ಭಾರತೀಯ ಮಹಿಳೆಯರು ಹೆಚ್ಚಾಗಿ ಧರಿಸುವ ಉಡುಪುಗಳಲ್ಲಿ ಸೀರೆಯದ್ದು ಮೊದಲ ಸ್ಥಾನ. ನಗರ, ಗ್ರಾಮೀಣ ಪ್ರದೇಶಗಳೆಂಬ ಭೇದವಿಲ್ಲದೆ ಬಹುತೇಕ ಮಹಿಳೆಯರು ಪ್ರತಿದಿನ ಸೀರೆ ಉಡುತ್ತಾರೆ. ಏಕೆಂದರೆ ಮಹಿಳೆಯರ ತುಂಬಾ ಅಂದವಾಗಿ ಕಾಣುವುದು ಸೀರೆಯಲ್ಲೇ ಅಲ್ವಾ!. ಆದಾಗ್ಯೂ, ತಮ್ಮ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ತುಂಬಾ ಶ್ರಮವಹಿಸುತ್ತಾರೆ. ಆದರೆ, ನಾವು ಸೀರೆಯನ್ನು ಉಡುವಾಗ ಮಾಡುವ ಕೆಲವು ತಪ್ಪುಗಳಿಂದ ಇಡೀ ಲುಕ್ ಹಾಳಾಗುತ್ತದೆ ಎನ್ನುತ್ತಾರೆ ಫ್ಯಾಷನ್ ತಜ್ಞರು. ಅಂದವಾಗಿ ಕಾಣುವಂತೆ ಸೀರೆ ಉಡಲು ಈ ತಪ್ಪುಗಳನ್ನು ಮಾಡುಬಾರದು. ಹಾಗಾದರೆ ಆ ತಪ್ಪುಗಳೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಫಿಜಿಕ್ಗೆ ಅನುಗುಣವಾಗಿ ಸೀರೆ ಆಯ್ಕೆ : ಎಲ್ಲವೂ ಸೀರೆಗಳೇ ಅಲ್ಲವೇ, ಎಲ್ಲರಿಗೂ ಸೆಟ್ ಆಗುತ್ತವೆ ಎಂದು ಅಂದುಕೊಳ್ಳಬೇಡಿ. ಸೀರೆಗಳನ್ನು ನಮ್ಮ ತೂಕ, ಎತ್ತರಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲು ತಜ್ಞರು ಸೂಚಿಸಿದ್ದಾರೆ. ಇದರಿಂದ ನೀವು ನೋಡಲು ಸುಂದರವಾಗಿ ಕಾಣುಸುತ್ತೀರಿ ಎಂದು ಹೇಳುತ್ತಾರೆ. ಅದೇ ರೀತಿ ಒಳಗೆ ಹಾಕಿಕೊಳ್ಳುವ ಪೆಟ್ಟಿಕೋಟ್, ಲಂಗಗಳು ಕೂಡ ಸೀರೆ ಬಣ್ಣಕ್ಕೆ ಮ್ಯಾಚಿಂಗ್ ಇರಬೇಕು. ಆಗ ಸೀರೆ ನೋಡಲು ಸುಂದರವಾಗಿ ಕಾಣಿಸುತ್ತಿದೆ. ಅಷ್ಟೇ ಅಲ್ಲ, ಸಂಪೂರ್ಣವಾಗಿ ಬೇರೆ ಬಣ್ಣದ ಪೆಟ್ಟಿಕೋಟ್, ಲಂಗಗಳು ಧರಿಸಿದರೆ ಸೀರೆ ನೋಡಲು ಸುಂದರವಾಗಿ ಕಾಣುವುದಿಲ್ಲ.
ಮ್ಯಾಚಿಂಗ್ ಇಲ್ಲದ ಬ್ಲೌಸ್: ಬಹುತೇಕ ಮಹಿಳೆಯರು ಮಾಡುವ ತಪ್ಪೆಂದರೆ ಮ್ಯಾಚಿಂಗ್ ಇಲ್ಲದ ಜಾಕೆಟ್ ಧರಿಸುವುದು. ಇದರಿಂದ ಸೀರೆಯ ಲುಕ್ ಸಂಪೂರ್ಣವಾಗಿ ಬದಲಾಗಿ ನೋಡಲು ಚೆನ್ನಾಗಿ ಕಾಣುವುದಿಲ್ಲ ಎಂದು ಹೇಳುತ್ತಾರೆ ಫ್ಯಾಷನ್ ತಜ್ಞರು. ಆದ್ದರಿಂದ, ಸೂಕ್ತವಾಗಿ ಮ್ಯಾಚಿಂಗ್ ಬ್ಲೌಸ್ ಧರಿಸಲು ಸೂಚಿಸುತ್ತಾರೆ ಅವರು. ಆದರೆ, ಪ್ರಸ್ತುತ ಕಾಂಟ್ರಾಸ್ಟ್ ಬ್ಲೌಸ್ ಟ್ರೆಂಡ್ ನಡೆಯುತ್ತಿದೆ. ಆದ್ದರಿಂದ ಸೀರೆಗಳಿಗೆ ಮ್ಯಾಚಿಂಗ್ ಇಲ್ಲದಿದ್ದರೆ ಇವುಗಳನ್ನು ಧರಿಸಬೇಕೆಂದು ಹೇಳುತ್ತಾರೆ. ಹೀಗಂತಾ ಹೇಳಿ ಯಾವುದು- ಯಾವುದೋ ಕಲರ್ ಅಲ್ಲದೇ ಸೀರೆಗೆ ಸೂಟ್ ಆಗುವ ಕಾಂಟ್ರಾಸ್ಟ್ ಬ್ಲೌಸ್ ಬಳಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.
ಸೇಫ್ಟಿ ಪಿನ್ನುಗಳು: ಬಹುತೇಕ ಮಹಿಳೆಯರು ಸೀರೆ ಉಡುವ ಸಮಯದಲ್ಲಿ ಸೇಫ್ಟಿ ಪಿನ್ಗಳನ್ನು ಹೆಚ್ಚಾಗಿ ಬಳಸುತ್ತಿರುತ್ತಾರೆ. ಆದರೆ, ಇವುಗಳನ್ನು ಅಗತ್ಯ ಇದ್ದ ಕಡೆ ಮಾತ್ರ ಹಾಗೂ ಕಡಿಮೆ ಬಳಸಬೇಕು ಅಂತಾರೆ ಫ್ಯಾಷನ್ ತಜ್ಞರು. ಇವುಗಳನ್ನು ಹೆಚ್ಚಾಗಿ ಬಳಸಿದರೆ ಸೀರೆಗಳ ಗುಣಮಟ್ಟ, ಅಂದ ಕಡಿಮೆಯಾಗುತ್ತದೆ ಎಂಬುದು ತಜ್ಞರ ಅಭಿಮತವಾಗಿದೆ.
ನೆರಿಗೆ: ಸೀರೆ ಉಡುವಾಗ ನೆರಿಗಗಳನ್ನು ಸರಿಯಾಗಿ ಹಾಕಿದರೆ ಸುಂದರವಾಗಿ ಕಾಣುತ್ತಾರೆ ಎಂದು ಫ್ಯಾಷನ್ ತಜ್ಞರು ಹೇಳುತ್ತಾರೆ. ನೆರಿಗೆಗಳನ್ನು ತುಂಬಾ ದೊಡ್ಡದಾಗಿ ಅಥವಾ ಚಿಕ್ಕದಾಗಿ ಅಲ್ಲದೇ ಮೀಡಿಯಂ ಸೈಸ್ನಲ್ಲಿರುವಂತೆ ನೋಡಿಕೊಳ್ಳುಬೇಕು. ಹೀಗೆ ಮಾಡುವುದರಿಂದ ಲುಕ್ ಆಕರ್ಷಕವಾಗಿರುತ್ತದೆ. ಹಾಗೆಯೇ ತುಂಬಾ ಮಂದಿ ನೆರಿಗೆಗಳನ್ನು ಹೇಗೆಗೋ ಮಾಡಿಕೊಂಡಿರುತ್ತಾರೆ. ಆ ರೀತಿ ಮಾಡದೆ ನಿಟಾಗಿ ಇಟ್ಟುಕೊಳ್ಳುವುದರಿಂದ ಹೊಟ್ಟೆ ಬಳಿ ಉಬ್ಬಿದಂತೆ ಕಾಣುವುದಿಲ್ಲ.
ಸೊಂಟದ ಬಳಿ ಸೀರೆ ಉಡುವುದು: ಕೆಲವರು ಸೀರೆಗಳನ್ನು ಸೊಂಟದಿಂದ ತೀರಾ ಕೆಳಕ್ಕೆ, ಇನ್ನು ಕೆಲವರು ಸೊಂಟದಿಂದ ತೀರಾ ಮೇಲೆ ಉಡುತ್ತಾರೆ. ಹೀಗೆ ಉಡುವುದರಿಂದ ನೋಡಲು ಚೆನ್ನಾಗಿ ಕಾಣುವುದಿಲ್ಲ. ಆದ್ದರಿಂದ, ಸೊಂಟದ ಮೇಲೆ ಇಲ್ಲವೇ ಸ್ವಲ್ಪ ಕೆಳಗೆ ಸೀರೆ ಉಡಬೇಕು.
ಆಭರಣ: ಸುಂದರವಾಗಿ ಕಾಣಬೇಕಾದರೆ ಸೀರೆಗಳಿಗೆ ಮ್ಯಾಚಿಂಗ್ ಬಟ್ಟೆಗಳೊಂದಿಗೆ ಜ್ಯುವೆಲರಿ ಕೂಡ ಬಹಳ ಮುಖ್ಯ. ಯಾವ ಸೀರೆಗೆ ಯಾವ ಆಭರಣ ಸೆಟ್ ಆಗುತ್ತವೆಯೋ ಅಂತಹವುಗಳನ್ನೇ ಬಳಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇವುಗಳ ಜೊತೆಗೆ ಸೀರೆಗಳ ಬಣ್ಣಕ್ಕೆ ಸರಿಯಾದ ಮ್ಯಾಚಿಂಗ್ ಫುಟ್ ವೇರ್ ಹಾಕಬೇಕೆಂದು ಹೇಳುತ್ತಾರೆ. ಇದರಿಂದ ಲುಕ್ ಎಲಿವೇಟ್ ಆಗುತ್ತಿದೆ ಎಂದು ಹೇಳುತ್ತಾರೆ ಅವರು.