ETV Bharat / bharat

ಪ್ರಾಣಕ್ಕೆ ಉರುಳಾದ ರೀಲ್ಸ್​: ಹಳಿಯ ಮೇಲೆ ವಿಡಿಯೋ ಮಾಡುವಾಗ ರೈಲು ಡಿಕ್ಕಿಯಾಗಿ ಗಂಡ - ಹೆಂಡತಿ -ಮಗು ಸಾವು - FAMILY DIES WHILE MAKING REEL

author img

By ETV Bharat Karnataka Team

Published : Sep 11, 2024, 4:22 PM IST

ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್​ ಮಾಡಿ ಫೇಮಸ್​ ಆಗುವ ಹುಚ್ಚು ಪ್ರಾಣಕ್ಕೆ ಸಂಚು ತಂದ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಅಂಥದ್ದೇ ಒಂದು ದುರಂತ ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ಬುಧವಾರ ಬೆಳಕಿಗೆ ಬಂದಿದೆ.

ಪ್ರಾಣಕ್ಕೆ ಹುರುಳಾದ ರೀಲ್ಸ್
ಪ್ರಾಣಕ್ಕೆ ಹುರುಳಾದ ರೀಲ್ಸ್ (ETV Bharat)

ಲಖೀಂಪುರ ಖೇರಿ (ಉತ್ತರಪ್ರದೇಶ): ಕೆಲವರಿಗೆ ರೀಲ್ಸ್​​ ಮಾಡುವುದೇ ಗೀಳಾಗಿರುತ್ತದೆ. ಫೇಮಸ್​​ ಆಗಲು ಚಿಕ್ಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಅಪಾಯಕಾರಿ ಸ್ಥಳಗಳಲ್ಲಿ ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಅದೆಷ್ಟೋ ಪ್ರಕರಣಗಳು ನಡೆದಿವೆ. ಅಂಥದ್ದೇ ಒಂದು ಕೇಸ್​​ ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ಇಂದು (ಬುಧವಾರ) ನಡೆದಿದೆ.

ಹಳಿಯ ಮೇಲೆ ಕುಟುಂಬವೊಂದು ರೀಲ್ಸ್ ಮಾಡುತ್ತಿದ್ದಾಗ ರೈಲು ಡಿಕ್ಕಿಯಾಗಿ ಪತಿ, ಪತ್ನಿ ಹಾಗೂ 3 ವರ್ಷದ ಮಗು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ದುರಂತ ಬುಧವಾರ ಬೆಳಗ್ಗೆ 11 ಗಂಟೆಗೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಏನಾಯ್ತು?: ಇಲ್ಲಿನ ಲಖೀಂಪುರ ಖೇರಿಯ ಆಯಿಲ್ ರೈಲ್ವೇ ಕ್ರಾಸಿಂಗ್‌ನಲ್ಲಿ ದಂಪತಿ ಅವರ 3 ವರ್ಷದ ಮಗುವಿನ ಜೊತೆ ರೀಲ್ಸ್​ ಮಾಡುತ್ತಿದ್ದರು. ಈ ವೇಳೆ ರಭಸವಾಗಿ ಬಂದ ರೈಲು ಮೂವರನ್ನು ಡಿಕ್ಕಿ ಹೊಡೆದಿದೆ. ಇದರಿಂದ ಮೂವರ ದೇಹಗಳು ಛಿದ್ರವಾಗಿವೆ. ಇದನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಒಂದೇ ಕುಟುಂಬದ ಮೂವರು ಬಹಳ ಹೊತ್ತಿನಿಂದ ರೈಲು ಹಳಿಯ ಮೇಲೆ ರೀಲ್ಸ್​ ಮಾಡುತ್ತಿದ್ದರು. ರೈಲು ಬರುವುದನ್ನು ಗಮನಿಸಿದ ಕಾರಣ, ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಮೃತರು ಸೀತಾಪುರದ ಲಾಹರ್‌ಪುರ ನಿವಾಸಿಗಳಾಗಿದ್ದು, ಮೂವರ ಸಾವಿನಿಂದ ಕುಟುಂಬಸ್ಥರು ರೋದಿಸುತ್ತಿದ್ದಾರೆ.

ಘಟನೆಯ ಕುರಿತು ಮಾಹಿತಿ ನಿಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪವನ್ ಕುಮಾರ್ ಗೌತಮ್, ಹಳಿಯ ಮೇಲೆ ರೀಲ್ಸ್​​ ಮಾಡುತ್ತಿದ್ದಾಗ, ರೈಲು ಡಿಕ್ಕಿಯಾಗಿ ಮೂವರು ಸಾವಿಗೀಡಾಗಿದ್ದಾರೆ. ಲಾಹರ್‌ಪುರ ಮೊಹಲ್ಲಾ ನಿವಾಸಿಗಳಾದ ಮೊಹಮ್ಮದ್ ಅಹ್ಮದ್ (26), ಪತ್ನಿ ಆಯೇಷಾ (24) ಮತ್ತು 3 ವರ್ಷದ ಮಗ ಅಬ್ದುಲ್ಲಾ ಪ್ರಾಣ ಕಳೆದುಕೊಂಡಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂದಿನ ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರೀಲ್ಸ್​ ಹುಚ್ಚು: ನೇಣು ಕುಣಿಕೆ ಬಿಗಿಯಾಗಿ ಬಾಲಕ, ಬೈಕ್​​ ಸ್ಟಂಟ್​ನಲ್ಲಿ ಯುವಕ ಸಾವು - Reels Craze

ETV Bharat Logo

Copyright © 2024 Ushodaya Enterprises Pvt. Ltd., All Rights Reserved.