ಹೈದರಾಬಾದ್(ತೆಲಂಗಾಣ): ಪ್ರೀಲಾಂಚ್ ಆಫರ್ ಹೆಸರಲ್ಲಿ ಕಡಿಮೆ ಬೆಲೆಗೆ ವಿಲ್ಲಾ ಮತ್ತು ಫ್ಲ್ಯಾಟ್‌ಗಳನ್ನು ಮಾರಾಟ ಮಾಡುವುದಾಗಿ ಹೇಳಿ ಸುಮಾರು 60 ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ಹೈದರಾಬಾದ್ನ ಜಿಎಸ್‌ಆರ್ ಇನ್ಫ್ರಾ ವ್ಯವಸ್ಥಾಪಕ ನಿರ್ದೇಶಕ ಜಿ.ಶ್ರೀನಿವಾಸ್ ರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮನೆ ನಿರ್ಮಾಣದ ಹೊಸ ಯೋಜನೆ ಆರಂಭಿಸುತ್ತಿದ್ದು, ಇದು ಮೂರು ವರ್ಷದೊಳಗೆ ಪೂರ್ಣಗೊಳ್ಳಲಿದೆ. ಪ್ರೀಲಾಂಚ್ ಆಫರ್ ಆಗಿ ಕಡಿಮೆ ಬೆಲೆಗೆ ವಿಲ್ಲಾ ಮತ್ತು ಫ್ಲ್ಯಾಟ್‌ಗಳನ್ನು ನೀಡಲಾಗುತ್ತದೆ ಎಂದ ನಂಬಿಸಿ ಶ್ರೀನಿವಾಸ್ ಗ್ರಾಹಕರಿಂದ ಹಣ ಪಡೆದಿದ್ದರು. ಆದರೆ, ಯಾವುದೇ ಕಾಮಗಾರಿಯನ್ನೂ ಆರಂಭಿಸದೆ, ಗ್ರಾಹಕರಿಗೆ ಮರಳಿ ಹಣವನ್ನೂ ನೀಡದೆ ಸತಾಯಿಸುತ್ತಿದ್ದರು ಎಂದು ಸೈಬರಾಬಾದ್ ಪೊಲೀಸ್ ಆಯುಕ್ತಾಲಯದ ಆರ್ಥಿಕ ಅಪರಾಧ ದಳದ ಡಿಸಿಪಿ ಕೆ.ಪ್ರಸಾದ್ ತಿಳಿಸಿದ್ದಾರೆ.