇರೆಗೆ ಆಕೆಯ ಸ್ಥಳವನ್ನು ಪೊಲೀಸರು ಪತ್ತೆ ಮಾಡಿದಾಗ ಆಕೆ ಗೋವಾದಲ್ಲಿರುವುದು ತಿಳಿದು ಬಂದಿದೆ. ತಕ್ಷಣಕ್ಕೆ ಅಲ್ಲಿಗೆ ಹೋದ ಪೊಲೀಸರು ಆಕೆಯನ್ನು ಬಂಧಿಸಿ, ಲಂಡನ್​ಗೆ ವಾಪಸ್​ ಆಗಲು ವ್ಯವಸ್ಥೆ ಮಾಡಿದ್ದಾರೆ.

ಟಾಕ್ಸಿ ಚಾಲಕ ಶಿವನ ವಿರುದ್ಧ ಕೂಡ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ. ಇದೀಗ ಮಹಿಳೆಯ ನಿಜಾಂಶ ಬಯಲಾಗಿದ್ದು, ಎರಡು ಕುಟುಂಬ ಸದಸ್ಯರು ಆಘಾತ ವ್ಯಕ್ತಪಡಿಸಿದ್ದು, ಇದೀಗ ಪೊಲೀಸರು ಕಾನೂನು ಪ್ರಕ್ರಿಯೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಭಾರತದಲ್ಲೂ ತಲೆ ಎತ್ತಿದೆ ಬುರ್ಜ್​ ಖಲೀಫಾ: ಈ ಮಂಟಪದ ಬಾಗಿಲು ತೆರೆಯುವುದು ಯಾವಾಗ ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.