ETV Bharat / bharat

ದೇವಸ್ಥಾನದಲ್ಲಿ ನೀಡುವ ಪ್ರಸಾದದಷ್ಟೇ ರುಚಿಯಾದ ಪುಳಿಯೊಗರೆ ಮನೆಯಲ್ಲೂ ಟ್ರೈ ಮಾಡಿ! - PULIYOGARE RECIPE

author img

By ETV Bharat Karnataka Team

Published : Jul 2, 2024, 4:24 PM IST

Updated : Jul 2, 2024, 7:47 PM IST

ಪುಳಿಯೊಗರೆ ಎಲ್ಲರಿಗೂ ಇಷ್ಟವಾಗುವ ಇನ್ಸ್​ಟಂಟ್ ಆಹಾರ. ರುಚಿ ರುಚಿಯಾದ ಪುಳಿಯೊಗರೆಯನ್ನು ಮನೆಯಲ್ಲೂ ತಯಾರಿಸಬಹುದು. ದೇವಸ್ಥಾನದಲ್ಲಿ ನೀಡುವ ಪ್ರಸಾದದಷ್ಟೇ ರುಚಿಯಾದ ಪುಳಿಯೊಗರೆ ಮನೆಯಲ್ಲೂ ಟ್ರೈ ಮಾಡಿ! ನೀವು ಈ ಚಿಕ್ಕ ಸಲಹೆಗಳನ್ನು ಅನುಸರಿಸಿ.

Puliyogare
ಪುಳಿಯೊಗರೆ (ETV Bharat)

ಪ್ರಸ್ತುತ ಚಿಲ್ಲರೆ ವ್ಯಾಪಾರದ ಅಂಗಡಿ, ಸೂಪರ್​ ಮಾರ್ಕೆಟ್​ಗಳಲ್ಲಿ ತರಹೇವಾರಿ ಬ್ರಾಂಡ್​​ಗಳ ಇನ್ಸ್​​ಟಂಟ್​ ಪುಳಿಯೊಗರೆ ಪ್ಯಾಕೆಟ್​ಗಳು ಸಿಗುತ್ತವೆ. ಇದು ಅತ್ಯವಸರ ಸಂದರ್ಭಗಳಲ್ಲಿ ಮಾಡಲು ಸುಲಭವಾದ ಆಹಾರ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಪುಳಿಯೊಗರೆ ಬಹುತೇಕ ಎಲ್ಲರಿಗೂ ಇಷ್ಟ. ಆದ್ರೆ ದೇವಸ್ಥಾನಗಳಲ್ಲಿ ಪ್ರಸಾದವಾಗಿ ಭಕ್ತರಿಗೆ ನೀಡುವ ಪುಳಿಯೊಗರೆಯ ರುಚಿಯೇ ಬೇರೆ ಆಗಿರುತ್ತದೆ. ಮನೆಯಲ್ಲಿ ಎಷ್ಟು ಬಾರಿ ಪುಳಿಯೊಗರೆ ಮಾಡಿದರೂ ಸಹ ಅದು ರುಚಿಸುವುದಿಲ್ಲ! ಈ ಸ್ಟೋರಿಯಲ್ಲಿ ದೇವಸ್ಥಾನದ ಶೈಲಿಯ ಪುಳಿಯೊಗರೆಯನ್ನು ಮನೆಯಲ್ಲಿ ಹೇಗೆ ತಯಾರಿಸಬೇಕೆಂಬುದನ್ನು ತಿಳಿಯೋಣ..

ಇದನ್ನೂ ಓದಿ: ಪುಸ್ತಕ ಓದುವುದು ಹೇಗೆ?: ಈ ಸಲಹೆಗಳನ್ನು ಪಾಲಿಸಿದ್ರೆ ಜ್ಞಾನಾರ್ಜನೆ ಗ್ಯಾರಂಟಿ! - BOOK READING TIPS

ಬೇಕಾಗುವ ಪದಾರ್ಥಗಳು:

  • ಅಕ್ಕಿ- 250 ಗ್ರಾಂ
  • ಹುಣಸೆಹಣ್ಣು- 50 ಗ್ರಾಂ
  • ಅರಿಶಿನ - ಟೀ ಸ್ಪೂನ್​
  • ಉಪ್ಪು - ರುಚಿಗೆ ತಕ್ಕಷ್ಟು
  • ಸ್ವಲ್ಪ ಕರಿಬೇವಿನ ಎಲೆಗಳು
  • ಹಸಿರು ಮೆಣಸಿನಕಾಯಿ - ಮೂರು
  • ಸಾಸಿವೆ - ಎರಡು ಚಮಚ
  • ಶುಂಠಿ - ಒಂದು ಸಣ್ಣ ತುಣುಕು
  • ಕರಿಮೆಣಸು - ಎರಡು
  • ಶುಂಠಿ ಪುಡಿ - ಒಂದು ಟೀ ಸ್ಪೂನ್​

ಮತ್ತೇನು ಸೇರಿಸಬೇಕು :

ಕಡಲೆಬೇಳೆ- 1/4 ಕಪ್, ಕಡಲೆಬೇಳೆ, ಶೇಂಗಾ- ತಲಾ ಒಂದು ಚಮಚ, ಕರಿಮೆಣಸು- ಐದು, ಸ್ವಲ್ಪ ಕರಿಬೇವಿನ ಸೊಪ್ಪು- ಎರಡು ಲವಂಗ, ಒಂದು ಚಿಟಿಕೆ ಇಂಗು, ಬೆಲ್ಲದ ಪುಡಿ- ಒಂದು ಚಮಚ.

ಪುಳಿಯೊಗರೆ ತಯಾರಿಸುವ ವಿಧಾನ:

  • ಮೊದಲು ಅಕ್ಕಿಯನ್ನು ತೊಳೆದು ಅದನ್ನು ಬೇಯಿಸಿ.
  • ನಂತರ ಹುಣಸೆ ಹಣ್ಣನ್ನು ನೀರಿಗೆ ಹಾಕಿ ಕುದಿಸಿ.
  • ಅನ್ನ ಬಿಸಿಯಾಗಿರುವಾಗ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ. ಅನ್ನಕ್ಕೆ ಕರಿಬೇವಿನ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಕೂಡ ಸೇರಿಸಿ.
  • ಜೊತೆಗೆ ಸ್ವಲ್ಪ ಶೇಂಗಾ ಎಣ್ಣೆ ಅಥವಾ ಎಳ್ಳೆಣ್ಣೆ ಸೇರಿಸಿ
  • ಈಗ ಮಿಕ್ಸಿಂಗ್ ಬೌಲ್‌ನಲ್ಲಿ ಒಂದು ಚಮಚ ಸಾಸಿವೆ, ಶುಂಠಿ, ಕರಿಮೆಣಸು ಮತ್ತು ಉಪ್ಪನ್ನು ಸೇರಿಸಿ ಮತ್ತು ನಯವಾದ ಪೇಸ್ಟ್ ಮಾಡಿ.
  • ಒಲೆಯ ಮೇಲೆ ಕಡಾಯಿ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ ಮತ್ತು ಸ್ವಲ್ಪ ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ.
  • ಇದರಲ್ಲಿ ಹುಣಸೆಹಣ್ಣಿನ ತಿರುಳನ್ನು ಸೇರಿಸಿ ಮತ್ತು ಅದು ಗಟ್ಟಿ ಆಗುವವರೆಗೆ ಕುದಿಸಿ. (ಅದರಲ್ಲಿನ ನೀರಿನಂಶ ಖಾಲಿ ಆಗೋರೆಗೆ)
  • ನಂತರ ಈ ಮಿಶ್ರಣಕ್ಕೆ ಬೆಲ್ಲದ ಪುಡಿ ಸೇರಿಸಿ ಮಿಶ್ರಣ ಮಾಡಿ. ಬೆಲ್ಲವನ್ನು ಸೇರಿಸುವುದರಿಂದ ಪುಳಿಯೊಗರೆ ಹೆಚ್ಚು ಹುಳಿಯಾಗುವುದಿಲ್ಲ.
  • ಈ ಮಿಶ್ರಣ ಗಟ್ಟಿಯಾದ ನಂತರ ಸಾಸಿವೆ ಪೇಸ್ಟ್ ಹಾಕಿ ಬೇಯಿಸಿ.
  • ಈಗ ಅದಕ್ಕೆ ಆರಿದ ಅನ್ನವನ್ನು ಸೇರಿಸಿ

ಮತ್ತಷ್ಟು ರುಚಿಗೆ.. ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ. ಕಡಲೆಬೇಳೆ, ಉದ್ದಿನಬೇಳೆ ಮತ್ತು ಕಾಳುಗಳನ್ನು ಸೇರಿಸಿ. ಕರಿಮೆಣಸು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ.

ಇದನ್ನೂ ಓದಿ: ಮೃತ ಮಗಳ‌ ಹೆಸರಲ್ಲಿ 600 ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ ದಾನ: ಸಂಬಳವನ್ನೇ ಮೀಸಲಿಟ್ಟಿರುವ ASI ಲೋಕೇಶಪ್ಪ - Donation in daughter name

ಹೀಗೆ ಮಾಡಿದರೆ, ರುಚಿಕಟ್ಟಾದ ಪುಳಿಯೊಗರೆ ಸಿದ್ಧವಾಗುತ್ತದೆ. ಇದನ್ನು ಮನೆಯಲ್ಲಿ ಕುಟುಂಬ ಸಮೇತ ಸೇವಿಸಿ. ಮತ್ತೇಕೆ ತಡ.. ನೀವೇ ಪುಳಿಯೊಗರೆಯನ್ನು ತಯಾರಿಸಿ ಈ ರುಚಿಯನ್ನು ಸವಿಯಿರಿ..

ಇದನ್ನೂ ಓದಿ:ಆಹಾ.. ಗರಿ ಗರಿ ರವಾ ದೋಸೆ - ತಯಾರಿ ತುಂಬಾ ಸುಲಭ - ಶೇಂಗಾ ಚಟ್ನಿ ಜೊತೆ ಸವಿದ್ರೆ ರುಚಿಯೇ ಬೇರೆ! - CRISPY RAVA DOSA RECIPE

Last Updated : Jul 2, 2024, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.