ETV Bharat / bharat

ನನ್ನ ತತ್ವ, ಆದರ್ಶಗಳಿಗೆ ಸಂದ ಗೌರವ: ಭಾರತ ರತ್ನ ಪ್ರಶಸ್ತಿ ಬಗ್ಗೆ ಎಲ್​ಕೆ ಅಡ್ವಾಣಿ ಮಾತು - ಎಲ್​ಕೆ ಅಡ್ವಾಣಿಗೆ ಭಾರತ ರತ್ನ ಗೌರವ

ಭಾರತ ರತ್ನ ಪ್ರಶಸ್ತಿಯು ನನ್ನ ಜೀವನದುದ್ದಕ್ಕೂ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ಶ್ರಮಿಸಿದ ಆದರ್ಶ ಮತ್ತು ತತ್ವಗಳಿಗೆ ಸಂದ ಗೌರವ ಎಂದು ಎಲ್​ಕೆ ಅಡ್ವಾಣಿ ಹೇಳಿದ್ಧಾರೆ.

Honour For Ideals and Principles I Strove To Serve LK Advani on being conferred Bharat Ratna
ನನ್ನ ತತ್ವ, ಆದರ್ಶಗಳಿಗೆ ಸಂದ ಗೌರವ: ಭಾರತ ರತ್ನ ಪ್ರಶಸ್ತಿ ಬಗ್ಗೆ ಎಲ್​ಕೆ ಅಡ್ವಾಣಿ ಮಾತು
author img

By ETV Bharat Karnataka Team

Published : Feb 3, 2024, 8:59 PM IST

Updated : Feb 3, 2024, 10:28 PM IST

ನವದೆಹಲಿ: ಭಾರತ ರತ್ನ ಪ್ರಶಸ್ತಿಯು ಒಬ್ಬ ವ್ಯಕ್ತಿಯಾಗಿ ನನಗೆ ಮಾತ್ರವಲ್ಲದೆ, ನನ್ನ ಜೀವನದುದ್ದಕ್ಕೂ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ಶ್ರಮಿಸಿದ ಆದರ್ಶ ಮತ್ತು ತತ್ವಗಳಿಗೆ ಸಂದ ಗೌರವವಾಗಿದೆ ಎಂದು ಮಾಜಿ ಉಪಪ್ರಧಾನಿ, ಬಿಜೆಪಿ ಹಿರಿಯ ನಾಯಕ ಲಾಲ್​ಕೃಷ್ಣ ಅಡ್ವಾಣಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನಕ್ಕೆ ತಮ್ಮ ಹೆಸರನ್ನು ಘೋಷಿಸಿದ ಬೆನ್ನಲ್ಲೇ ಅಡ್ವಾಣಿ ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅತ್ಯಂತ ನಮ್ರತೆ ಮತ್ತು ಕೃತಜ್ಞತೆಯಿಂದ ಇಂದು ನನಗೆ ನೀಡಲಾದ ಭಾರತ ರತ್ನವನ್ನು ನಾನು ಸ್ವೀಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ. ನನಗೆ ವಹಿಸಿದ ಕಾರ್ಯವನ್ನು ನನ್ನ ಪ್ರೀತಿಯ ದೇಶಕ್ಕಾಗಿ ಸಮರ್ಪಿತ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ ಎಂದು ಅಡ್ವಾಣಿ ತಿಳಿಸಿದ್ದಾರೆ.

ಈ ಜೀವ ನನ್ನದಲ್ಲ. ನನ್ನ ಜೀವ ನನ್ನ ರಾಷ್ಟ್ರಕ್ಕಾಗಿ ಎಂಬ ಧ್ಯೇಯವಾಕ್ಯವೇ ನನ್ನ ಜೀವನಕ್ಕೆ ಸ್ಫೂರ್ತಿಯಾಗಿದೆ. ಭಾರತ ರತ್ನ ಪುರಸ್ಕೃತರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಮತ್ತು ಗೌರವಕ್ಕೆ ಪಾತ್ರರಾದ ಆ ಇಬ್ಬರು ವ್ಯಕ್ತಿಗಳನ್ನು ಇಂದು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಭಾರತ ರತ್ನ ಗೌರವ ಸಲ್ಲಿಸಿದ್ದಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿರುವ ಅಡ್ವಾಣಿ, ಲಕ್ಷಾಂತರ ಬಿಜೆಪಿ ಕಾರ್ಯಕರ್ತರು, ಆರ್​ಎಸ್​​ಎಸ್​​ ಸ್ವಯಂಸೇವಕರು ಮತ್ತು ತಮ್ಮ ಸಾರ್ವಜನಿಕ ಜೀವನದಲ್ಲಿ ತಮ್ಮೊಂದಿಗೆ ಕೆಲಸ ಮಾಡಿದವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಜೊತೆಗೆ ನನ್ನ ಕುಟುಂಬದ ಎಲ್ಲ ಸದಸ್ಯರಿಗೆ, ವಿಶೇಷವಾಗಿ ಅಗಲಿದ ನನ್ನ ಪ್ರೀತಿಯ ಪತ್ನಿ ಕಮಲಾ ಅವರಿಗೆ ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ. ಕಮಲಾ ನನ್ನ ಜೀವನದ ಶಕ್ತಿಯ ದೊಡ್ಡ ಮೂಲ. ನಮ್ಮ ಭವ್ಯವಾದ ದೇಶವು ಶ್ರೇಷ್ಠತೆ ಮತ್ತು ವೈಭವದ ಉತ್ತುಂಗಕ್ಕೇರಲಿ ಎಂದು ಆಶಿಸಿದ್ದಾರೆ.

96 ವರ್ಷದ ವಯಸ್ಸಿನ ಎಲ್​ಕೆ ಅಡ್ವಾಣಿ 1927ರ ನವೆಂಬರ್ 8ರಂದು ಇಂದಿನ ಪಾಕಿಸ್ತಾನದ ಕರಾಚಿಯಲ್ಲಿ ಕಿಶನ್‌ಚಂದ್ ಮತ್ತು ಜ್ಞಾನಿದೇವಿ ದಂಪತಿಗೆ ಜನಿಸಿದ್ದರು. ತಮ್ಮ 14ನೇ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ಕ್ಕೆ ಸ್ವಯಂಸೇವಕರಾಗಿ ಸೇರಿದ್ದರು. ದೇಶ ವಿಭಜನೆಯ ಸಮಯದಲ್ಲಿ 1947ರ ಸೆಪ್ಟೆಂಬರ್ 12ರಂದು ಸಿಂಧ್‌ನಿಂದ ದೆಹಲಿಗೆ ಬಂದಿದ್ದರು. ಬಿಜೆಪಿಯಲ್ಲಿ ಪಕ್ಷದ ಅಧ್ಯಕ್ಷರಾಗಿ ಸುದೀರ್ಘ ಕಾರ್ಯ ನಿರ್ವಹಿಸಿದ್ದಾರೆ. ಕೇಂದ್ರದಲ್ಲಿ ಗೃಹ ಸಚಿವರಾಗಿ ಮತ್ತು ಉಪ ಪ್ರಧಾನಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಎಲ್.ಕೆ. ಅಡ್ವಾಣಿಗೆ ಭಾರತ ರತ್ನ ಘೋಷಣೆ: ಪ್ರಧಾನಿ ಮೋದಿ ಅಭಿನಂದನೆ

Last Updated : Feb 3, 2024, 10:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.